-->
ಕವನಗಳ ರಚನೆ : ದೀಕ್ಷಾ ಎಂ.ಡಿ, 10ನೇ ತರಗತಿ

ಕವನಗಳ ರಚನೆ : ದೀಕ್ಷಾ ಎಂ.ಡಿ, 10ನೇ ತರಗತಿ

ಕವನಗಳ ರಚನೆ : ದೀಕ್ಷಾ ಎಂ.ಡಿ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
                         
     
      ಪರಿಸರ ಕಾಳಜಿ - ಕವನ

ನಮ್ಮ ಸುತ್ತಲಿರುವುದು 
ಸುಂದರವಾದ ಪರಿಸರ
ಅಲ್ಲಿರುವುದು ಪ್ರಾಣಿ ಪಕ್ಷಿ ಗಿಡಮರ..
ಪರಿಸರ ನೀಡುವುದು 
ಶುಭ್ರ ವಾತಾವರಣವನ್ನು
ಅದೇ ನಮ್ಮ ನಿಮ್ಮೆಲ್ಲರ 
ಮುಂದಿನ ಪೀಳಿಗೆಯ ಕಣ್ಣು..
ಪರಿಸದಲ್ಲಿ ನಡೆಯುತ್ತಿದೆ 
ವಿವಿಧ ರೀತಿಯ ಮಾಲಿನ್ಯ
ಇದನ್ನು ತಡೆಗಟ್ಟಲು 
ಬೆಳೆಸೋಣ ಅರಣ್ಯ..
ಪ್ಲಾಸ್ಟಿಕ್, ತ್ಯಾಜ್ಯಗಳನ್ನು 
ಅಲ್ಲಲ್ಲಿ ಎಸೆಯದಿರಿ
'ಸ್ವಚ್ಛ ಭಾರತ' ನಮ್ಮೆಲ್ಲರ ಕನಸು 
ಎಂದು ಮರೆಯದಿರಿ....!!
ಮನೆಯ ಸುತ್ತಲೂ ಗಿಡ, ಮರ, 
ಬಳ್ಳಿಯ ನೆಟ್ಟು ಬೆಳೆಸಿ
ಪರಿಸರ ಸೌಂದರ್ಯವನ್ನು 
ಮತ್ತಷ್ಟು ಮೆರೆಸಿ....!!
ಎಷ್ಟು ಚಂದ ಈ ಪ್ರಕೃತಿಯ ನೋಟ..!
ಅಲ್ಲಿ ನಾವು ಕಲಿಯುವೆವು ವಿವಿಧ ಪಾಠ...!!
ಗಿಡಮರವನ್ನು ನೆಟ್ಟು ಬೆಳೆಸಿ
ಜೀವ ಸಂಕುಲವನ್ನು ರಕ್ಷಿಸಿ..
ಹಸಿರಿನಿಂದ ಕಂಗೊಳಿಸಲಿ ಪರಿಸರ
ಇದಕ್ಕಾಗಿ ಶ್ರಮಿಸೋಣ ನಿರಂತರ....!!
............................................. ದೀಕ್ಷಾ ಎಂ.ಡಿ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************                 ಸಮಯ - ಕವನ

ಏನೆಂದು ಹೇಳಲಿ ಈ ನಿನ್ನ ವೇಗಕೆ..
ನಿನ್ನ ನೋಡದಿದ್ದರೆ ಸಮಾಧಾನ ಆಗದು 
ಈ ನನ್ನ ಮನಕೆ....!!
       ಬದಲಾಗುವೆ ನೀನು ಪ್ರತಿ ಕ್ಷಣ..
       ನೀ ಇಲ್ಲದಿದ್ದರೆ ನಡೆಯದು ಈ
       ಮನುಷ್ಯ ಜೀವನ....!!
ಪ್ರತಿ ನಿಮಿಷವೂ ಕಲಿಸಿತು ಒಂದೊಳ್ಳೆ ನೀತಿ..
ಆದ್ದರಿಂದಲೇ ನನಗೆ ನಿನ್ನ ಮೇಲೆ ಪ್ರೀತಿ..
        ದಿನದಿಂದ ದಿನ ಕಳೆದು
        ಬದಲಾದವು ಮಾಸ..
        ಸೃಷ್ಟಿಸಿತು ಸ್ವರ್ಣವಾದಂತಹ
        ಒಂದು ಇತಿಹಾಸ..
ಅನುಕ್ಷಣವೂ ವರ್ಣನಾತೀತ 
ಎಂದು ನಾ ಹೇಳುವೆ..
ಏಕೆಂದರೆ ಒಂದಿಷ್ಟು ಸಿಹಿ - ಕಹಿ ನೆನಪುಗಳ ತಿಜೋರಿಯ ಕೊಟ್ಟಿರುವೆ....!!
         ಕೊನೆಯದಾಗಿ ಪ್ರತಿ ದಿನ ನನ್ನ 
         ಕಣ್ಣೆದುರು ಬಾ ಎಂದು ಕೇಳುವೆ..
         ನಿನ್ನ ಪ್ರಾಮುಖ್ಯತೆಯ ತಿಳಿದು 
         ಬದುಕಲು ಕಲಿಯುವೆ....!!
............................................. ದೀಕ್ಷಾ ಎಂ.ಡಿ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************    


ಕುವೆಂಪು - ಕವನ

ಕನ್ನಡ ಸಾಹಿತ್ಯ ಲೋಕದ 
ದಿಗ್ಗಜರಲಿ ಒಬ್ಬರು..
ಎಲ್ಲಾ ಕನ್ನಡಾಭಿಮಾನಿಗಳ 
ಬಾಯಲ್ಲಿ ಇವರದೇ ಹೆಸರು....!!
        ಸ್ವರ್ಣವಾದಂತ ಲಿಪಿಗಳಲಿ
        ಬರೆದಿಡಬಹುದಾದಂತ ಸಾಧನೆ ನಿಮ್ಮದು..
        ನಿಮ್ಮ ಕೊಡುಗೆಗಳ ವರ್ಣಿಸಲು
        ಪದಗಳೇ ಸಾಲದು....!!
ಕನ್ನಡದ ಕಂಪನ್ನು ಮತ್ತಷ್ಟು 
ಪಸರಿಸಿದವರು ಕುವೆಂಪು..
ಇವರ ಕೃತಿಗಳನ್ನು ಓದಿದಾಗ 
ಮನಸ್ಸಿಗಾಗುವುದು ತಂಪು....!!
         ನೀವು ಹುಟ್ಟಿದ ಪುಣ್ಯ ಮಣ್ಣು
         ಕುಪ್ಪಳ್ಳಿ....
         ನಿಮ್ಮಂತಹ ಮಹಾಧೀಮಂತರನ್ನು ಪಡೆದ
         ಕನ್ನಡಿಗರು ಬೇರೆಲ್ಲಿ....?
ನೀವು ನುಡಿದಿರಂದು ಮುತ್ತಿನಂತ ಮಾತು..
ಇಂದಿನ ಯುವಜನತೆಗೆ ಬೇರೇನೂ ಬೇಡ ಸಾತು..
ನೀವು ಎಲ್ಲಾ ವಿಷಯಗಳಿಗೂ ಸೈ....
ಹಾಗಾಗಿ ನಿಮಗೆ ನನ್ನದೊಂದು ಜೈ....!!
............................................. ದೀಕ್ಷಾ ಎಂ.ಡಿ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************    


ಮುಂಜಾನೆ - ಕವನ

ರವಿ ತಾ ಏರುವನು ಮೂಡಣ ದಿಸೆಯಲಿ..
ಮಧುರವಾಗಿ ಕೇಳಿಸುತಿತ್ತು ಬಾನಲಿ ಹಾರಾಡುತಿಹ ಹಕ್ಕಿಗಳ ಚಿಲಿಪಿಲಿ...
           ಹೂದೋಟದಲಿ ಅರಳುತಿಹವು 
           ಬಣ್ಣ ಬಣ್ಣದ ಸುಮಗಳು...
           ಹಸಿದ ಹೊಟ್ಟೆಯಿಂದ
           ಬೊಬ್ಬಿರಿದು ಕರೆಯುತಿತ್ತು ಆಕಳು...!!
ತಮ್ಮ ತಮ್ಮ ಉದ್ಯೋಗಗಳಿಗೆ 
ಹೊರಡುವರು ಜನರು..
ಈ ಸೃಷ್ಟಿ ಲೀಲೆಯ 
ಸವಿಯುವವರಾರು...?
            ವಿಶಾಲಾಗಸವ ಮರೆಮಾಡಿತು 
            ಈ ದೃಶ್ಯವು...
            ಬೀಜ ಮೊಳಕೆಯೊಡೆಯಲು
            ಕ್ಷಿಪ್ರವಾಗಿ ಸಸ್ಯಗಳು
            ಬೆಳೆಯುವವು....!!
ಅನುದಿನ ಕಣ್ತುಂಬಿಕೊಳ್ಳುವೆ 
ಈ ವಿಸ್ಮಯವ ನಾ..
ಯಾಕೆಂದು ತಿಳಿಯದು ಇದಕ್ಕೆ ಕಾರಣ..?
              ಈ ಕ್ಷಣದಲಿ ಹರಿದು ಬರುವ     
              ಕಲ್ಪನೆಗಳಿಗೆ ಇರದು ಎಣೆ..
              ಇಂತಹ ಬೇರಾವ ಪ್ರಕೃತಿ
              ಸೊಬಗ ನಾ ಕಾಣೆ...
............................................. ದೀಕ್ಷಾ ಎಂ.ಡಿ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************    

Ads on article

Advertise in articles 1

advertising articles 2

Advertise under the article