-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 8

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 8

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 8
ಲೇಖಕರು : ಜಯಶ್ರೀ ಬಿ 
ಸಹಶಿಕ್ಷಕಿ. 
ಸ. ಹಿ ಪ್ರಾ ಶಾಲೆ ಮೇನಲಾ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
           

       ಅದೊಂದು ದಿನ ನೀರವತೆಯಿಂದ ಕೂಡಿದ್ದ ನಮ್ಮ ಶಾಲೆಗೆ ಮಕ್ಕಳ ಕಲರವ, ಮಕ್ಕಳ ಜೋರಾದ ಮಾತು, ಪಿಸುಗುಟ್ಟುವಿಕೆ, ಹುಡುಗರ ಗುಂಪು ಚರ್ಚೆ, ನಲಿಕಲಿ ಯವರ ಅಚ್ಚರಿಯ ನೋಟ, ಬಿಸಿಯೂಟದ ಘಮ ಘಮಿಸುವಿಕೆ, ಅದಷ್ಟೇ ಅಲ್ಲದೆ ಶಾಲಾ ಹೆಡ್ ಮಾಸ್ಟರ್ ರವರ ಸಂಭಾಷಣೆ...... ಇವೆಲ್ಲವೂ ಪುನಃ ಆರಂಭವಾದ  ದಿನ ಬಂದೇ ಬಿಟ್ಟಿತು. ಶಾಲಾ ಮಕ್ಕಳಿಗಂತೂ ಬಹಳ ಖುಷಿಯೋ ಖುಷಿ. ಯಾಕೆಂದರೆ ಅದೆಷ್ಟೋ ಸಮಯ ಮನೆಯಲ್ಲೇ ಕೂತು, ಆಟ ಪಾಠ ಗಳಿಲ್ಲದೆ ಬೇಜಾರು ಹಿಡಿದು ಹೋಗಿತ್ತು. ಹಾಗಾಗಿ ಕೊರೊನೋ ದ ನಂತರ ಶಾಲೆಗೆ ಬಹಳ ಬೇಗನೆ ದಾಖಲಾತಿ ಗೆ ಪೋಷಕರು ಆಗಮಿಸಿದ್ದರು. ನಮ್ಮ ಶಾಲೆಗೆ ಆ ವರುಷ ತುಂಬಾ ಮಕ್ಕಳು ದಾಖಲಾತಿಯಾದರು. ಕೇವಲ ಒಂದನೇ ತರಗತಿಗೆ ಅಲ್ಲದೆ 4,5,6,7 ಹೀಗೆ ಎಲ್ಲಾ ತರಗತಿ ಗಳಿಗೆ ಇಂಗ್ಲೀಷ್ ಮೀಡಿಯಂ ನಿಂದ  ಮಕ್ಕಳು ಬಂದು ನಮ್ಮಲ್ಲಿಗೆ ಸೇರಿದರು. 
      ಹೀಗೆ 6ನೇ ತರಗತಿಗೆ ಒಬ್ಬಳು ಹುಡುಗಿ ಸೇರಿ ಕೊಂಡಳು. ಬಹಳ ಮಾತು, ಎಲ್ಲದಕ್ಕೂ ನಗು ಒಂದೇ ಉತ್ತರ. ಅವಳ ನಗು ನಮ್ಮ ಬಾಕಿ ಮಕ್ಕಳಿಗೆ  ವಿಚಿತ್ರವಾಗಿ ಕಾಣುತಿತ್ತು. ಅವಳು ನಮ್ಮಲ್ಲಿ ಬರೀ ಇಂಗ್ಲೀಷ್ ನಲ್ಲೆ ಮಾತಾಡುತಿದ್ದಳು. ಕನ್ನಡದ ಗಂಧ ಗಾಳಿ ಗೊತ್ತಿಲ್ಲದಂತೆ ಮಾಡುತಿದ್ದಳು. ತರಗತಿ  ಶುರುವಾಯಿತು. ಅಲ್ಲಿಯೂ ಕನ್ನಡ ಮಾತಾಡುತ್ತಿರಲಿಲ್ಲ. ಮಕ್ಕಳಿಗೆ ಇವಳು ಯಾಕೆ ಕನ್ನಡ ಗೊತ್ತಿದ್ದರೂ ಮಾತಾಡುವುದಿಲ್ಲ ಎಂಬ ಪ್ರಶ್ನೆ... ಎಲ್ಲರೂ ಅವಳನ್ನೇ ಹೆಚ್ಚಾಗಿ ಗಮನಿಸುತ್ತಿದ್ದರು. 
     ಒಂದು ದಿನ ನಾನು ಪೂರ್ವ ಪರೀಕ್ಷೆ  ಮಾಡುತ್ತೇನೆ ಎಂದು ಹೇಳಿದೆ. ನನ್ನ ಸಹೋದ್ಯೋಗಿಯೊಬ್ಬರು ಕನ್ನಡ ವಿಷಯದ ಪರೀಕ್ಷೆ ಮಾಡುತ್ತೇನೆ ಎಂದು ಹೇಳಿದರು. ಆಗ ಆ ಹುಡುಗಿ ನನ್ನ ಹತ್ತಿರ ಬಂದು ಮಕ್ಕಳ ಎದುರು ಮೇಡಂ ನಾನು ಕನ್ನಡ ಪರೀಕ್ಷೆ ಯನ್ನು ಇಂಗ್ಲೀಷಲ್ಲಿ ಬರೆಯಲಾ ಎಂದು ರಾಗದಿಂದ ಕೇಳಿದಳು. ಪಕ್ಕದಲ್ಲಿ ಇದ್ದ ಅವಳ ಸಹಪಾಠಿಗಳು ಜೋರಾಗಿ ನಕ್ಕರು. ನನಗೂ ನಗು ತಡೆಯಲಾಗಲ್ಲಿಲ್ಲ. ಬಳಿಕ ಅವಳನ್ನು ಕರೆದು ಕನ್ನಡ ಭಾಷೆ, ಸಂಸ್ಕೃತಿ ಸಾಹಿತ್ಯದ ಬಗ್ಗೆ ತಿಳಿಹೇಳಿದಾಗ ಮನವರಿಕೆ ಆಯಿತು. ಮುಂದೆ ಕನ್ನಡದಲ್ಲಿ ಮಾತನಾಡಲು ಆರಂಭಿಸಿದಳು. 
       ಈಗ ಟೀಚರ್ ಅಂತಾನೆ ಕರೆದು ಕನ್ನಡದಲ್ಲೇ ಹೆಚ್ಚು ಮಾತನಾಡುತ್ತಾಳೆ. ಒಮ್ಮೊಮ್ಮೆ ಈ ಘಟನೆ  ತರಗತಿಯಲ್ಲಿ ಹೇಳಿದಾಗ ಅವಳಿಗೂ ತಾನು ಹೀಗೆ ಮಾಡಿದ್ದೇನೆ ಎಂದು ನಗು ಉಕ್ಕಿ ಬರುವುದುಂಟು. ಈ ತರಹದ ಅನುಭವಗಳು ನಮಗೆ ಹೊಸತನವನ್ನು ತಂದು ಕೊಡುತ್ತದೆ. ನಮ್ಮ ಮಕ್ಕಳೊಂದಿಗಿನ ಸಂಬಂಧವನ್ನು  ಗಟ್ಟಿಗೊಳಿಸುತ್ತದೆ.
................................................. ಜಯಶ್ರೀ ಬಿ 
ಸಹಶಿಕ್ಷಕಿ. 
ಸ. ಹಿ ಪ್ರಾ ಶಾಲೆ ಮೇನಲಾ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article