ಪ್ರೀತಿಯ ಪುಸ್ತಕಸ : ಸಂಚಿಕೆ - 57
Friday, May 5, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 57
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ..... ಅಜ್ಜಿ ಮತ್ತು ದಕ್ಷ ಆಟ ಆಡುತ್ತಾ ಇದ್ದಾರೆ. ಇದ್ದಕ್ಕಿದ್ದಂತೆ ದಕ್ಷನಿಗೆ ಆಮ್ಲೆಟ್ ಮಾಡಿ ತಿನ್ನಬೇಕನಿಸುತ್ತದೆ. ಅಜ್ಜಿಯ ಹತ್ತಿರ ಕೇಳುತ್ತಾನೆ. ಅಜ್ಜಿಗೂ ಹುಮ್ಮಸ್ಸು ಬರುತ್ತದೆ. ಅಂಗಡಿಯಿಂದ ಮೊಟ್ಟೆ ತರುವುದರಿಂದ ಹಿಡಿದು ಆಮ್ಲೆಟ್ ಮಾಡಿ ತಿನ್ನುವ ತನಕದ ಕಥೆ ಇದೆ. ಓದಿ ನೋಡಿ. ಚಿತ್ರಗಳೂ ಮುದ್ದಾಗಿ ಇವೆ. ದಕ್ಷ ತನ್ನಅಜ್ಜಿ ಜೊತೆ ಸೇರಿ ಹೇಗೆ ಮೊಟ್ಟೆ ಆಮ್ಲೆಟ್ ಮಾಡಿದ, ಮಾಡುವಾಗ ಏನೆಲ್ಲಾ ಆಯಿತು ಅಂತ ಓದಿ ನೋಡಿ. ಸರಳವಾಗಿ ಆಮ್ಲೆಟ್ ಮಾಡುವ ವಿಧಾನವನ್ನು ಕೂಡಾ ನೋಡಿ ಕಲಿಯಬಹುದು. ಅಜ್ಜಿ ಮೊಮ್ಮಕ್ಕಳ ಬಾಂಧವ್ಯದ ಕುರಿತಾಗಿ ಇರುವ ಮುದ್ದಾದ ಕಥೆ ಇದು. ಇಂತಹ ಅನೇಕ ಚಿಕ್ಕಪುಟ್ಟ ಅನುಭವಗಳು ಬದುಕಿನಲ್ಲಿ ನಡೆಯುತ್ತವೆ. ಅವನ್ನು ಬರೆದರೆ ಅದುವೇ ಒಂದು ಸುಂದರ ಪುಸ್ತಕ ಆಗಬಹುದು. ನೀವೂ ಬರೆಯಿರಿ.
ಪ್ರಕಾಶಕರು: ಹಿತಾ ರಿಸೋರ್ಸ್ ಯುನಿಟ್
ಲೇಖಕರು: ವಾಣಿ ಪೆರಿಯೋಡಿ
ಚಿತ್ರಗಳು: ದೀಪಿಕಾ ಗಣೇಶ್
ಬೆಲೆ: ರೂ.100/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************