ನಾ ಕಂಡ ಬಾಲಕಾರ್ಮಿಕತೆ - ಲೇಖನ : ರಂಜಿತಾ ಶೇತಸನದಿ
Sunday, May 14, 2023
Edit
ಲೇಖನ : ರಂಜಿತಾ ಶೇತಸನದಿ
ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತೆ
ದ್ವಿತೀಯ ಪಿಯುಸಿ
ಕರ್ನಾಟಕ ವಿದ್ಯಾಲಯ ಧಾರವಾಡ ಕಾಲೇಜು
ಧಾರವಾಡ ಜಿಲ್ಲೆ
ಬಾಲಕಾರ್ಮಿಕತೆ ಎನ್ನುವುದು ಒಂದು ಸಮಾಜದ ಅನಿಷ್ಟ ಪದ್ಧತಿಯಾಗಿದ್ದು 1986 ರಲ್ಲಿ ನಮ್ಮ ಸರ್ಕಾರ ನಿಷೇಧ ಮತ್ತು ನಿಯಂತ್ರಣ ಮಾಡಿದ್ದು ಪ್ರತಿ ವರ್ಷ ಜೂನ್ 12ರಂದು ವಿಶ್ವ ಬಾಲ ಕಾರ್ಮಿಕ ನಿಷೇಧ ದಿನವೆಂದು ಆಚರಣೆ ಮಾಡುತ್ತಿದ್ದೇವೆ. ನನ್ನ ಪ್ರಕಾರ ಇಂದಿಗೂ ಇದು ಸಂಪೂರ್ಣವಾಗಿ ನಿರ್ಮೂಲನೆ ಆಗಿಲ್ಲ. ಇಂದು ನಾನೆ ಕಂಡ ಪ್ರಕಾರ 14ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ. ನಾನೆ ಕಂಡ ನಾಲ್ಕು ಜನ ಬಾಲ ಕಾರ್ಮಿಕರೆಂದರೆ ರಾಮ್, ವಿನಯ, ವಿಜಯ್ ಮತ್ತು ಹೇಮಾವತಿ ಇವರ ವಯಸ್ಸು 15 ವರ್ಷದ ಒಳಗೆ ಎಂದು ನಾ ತಿಳಿದುಕೊಂಡೆ. ಇವರು ಮೂಲತಃ ಆಂಧ್ರಪ್ರದೇಶದವರು. ಇವರ ತಂದೆ ಮತ್ತು ತಾಯಿ ಇಬ್ಬರು ಕಾರ್ಮಿಕರಾಗಿದ್ದು ಕೆಲಸದ ಮೇಲೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದು ಅನಿವಾರ್ಯವಾಗಿದ್ದು ಜೊತೆಗೆ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈ ಒಂದು ಕಾರಣದಿಂದ ಈ ನಾಲ್ಕು ಜನ ಮಕ್ಕಳು ಶಿಕ್ಷಣದಿಂದ ವಂಚಿತರಗಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ (Crime) ಅಂದರೆ Child Rights And You ವರದಿಯ ಪ್ರಕಾರ ಭಾರತದಲ್ಲಿ 5ರಿಂದ 6ವರ್ಷದ ಒಳಗಿನ 8ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿದ್ದು ಈ ವರದಿಯ ಪ್ರಕಾರ 5 ಲಕ್ಷ ಮಕ್ಕಳು ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆ ಒಂದು ಪೈಕಿಯಲ್ಲಿ ಈ ನಾಲ್ಕು ಜನ ಮಕ್ಕಳು ಹೌದು. ILO ದ ಈ ಮೂಲಭೂತ ನಿರ್ಣಯಗಳ ಪೈಕಿ 138 ನೇ ನಿರ್ಣಯ ಮಕ್ಕಳು ಉದ್ಯೋಗಕ್ಕೆ ಸೇರುವ ವಯಸ್ಸಿಗೆ ಸಂಬಂಧಿಸಿದ್ದಾಗಿದ್ದು 14 ವರ್ಷದ ಒಳಗಿನ ಮಕ್ಕಳು ಶಾಲೆಗೆ ಹೋಗದೆ ಕಾರ್ಖಾನೆ, ಗಣಿ ಇತ್ಯಾದಿ ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಬಾಲ ಕಾರ್ಮಿಕತೆ ಎಂದು ಕರೆಯುತ್ತೇವೆ. ಈ ಒಂದು ಸಾಲಿನಲ್ಲಿ ಈ ನಾಲ್ಕು ಜನ ಮಕ್ಕಳು ಹೌದು. ಈ ನಾಲ್ಕು ಜನ ಮಕ್ಕಳು ಶಿಕ್ಷಣದಿಂದ ಮಾತ್ರ ಅಲ್ಲ ಉತ್ತಮ ಆರೋಗ್ಯದಿಂದ ಸಹ ವಂಚಿತರಾಗಿದ್ದು, ಪೌಷ್ಟಿಕ ಆಹಾರ ದೊರೆಯದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಒಂದು ಬಾಲ ಕಾರ್ಮಿಕತೆ ಎನ್ನುವುದು ಅವರ ಶಿಕ್ಷಣಕ್ಕೆ ಮಾತ್ರವಲ್ಲ ಆರೋಗ್ಯದ ಮೇಲೆ ಹೊಡೆತ ಕೊಡುತ್ತದೆ. ಉಂಡು ಆಡಿ ಬೆಳೆಯುವ ಈ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಶಿಕ್ಷಣ, ಉತ್ತಮ ಆರೋಗ್ಯ, ಮನೋರಂಜನಾ ಆಟಗಳಿಂದ ಇಂದಿಗೂ ಈ ನಾಲ್ಕು ಜನ ಮಕ್ಕಳು ದೂರ ಉಳಿದಿದ್ದಾರೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಆದಕಾರಣ ಅವರಿಗೆ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಬಾಲಕಾರ್ಮಿಕರನ್ನು ಭಾರತದ ಉತ್ತಮ ಪ್ರಜೆಯನ್ನಾಗಿ ಮತ್ತು ಉತ್ತಮ ಸಾಧಕರನ್ನಾಗಿ ಮಾಡಬೇಕಾಗಿದೆ.
ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತೆ
ದ್ವಿತೀಯ ಪಿಯುಸಿ
ಕರ್ನಾಟಕ ವಿದ್ಯಾಲಯ ಧಾರವಾಡ ಕಾಲೇಜು
ಧಾರವಾಡ ಜಿಲ್ಲೆ
******************************************