ಪರೋಪಕಾರ - ಕಥೆ ರಚನೆ : ದೀಪ್ತಿ , 4ನೇ ತರಗತಿ
Wednesday, May 3, 2023
Edit
ಕಥೆ ರಚನೆ : ದೀಪ್ತಿ
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಾಡುಮಠ, ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಬೇವಿನ ಮರದಲ್ಲಿ ಒಂದು ಕಾಗೆ ವಾಸ ಮಾಡುತ್ತಿತ್ತು. ಒಂದು ದಿನ ಜೋರಾಗಿ ಗಾಳಿ ಮಳೆ ಬಂದಿತು. ಗಾಳಿ ತುಂಬಾ ಜೋರಾಗಿ ಬಿಸುತ್ತಿತ್ತು. ಬೇವಿನ ಮರ ಬಿದ್ದುಹೋಯಿತು. ಆ ಕಾಗೆ ಯೋಚಿಸಿತು ಮಾವಿನ ಮರದ ಹತ್ತಿರ ಹೋಯಿತು. "ಮಾವಿನ ಮರವೇ ಮಾವಿನ ಮರವೇ ಗೂಡು ಕಟ್ಟಲು ಜಾಗ ಕೊಡುವೆಯಾ" ಎಂದು ಕೇಳಿತು ಆಗ ಮಾವಿನ ಮರವು "ನಾನು ಕೊಡಲಾರೆ" ಎಂದಿತು. ಮತ್ತೊಂದು ಮರಕ್ಕೆ ಹೋಯಿತು. "ಪೇರಳೆ ಮರವೇ ಪೇರಳೆ ಮರವೇಗೂಡು ಕಟ್ಟಲು ಜಾಗ ಕೊಡುವೆಯಾ" ಎಂದು ಕೇಳಿತು ಆಗ ಪೇರಳೆ ಮರ "ನಾನು ಕೊಡಲಾರೆ" ಎಂದಿತು. ಮತ್ತೆ ಅದರ ಮುಂದಿನ ಮರಕ್ಕೆ ಹೋಯಿತು "ಹಲಸಿನ ಮರವೇ ಹಲಸಿನ ಮರವೇ ನನಗೆ ಗೂಡು ಕಟ್ಟಲು ಜಾಗ ಕೊಡುವೆಯಾ" ಎಂದಿತು. ಆಗ ಅದು ನಾನು ಕೊಡಲಾರೆ" ನಂತರ ಉಳಿದಿದ್ದ ಕೊನೆಯ ಮರದ ಬಳಿ ಹೋಗಿ ಹೀಗೆಂದಿತು..... "ಆಲದ ಮರವೇ ಆಲದ ಮರವೇ ನನಗೆ ಗೂಡು ಕಟ್ಟಲು ಜಾಗ ಕೊಡುವೆಯಾ" ಆಗ ಅದು "ನಾನು ಕೊಡುವೆ ಬಾ ನನ್ನ ಮರದಲ್ಲಿ ಗೂಡು ಕಟ್ಟಿಕೋ" ಎಂದಿತು. ಬಹಳ ಆನಂದದಿಂದ ಆ ಮರಕ್ಕೆ ಧನ್ಯವಾದ ಹೇಳುತ್ತಾ ಅದರಲ್ಲಿ ವಾಸ ಮಾಡಿತು.
ಸ್ವಲ್ಪ ದಿನಗಳ ನಂತರ ಒಂದು ದಿನ ಜೋರಾಗಿ ಗಾಳಿ ಬೀಸಿತು. ಗಾಳಿ ಬೀಸಿದ ಪರಿಣಾಮ ವಾಗಿ ಮರಗಳೆಲ್ಲಾ ಉರುಳಿ ಬಿದ್ದವು. ಆದರೆ ಆಲದ ಮರ ಮಾತ್ರ ಉಳಿದುಕೊಂಡಿತು.
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಾಡುಮಠ, ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************