-->
ಕವನಗಳ ರಚನೆ : ಗಂಗಾ ಗೊಂದಿ , ದ್ವಿತೀಯ ಪಿ.ಯು.ಸಿ

ಕವನಗಳ ರಚನೆ : ಗಂಗಾ ಗೊಂದಿ , ದ್ವಿತೀಯ ಪಿ.ಯು.ಸಿ

ಕವನಗಳ ರಚನೆ : ಗಂಗಾ ಗೊಂದಿ
ದ್ವಿತೀಯ ಪಿ.ಯು.ಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ ಜಿಲ್ಲೆ
    

ಬದುಕು ಪ್ರೀತಿಯ ಕಲಿಸಿ 
ಸತ್ಯ ಮಾರ್ಗದಲಿ ಬೆಳಸಿ  
ಸರಿಯಾದ ಶಿಕ್ಷಣ ಕೊಡಿಸಿ 
ಭವ್ಯ ಪಥದಲ್ಲಿ ಮುನ್ನಡೆಸಿ
ಎಂದೆಂದಿಗೂ ಸ್ಪೂರ್ತಿಯಾಗಿರುವ 
ರುವಾರಿ ನನ್ನಪ್ಪ....!! 
     ಕರಗದಷ್ಟು ಪ್ರೀತಿ ಅನ್ನೋ 
     ಆಸ್ತಿ ಕೊಟ್ವ ಸಾಹುಕಾರ 
     ಮಡದಿ ಮಕ್ಕಳ ಪ್ರೀತಿಯಿಂದ
     ಮನಸ್ಸು ಗೆದ್ದ ವಾರಸುದಾರ
     ಎಲ್ಲರ ಕಷ್ಟ-ಸುಖದಲ್ಲಿ  
     ಹೆಗಲು ಕೊಡುವ ಪಾಲುಗಾರ
     ಮಕ್ಕಳ ಖುಷಿಯಲ್ಲಿ ತನ್ನ ನೋವನ್ನು
     ಮರಿಯುವ ಸಾಹುಕಾರ 
    ತಪ್ಪು ಹಾದಿಯ ತಿದ್ದಿ ಹೇಳೊ 
    ಮಾರ್ಗದರ್ಶಕ ಇವ ಸಲಹೆಗಾರ
ನಾ ಬರಲು ಈ ಜಗಕೆ ಕಾರಣ ನೀನು
ಹೆತ್ತಮ್ಮ ಲಾಲಿಸಿದರೆ ಪಾಲಿಸಿದೆ ನೀನು
ಕೋರಿಕೆ ಹೆಚ್ಚಾಗಿ ಕಾಡಿದರೂ ನಾನು
ಸಿಡಿಮಿಡಿಗೊಳ್ಳದೆ ಪೂರೈಸಿದೆ ನೀನು
ಏಳ್ಗೆಯನು ಕೊಂಡಾಡಿ ನಲಿಯುತಿಹೆ ನೀನು...!! 
.......................................... ಗಂಗಾ ಗೊಂದಿ
ದ್ವಿತಿಯ ಪಿ.ಯು.ಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ ಜಿಲ್ಲೆ
********************************************

           
ಉಸಿರು ಕೊಟ್ಟು ಜೀವ ಉಳಿಸಿದಳು
ತುತ್ತು ಕೂಟ್ಟು ಮುತ್ತು ಇಟ್ಟಳು 
ರಕ್ತ ಬಸಿದು ಹಾಲು ಉಣಿಸಿದಳು
ನಮಗಾಗಿ ತನ್ನ ಜೀವವನ್ನೇ ಮುಡಿಪಿಟ್ಟಳು 
      ನವಮಾಸದ ನೋವು ನೀನು ಉಂಡೆ
      ನಮ್ಮ ನೋವಿನಲ್ಲಿ ಪಾಲು ತೆಗೆದುಕೊಂಡೆ
      ಕಣ್ಣಲ್ಲಿ - ಕಣ್ಣಿಟ್ಟು ಕಾಪಾಡಿಕೊಂಡೆ
      ಕಣ್ಣೀರು ಸೋಕದ ಹಾಗೆ ನೋಡಿಕೊಂಡೆ 
      ಮಕ್ಕಳ ಮುಖದಲ್ಲೇ ಖುಷಿಯ ಕಂಡಳು
      ದುಷ್ಟರನ್ನು ಕಂಡರೆ 
      ದುರ್ಗೆಯಂತೆ ಸಿಡಿಯುವಳು
      ಸೋಲಿಸಬೇಕು ಎನ್ನುವರ ಮುಂದೆ 
      ಗೆಲ್ಲುವ ಛಲ ಹುಟ್ಟಸಿದಳು
      ನಮಗಾಗಿ ಮನದಲ್ಲೇ 
      ಕನಸಿನ ಗೋಪುರ ಕಟ್ಟಿದಳು....!!
ತಂದೆಗಿಂತ ದೊಡ್ಡ ವೈದ್ಯರಿಲ್ಲ
ತಾಯಿಗಿಂತ ದೊಡ್ಡ ಔಷದಿ ಇಲ್ಲ
ಇವರ ಆಶೀರ್ವಾದದ ಮುಂದೆ ಏನೂ ಇಲ್ಲ...!!
ನಿಮ್ಮಿಬ್ಬರ ಪ್ರೀತಿ - ಚಿಲುಮೆಗೆ 
ಯಾರೂ ಸರಿ - ಸಾಟಿ ಇಲ್ಲ
ಅಮ್ಮಾ ನಿನ್ನ ಈ ಪುಟ್ಟ ಕಂದಮ್ಮನ ಪ್ರಣಾಮಗಳು
ಇಂತಿ ನಿಮ್ಮ ಮಗಳು 
.......................................... ಗಂಗಾ ಗೊಂದಿ
ದ್ವಿತಿಯ ಪಿ.ಯು.ಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ ಜಿಲ್ಲೆ
********************************************
        

ಮಾವಿನ ಗಿಡದ ಚಿಗುರು ನೋಡಾ
ಅದರ ಮುಂಭಾಗದ ಹೂವು ನೋಡಾ
ಎಳೆ ಎಲೆಯ ಬಣ್ಣ ನೋಡಾ
ಅದರ ರೆಂಬೆ ಕೊಂಬೆ ನೋಡಾ
ನೋಡಾ....ನೋಡಾ... ಎಷ್ಟು ಚೆಂದಾ
ಮಾವಿನ ಹಣ್ಣಿನ ಸವಿ ಸ್ವಾದ ಚೆಂದ
ಮಾವಿನ ಗಿಡದ ಮಿಡಿಗಾಯಿ ಚೆಂದಾ
ಹೋಳಿಗೆ ಶೀಕರ್ಣಿಯ ಊಟ ಚೆಂದ
ಅಕ್ಕರೆಯ ಅನುಬಂಧದ ಅನನ್ಯ ಚೆಂದಾ
ನೋಡಾ....ನೋಡಾ....ಎಷ್ಟು ಚೆಂದಾ
ವಂಸತ ಕಾಲ ಬಂದಿತು.....!!
ಗಿಡ - ಮರಗಳು ಚಿಗುರೊಡೆಯಿತು
ಹಣ್ಣುಗಳು ಉದುರಿದವು
ಎಲೆಗಳು ಬತ್ತಿದವು
ನೋಡಾ....ನೋಡಾ....ಎಷ್ಟು ಚೆಂದಾ
ಕಡೆಗೊಮ್ಮೆ ಮಾವಿನ ಗಿಡ ನೋಡಾ
ಎಷ್ಟು ಚೆಂದಾ ಐತಿ
ಏನು ಚೆಂದಾ ಏನು ಚೆಲವು
ಈ ಮಾವಿನ ಸುಗ್ಗಿ.....
.......................................... ಗಂಗಾ ಗೊಂದಿ
ದ್ವಿತಿಯ ಪಿ.ಯು.ಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ ಜಿಲ್ಲೆ
********************************************* 


   

Ads on article

Advertise in articles 1

advertising articles 2

Advertise under the article