ಬೆಕ್ಕು ಮತ್ತು ಇಲಿ - ಕಥೆ ರಚನೆ : ಹೃಷಿಕೇಶ್, 4ನೇ ತರಗತಿ
Saturday, May 6, 2023
Edit
ಕಥೆ ರಚನೆ : ಹೃಷಿಕೇಶ್
4ನೇ ತರಗತಿ ವಿದ್ಯಾರ್ಥಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಮೊಗರು.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅದೊಂದು ಪುಟ್ಟ ಊರು. ಅಲ್ಲಿ ಒಂದು ಭಾರೀ ಜೋರಾದ ಬೆಕ್ಕೊಂದು ಇತ್ತು. ಅದು ಎಲ್ಲರಿಗೂ ಕೀಟಲೆ ಮಾಡುತ್ತಿದ್ದುದರಿಂದ ಯಾರೂ ಅದಕ್ಕೆ ಊಟವನ್ನು ಹಾಕುತ್ತಿರಲಿಲ್ಲ. ಒಂದು ದಿನ ಅದು ಒಂದು ಮನೆಯೊಳಗೆ ನುಗ್ಗಿತು. ಇಲಿಗಳನ್ನು ಹಿಡಿಯಲು ಅಟ್ಟದಲ್ಲಿ ಕಾದು ಕುಳಿತಿತು. ತುಂಬಾ ಹೊತ್ತಾದರೂ ಒಂದು ಇಲಿಯೂ ಆ ಕಡೆ ಬರಲೇ ಇಲ್ಲ. ಬೆಕ್ಕಿಗೆ ಹಸಿವೆಯಿಂದ ನಿದ್ದೆ ಬರಲು ಆರಂಭವಾಯಿತು. ತೂಕಡಿಸುತ್ತಿರಬೇಕಾದರೆ ತಕ್ಷಣವೇ ಒಂದು ಇಲಿ ಬೆಕ್ಕಿನ ಎದುರಿನಿಂದ ಹಾದುಹೋಯಿತು. ಬೆಕ್ಕಿಗೆ ಭಾರಿ ಸಂತೋಷವಾಯಿತು. ಅದು ಇಲಿಯನ್ನು ಹಿಡಿಯಲು ಓಡಿತು. ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಓಡಿ ಓಡಿ ಒಂದು ಸಣ್ಣ ಬಾಯಿಯ ಡಬ್ಬದೊಳಗೆ ಇಲಿ ಸೇರಿಕೊಂಡಿತು. ಬೆಕ್ಕು ಇಲಿಯನ್ನು ಹಿಡಿಯಲು ಬಾಗಿತು. ಇಲಿ ಸಿಗಲಿಲ್ಲ. ಬೆಕ್ಕು ತನ್ನ ಕೈಯನ್ನು ಡಬ್ಬದೊಳಗೆ ಹಾಕಿ ಇಲಿಯನ್ನು ಹಿಡಿಯಲು ಪ್ರಯತ್ನಿಸಿತು. ಇಲಿ ಸಿಗಲೇ ಇಲ್ಲ. ಕಣ್ಣಿಗೆ ಕಂಡ ಇಲಿಯನ್ನು ಸುಮ್ಮನೆ ಬಿಡಬಾರದೆಂದು ಯೋಚಿಸಿದ ಬೆಕ್ಕು ಒಂದು ಕೋಲನ್ನು ತರಲು ಹೊರಟಿತು. ಬೆಕ್ಕು ಕೋಲನ್ನು ತರಲು ಹೊರಟಿರುವುದನ್ನು ನೋಡಿದ ಇಲಿ ತಕ್ಷಣವೇ ಡಬ್ಬದಿಂದ ಹೊರಬಂದು ಬೆಕ್ಕಿಗೆ ಕಾಣದಂತೆ ಮಾಯವಾಯಿತು. ಕೋಲು ತೆಗೆದುಕೊಂಡು ಬಂದ ಬೆಕ್ಕು ಬೇಸರದಿಂದ ಹೊರಟು ಹೋಯಿತು.
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಮೊಗರು.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************