-->
ಪ್ರೀತಿಯ ಪುಸ್ತಕ :  ಸಂಚಿಕೆ - 58

ಪ್ರೀತಿಯ ಪುಸ್ತಕ : ಸಂಚಿಕೆ - 58

ಪ್ರೀತಿಯ ಪುಸ್ತಕ
ಸಂಚಿಕೆ - 58

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

             ಮೋಡಣ್ಣಾ ನಾ ಯಾರು? ಹೇಳಣ್ಣಾ 
ಪ್ರೀತಿಯ ಮಕ್ಕಳೇ, 
          “ನಾನಾರಂತ ಗೊತ್ತಾ?
           ಹೇಳಲು ಕೊಡುವೆಯ 
           ಪ್ರೀತಿಯ ತುತ್ತಾ? 
           ಜೊತೆಯಲಿ 
           ಕೆನ್ನೆಯ ಮೇಲೊಂದು ಮುತ್ತಾ..” - ಪುಟ್ಟ ಹುಡುಗಿಯೊಬ್ಬಳು ಕೇಳುತ್ತಾಳೆ ಮೋಡದ ಬಳಿ.
      “ಆಯಿತು ಹೇಳೆನ್ನ ಜಾಣಮರಿ
        ನಾ ಕೊಡುವೆ ಬಣ್ಣದ ನವಿಲುಗರಿ
        ನಿನ್ನ ನಗಿಸಲು ನುಡಿವೆ ಕಿನ್ನರಿ
       ಶುಭ ಕೋರುವೆ ನಿನಗೆ ಬಂಗಾರಿ” ಮೋಡ ಹೀಗೆ ಉತ್ತರಿಸುತ್ತದೆ....
     ಪುಸ್ತಕ ತುಂಬಾ ಮೋಡ ಮತ್ತು ಪುಟ್ಟ ಹುಡುಗಿಯ ಮಾತುಕತೆ ಸಾಗುತ್ತದೆ. ಹುಡುಗಿ ತನ್ ಮನೆಯವರನ್ನೆಲ್ಲಾ ಪರಿಚಯಿಸುತ್ತಾ ಹೋಗುತ್ತಾಳೆ. ಹಾಗೇನೇ ಭೂಮಿಯ ಕತೆ ಹೇಳಿ ಮಳೆ ಸುರಿಸಲೂ ಕೇಳಿಕೊಳ್ಳುತ್ತಾಳೆ. ಅವರಿಬ್ಬರೂ ಸುಂದರ ಪರಿಸರದ ಬಗ್ಗೆಯೂ ಮಾತಾಡುತ್ತಾರೆ. ಹಾಡಿನ ರೂಪದಲ್ಲಿ ಈ ಮಾತುಕತೆ ಇದೆ. ಸರಳವಾದ ಪ್ರಾಸವಿದೆ. ನೀವು ರಾಗ ಹಾಕಿ ಹಾಡಬಹುದು; ಹಾಡುತ್ತಾ ನಾಟಕವನ್ನೂ ಮಾಡಬಹುದು. ಬಣ್ಣವಿಲ್ಲದೆಯೂ ಚಿತ್ರಗಳು ಹಾಡಿಗೆ ಮೆರಗು ಕೊಡುವ ರೀತಿಯಲ್ಲಿ ಇವೆ. ಚಿತ್ರ ಮಾಡುವ ಆಸಕ್ತಿ ಇದ್ದರೆ, ಇಂತಹ ಚಿತ್ರಗಳನ್ನೂ ಮಾಡಬಹುದು. ಓದುವಿರಿ ತಾನೇ?  
ಲೇಖಕರು: ಬಾಮಾ 
ಚಿತ್ರಗಳು: ಗುಜ್ಜಾರ್, ಬಾಗೂರು, ರವಿಶಂಕರ್
ಪ್ರಕಾಶಕರು: ಸಪ್ನ  
ಬೆಲೆ: ರೂ.24/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************


Ads on article

Advertise in articles 1

advertising articles 2

Advertise under the article