-->
ಕವನಗಳ ರಚನೆ : ಸೌಮ್ಯ ಈ, 9ನೇ ತರಗತಿ

ಕವನಗಳ ರಚನೆ : ಸೌಮ್ಯ ಈ, 9ನೇ ತರಗತಿ

ಕವನಗಳ ರಚನೆ : ಸೌಮ್ಯ ಈ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
                                   
              

ಮಕ್ಕಳಿಗೆ ಮಮತೆಯ ಮಾತೆಯವಳು
ದಿನವೂ ಅರಿವಿನ ಪಾಠ ಹೇಳುವಳು
ಹೆಣ್ಣಿನ ಪ್ರೀತಿಯು ಮುಗಿಯದ ಕವಿತೆ
ಅವಳದ್ದು ಕರುಳು ಬಂಧದ ಮಮತೆ
    ಕುಟುಂಬಕ್ಕಾಗಿಯೆ ಸವೆಸಿರುವಳು ಜೀವನ
    ಸಮಾಜದಲ್ಲಿ ಗೌರವ ಅವಳಿಗೆ ಅರ್ಪಿಸೋಣ
    ಅವಳಲ್ಲಿ ಶ್ರೀ ಶಕ್ತಿಯ ಕಾಣೋಣ 
    ಹೆಣ್ಣಿಗಾಗಿಯೇ ಮೀಸಲಿಡೋಣ ಈ ವಿಶ್ವ     
    ಮಹಿಳೆಯರ ದಿನ
ನೀನಿಲ್ಲದೆ ಈ ಜಗವಿಲ್ಲ
ನಿನಗಿಂತ ಒಳ್ಳೆ ಸ್ನೇಹಿತೆಯಿಲ್ಲ 
ಹೆಣ್ಣನ್ನು ಕಾಣಿರಿ ದೇವತೆಯಂತೆ
ಅವಳೊಂದು ತಾಳ್ಮೆಯ ಪ್ರತಿರೂಪದಂತೆ.... 
................................................ ಸೌಮ್ಯ ಈ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************


             

ರಾಜ್ಯವನ್ನಾಳುವ ಮೂಲಭೂತ 
ಕಾನೂನೇ ಸಂವಿಧಾನ..
ಇದನ್ನು ರಚಿಸಲು ಬೇಕಾಯಿತು ನಾನಾ ದಿನ...
ಅಂಬೇಡ್ಕರ್ ಅವರಿಂದ ರಚಿಸಲಾಯಿತು 
ಈ ಸಂವಿಧಾನ....
ಇದರ ಸವಿ ನೆನಪಿಗಾಗಿ ಆಚರಿಸಲಾಯಿತು ಗಣರಾಜ್ಯೋತ್ಸವದ ದಿನ....
    ಪ್ರಸ್ತಾವನೆ ಸಂವಿಧಾನದ ಒಡವೆ ಆಗಿದೆ
    ಅದು ಅದರ ಕೈ ದೀಪವೂ ಆಗಿದೆ
    ಪ್ರಜಾಸತ್ತಾತ್ಮಕ ಗಣರಾಜ್ಯವಿದು
    ಮತ ನಿರಪೇಕ್ಷ ರಾಷ್ಟ್ರವಿದು
ನಮ್ಮಲಿರುವುದು ಸಂಸದೀಯ ಸರ್ಕಾರ ಪದ್ಧತಿ
ಭಾರತೀಯ ಸರ್ವಾಂಗೀಣ ಅಭಿವೃದ್ಧಿಗೆ 
ಈ ತತ್ವಗಳೇ ದಿಕ್ಸೂಚಿ
ಅದಕ್ಕಾಗಿಯೇ ರಚಿಸಲಾಯಿತು 
ಈ ಕರುಡು ಸಮಿತಿ
       ಪ್ರಜಾ ಪ್ರಭುತ್ವದ ಯಶಸ್ಸಿಗೆ
       ಅಗತ್ಯವಾದವುಗಳು 
       ಈ ಮೂಲಭೂತ ಹಕ್ಕುಗಳು
       ಇಲ್ಲಿ ಕಾಣಬಹುದು ನಾವು 
       ಸರ್ವ ಧರ್ಮಗಳ ಸಮನ್ವಯತೆಯನ್ನು
       ಆದ್ದರಿಂದ ಪಾಲಿಸಿ ಈ ಸಂವಿಧಾನದ      
       ಕಾನೂನುಗಳನ್ನು
       ಈಡೇರಿಸಿ ಸಂವಿಧಾನದ ಆಶಯವನ್ನು...
................................................ ಸೌಮ್ಯ ಈ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************* 


              
ಎಲ್ಲೆಡೆಯೂ ಶಿವ ಶಿವ ಎಂದೆನ್ನಿರಿ
ನಿತ್ಯವೂ ಶಿವನ ಸ್ಮರಣೆ ಮಾಡಿರಿ
ಶಿವನಿಂದಲೆ ಕೈಲಾಸವೆನ್ನಿರಿ
ಎಲ್ಲೆಲ್ಲೂ ಅವನ ಕಾಣಿರಿ
    ಲಿಂಗ ಸ್ವರೂಪನಿಂದಲೆ ಈ ಭೂಲೋಕ
    ಜಗದೀಶನ ಜಪವೆ ನಮ್ಮೆಲ್ಲರ ಕಾಯಕ
    ಚಂದ್ರನ ಹೊಂಬೆಳಕಿನಲಿ 
    ನಡೆಸೋಣ ಅಭೀಷೇಕವ 
    ಉಪವಾಸದಿ ಮಾಡೋಣ ಶಿವಾಧ್ಯಾನವ
ಜಾಗರಣೆಯ ಮಾಡುತ ಶಿವನ ಪೂಜಿಸೋಣ
ಅವನ ದಿವ್ಯ ಕೃಪೆಗೆ ನಾವೆಲ್ಲ ಪಾತ್ರರಾಗೋಣ 
ಪರಮಶಿವನ ಸ್ಮರಣೆಯೇ ಭಕ್ತಿ ಮಾರ್ಗವು
ತ್ರಿಲೋಕ ಜ್ಞಾನಿಯಿಂದಲೆ 
ಈ ಪ್ರಕೃತಿಯ ಸೌಂದರ್ಯವು
      ಶಿವನ ಪೂಜಿಸುವ ಈ ಶಿವರಾತ್ರಿ
      ಮಾಘ ಮಾಸದ ಬಹುಳ 
      ಚತುರ್ದಶಿಯ ಶುಭರಾತ್ರಿ
      ಶಿವನಿಲ್ಲದೆ ಈ ಜಗವಿಲ್ಲ
      ನಟರಾಜನಿಲ್ಲದ ನಾಟ್ಯವಿಲ್ಲ
      ಶಿವ ಶಿವ ಎನ್ನದ ಭಕ್ತರಿಲ್ಲ
ತೋರಣಗಲ್ಲಿನ ಶಂಕರಲಿಂಗನು
ನಿತ್ಯವೂ ತನ್ನ ಭಕ್ತರ ಕಾಯುತಲಿಹನು 
ಊರ ಮಧ್ಯದ ಗುಡ್ಡದ ಮೇಲಿಹನು
ಭಕ್ತರ ಸದಾ ಹರಸುತಲಿಹನು...
................................................ ಸೌಮ್ಯ ಈ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************


      
ನಿನ್ನ ಆ ನಗು ಚೆಂದ 
ನೀ ಈ ಕರುನಾಡಿನ ಪ್ರೀತಿಯ ಕಂದ
ನೀನೆಂದರೆ ಎಲ್ಲರಿಗೂ ಅಚ್ಚು ಮೆಚ್ಚು
ನೀನೆಂದರೆ ಎಲ್ಲ ಮಕ್ಕಳಿಗೂ ಹುಚ್ಚು
    ನಿನ್ನ ಸಾಧನೆ ನಮಗೆಲ್ಲರಿಗೂ ಮಾದರಿಯಂತೆ
    ನಾನಿಂದು ನಿನ್ನ ಅಭಿಮಾನಿಯಂತೆ
    ಇಂದು ನಿನ್ನ ಹುಟ್ಟಿದ ಹಬ್ಬ
    ಇದು ಕರುನಾಡಿನ ಮನೆ ಮನೆಯ 
    ಸಂಭ್ರಮದ ಹಬ್ಬ
ನೀ ನಮ್ಮೆಲ್ಲರ ದೇವರು
ಕರುನಾಡಿನ ಎಲ್ಲ ತಾಯಂದಿರ ಪ್ರೀತಿಯ ಕರು 
ನೀನೇ ಪ್ರೀತಿಯಾ ರಾಜಕುಮಾರ
ನೀ ಎಂದೆಂದಿಗೂ ಅಜರಾಮರ
    ಅನೇಕ ಬಡ ಮಕ್ಕಳಿಗೆ ಆಶ್ರಯ ನೀಡಿದೆ
    ಅವರ ಪಾಲಿಗೆ ನೀ ದೇವರಾದೆ
    ಬಡ ಜನರಿಗೆ ಸಹಾಯ ಮಾಡಿದೆ
    ಎಂದಿಗೂ ಅವರ ಏಳಿಗೆಯನ್ನೆ ಬಯಸಿದೆ
ಅಭಿಮಾನಿಗಳನ್ನು ದೇವರೆಂದೇ
ಅವರಿಗಾಗಿಯೇ ನೀ ಬದುಕಿದೆ
ಎಲ್ಲರ ಕಣ್ಣಲ್ಲಿ ನೀನೇ ಅಡಗಿರುವೆ
ಅವರ ಮನೆ ಮನೆಯಲ್ಲೂ ನೀನಿರುವೆ
    ನೀ ಕರುನಾಡಿನ ಮಗನಾದೆ
    ಅವರ ಬಾಳಿನ ನಂದಾದೀಪವಾದೆ
    ಓ ಪುನೀತ ರಾಜಕುಮಾರ
    ನಿನ್ನದು ಕರುಣೆಯ ಸಾಗರ
    ನೀನಿಲ್ಲದೆ ಇನ್ಯಾರು ದೇವರು
    ನಿನಗಿಲ್ಲ ಯಾರೂ ಸರಿಸಮಾನರು....
................................................ ಸೌಮ್ಯ ಈ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article