-->
ಕವನಗಳ ರಚನೆ : ದೀಕ್ಷಾ , 9ನೇ ತರಗತಿ

ಕವನಗಳ ರಚನೆ : ದೀಕ್ಷಾ , 9ನೇ ತರಗತಿ

ಕವನಗಳ ರಚನೆ : ದೀಕ್ಷಾ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                                    

               
ಪರಿಸರದಿಂದ ನಮಗೆ ಸಿಗುತ್ತದೆ ಸುಖ
ಪರಿಸರವನ್ನು ಕೆಡಿಸಿದರೆ ನಮಗಾಗುತ್ತದೆ ದುಃಖ
ಪರಿಸರದಲ್ಲಿದೆ ಪರಿಮಳವಾದ ಹೂವು
ಅಲ್ಲಿದೆ ರಸಭರಿತವಾದ ಮಾವು
ಮರಗಿಡಗಳನ್ನು ಬೆಳೆಸಬೇಕು
ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು
ಪ್ಲಾಸ್ಟಿಕ್ ತ್ಯಾಜ್ಯಗಳನ್ನು 
ಕಸದ ಬುಟ್ಟಿಗೆ ಹಾಕಬೇಕು
ಪ್ರಾಣಿ ಪಕ್ಷಿಗಳನ್ನು ಸರಿಯಾಗಿ ನೋಡಿಕೊಳ್ಳಬೇಕು
ಪ್ರಾಣಿ ಪಕ್ಷಿಗಳನ್ನು ಕೊಂದರೆ
ನಮಗಾಗುವುದು ನೋವು
ಅದನ್ನು ಒಲ್ಲದೆ ಬದುಕಬೇಕು ನಾವು
ಪರಿಸರದ ತುಂಬಾ ಹಸಿರು ಹಸಿರು
ಪರಿಸರವೇ ನಮ್ಮೆಲ್ಲರ ಉಸಿರು 
................................................ ದೀಕ್ಷಾ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


                   
ಆಗಸದಿಂದ ಈ ಇಳೆಗೆ ಬರುತ್ತದೆ ಮಳೆ
ಇದರಿಂದ ಸೊಂಪಾಗಿ ಬೆಳೆಯುತ್ತದೆ ಬೆಳೆ
ಮಳೆಯಿಂದ ಆಗುತ್ತದೆ ಭೂಮಿ ತಂಪು
ಅದರಿಂದ ಖುಷಿಯಾಗಿ ಪಕ್ಷಿಗಳ ಹಾಡು ಇಂಪು 
ನೀರು ಹರಿಯುವುದು ಸರಾಗವಾಗಿ
ತಿಳಿಯೋಣ ಅದರ ಪ್ರಾಮುಖ್ಯತೆಯ
ಮಾನವನಾಗಿ.....!
ಮಳೆ ಬರದಿದ್ದರೆ ಬೆಳೆ ಬೆಳೆಯಲು
ರೈತರಿಗಾಗುವುದು ಕಷ್ಟ... 
ಯಾರಿಂದಲೂ ಬರಿಸಲು ಸಾಧ್ಯವಿಲ್ಲ 
ಇವರ ನಷ್ಟ
ಮಳೆಯ ಬರುವಿಕೆಗಾಗಿ ಕಾಯುವೆವು 
ಕಾತುರರಾಗಿ
ಜಿನುಗು ಮಳೆಯ ಜೊತೆ
ನಲಿಯುವೆವು ಖುಷಿ -ಖುಷಿಯಾಗಿ
ಮಳೆಯಿಂದ ಸಮೃದ್ಧವಾಗುವುದು ಇಳೆ
ಇದರಿಂದ ಪ್ರಕೃತಿಗೆ ಬರುವುದು 
ಸೌಂದರ್ಯಮಯ ಕಳೆ....!!
.................................................. ದೀಕ್ಷಾ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article