-->
ಕವನಗಳ ರಚನೆ : ನಂದಿತಾ ಯು , 10ನೇ ತರಗತಿ

ಕವನಗಳ ರಚನೆ : ನಂದಿತಾ ಯು , 10ನೇ ತರಗತಿ

ಕವನಗಳ ರಚನೆ : ನಂದಿತಾ ಯು
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ , ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
          

"ಸತ್ಯ ಮೇವ ಜಯತೇ"
ಸಾರುತಿಹಳು ಭಾರತ ಮಾತೆ
ಭಾರತವಿದು ಬಾಂಧವ್ಯದ ತೇರು
ಇಲ್ಲಿಹುದು ವಿನಯದ ಬೇರು..
      ಮೌಲ್ಯಗಳ ರಾಷ್ಟ್ರವಿದು ಭಾರತ
      ಧರ್ಮಗಳ ಪೂಜಿಸುತಿಹುದು ಸಾರುತ
      ಇಲ್ಲಿಹುದು ವೈವಿಧ್ಯಮಯತೆ,
      ಆದರೂ ಮೆರೆಯುತಿಹುದು ಸಮಾನತೆ,
ಕಾಣುತ್ತಿದೆ ಭಾರತದ ಸಂಸ್ಕೃತಿಯು ಅವನತಿ
ಕಾಣುತ್ತಿದೆ ಎಲ್ಲೆಡೆಯೂ ಪಾಶ್ಚಿಮಾತ್ಯದ ಸಂಸ್ಕೃತಿ
ಮರೆಯಾಗುತ್ತಿವೆ ಮೌಲ್ಯಗಳು ಸಮಾಜದಲ್ಲಿ,
ಆವರಿಸುತ್ತಿವೆ ಅಪರಾಧಗಳು ಭಾರತದಲ್ಲಿ..
     ಕೂತಿದೆ ಸಿಂಹಾಸನದಲಿ ಅರಾಜಕತೆ,
     ಮೂಡಬೇಕಿದೆ ಭಾರತದಲಿ ಪ್ರಜಾಪ್ರಭುತ್ವತೆ..
     ಜನರಲ್ಲಿ ಕಾಣುತ್ತಿಲ್ಲ ಸಹೋದರತ್ವ,
     ಭಾರತದಲ್ಲಿ ಮೂಡುತ್ತಿಲ್ಲ ಗಾಂಧೀತತ್ವ..
ಧರ್ಮಗಳನ್ನೆಲ್ಲಾ ನಮ್ಮ ಹಾದಿಯಾಗಿಸಿಕೊಳ್ಳೋಣ
ವೈವಿಧ್ಯತೆಯಲ್ಲೇ ಏಕತೆಯ ಕಂಡುಕೊಳ್ಳೋಣ,
ಕಟ್ಟೋಣ ವಿಶ್ವಗುರು ಭಾರತವ..,
ನಿರ್ಮಿಸೋಣ ಜಗದಲ್ಲೊಂದು 
ಮಾದರಿ ದೇಶವ....
............................................ ನಂದಿತಾ ಯು
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ , ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************

    

ಹಚ್ಚ ಹಸಿರ ಪರಿಸರವೇ....
ನನ್ನ ಮನವ ತಂಪಾಗಿಸುವ ಧಾತುವೇ...
ಎಲ್ಲಿದೆ ನಿನ್ನ ಜನ್ಮರಹಸ್ಯ...
ಎಲ್ಲಿವರೆಗೆ ಇದೆ ನಿನ್ನ ಆಯುಷ್ಯ....!!!
     ನಿನ್ನ ರೂಪ ಸ್ವರ್ಗವೇ ನಾಚಿಸುವಂತದ್ದು
     ಅದರಲ್ಲಿ ಮನುವರ್ಗ ಕಪ್ಪುಚುಕ್ಕಿಯಂತದ್ದು..
     ಸ್ವಾರ್ಥದ ನಡುವೆ ಕುರೂಪಿಯಾಗುತ್ತಿದೆ 
     ನಿನ್ನ ರೂಪ
     ಸರ್ವ ಜೀವರಾಶಿಗೂ ಆಸರೆಯಾಗಿ 
     ನೀನೇನು ಮಾಡಿದೆ ಪಾಪ....!!
ನಿನ್ನ ಮಹತ್ವದ ಅರಿವು 
ಒಂದು ಕಾಲದಲಿತ್ತು ಜನರಲ್ಲಿ..
ಗಿಡ, ಮರ, ಸಸಿ, ಎಂದರೆ 
ಆಗ ದೈವಕ್ಕಿಂತ ಹೆಚ್ಚು....!!
ಕ್ಷೀರದ ಸ್ಥಾನವಿತ್ತು ನೀರಲ್ಲಿ
ಪ್ರಾಣಿಗಳ ಮೇಲಿನ ವಾತ್ಸಲ್ಯ 
ಮಕ್ಕಳಿಗಿಂತ ಹೆಚ್ಚು....!!
    ಮರೆಯಾಗುತ್ತಿದೆ ಪ್ರಕೃತಿಯಲ್ಲಿನ ಸಂಪನ್ಮೂಲ
    ಮಾಲಿನ್ಯವೇ ಮುಸುಕಿದ ಸಂಪನ್ಮೂಲ
    ಜನರಿದ್ದಾರೆ ಕೆಲಸದ ನಡು ಬಲೆಯಲ್ಲಿ..
    ಪರಿಸರ ಸಿಲುಕಿದೆ ಕಾರ್ಖಾನೆಗಳ ನಡುವಲ್ಲಿ..
     ಆವರಿಸಿದೆ ಸುತ್ತ ಅನಾರೋಗ್ಯದ ಭಯ
     ಎತ್ತನೋಡಿದರೂ ಮಹಾಮಾರಿ 
     ಮಾಲಿನ್ಯದ ಭಯ.....!!
     ಬದುಕುವಂತಾಗಿದೆ ಭಯದ ನಡುವೆ
     ನಡೆಯುತ್ತಿದ್ದೇವೆ ವಿನಾಶದ ಸೇತುವೆ....!!
............................................ ನಂದಿತಾ ಯು
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ , ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************


              
ಜೀವನವಿಡೀ ನಿಸ್ವಾರ್ಥದ 
ಶ್ರಮ ಪಡುವ ಜೀವ,
ನನ್ನ ಖುಷಿಯಲ್ಲಿ ತನ್ನ 
ನೋವನ್ನು ಮರೆಯುವ ದೇವ,
ಪರಿಚಯಿಸಿದೆ ನನಗೀ ಪ್ರಪಂಚವ
ಬೆಳೆಸಿದೆ ನನ್ನ ಗುರಿಯ ಎತ್ತರವ,
      ನನ್ನ ಜೀವನದ ಸ್ಪೂರ್ತಿಯಾದೆ,
      ನನ್ನ ನಡೆಗೆ ನೆರಳಾದೆ,
      ಪೋಷಿಸಿದೆ ನನ್ನ..
      ನಿನ್ನ ವರ್ಣಿಸಲಾಗದಷ್ಟು,
      ನೀ ತೋರಿರುವ ಪ್ರೀತಿ ಎಣಿಸಲಾಗದಷ್ಟು,
ತಂದೆ ಬೆಳೆಸಿದ ಮಗನನ್ನು 
ಮಾಲೀಕನಾಗುವವರೆಗೂ,
ಮಗ ಹೋದ, 
ತಂದೆಯು ವೃಧ್ಧಾಶ್ರಮ ಸೇರುವವರೆಗೂ,
ಆದರೆ, ನೀ ನನ್ನ ಬೆಳೆಸಿದೆ 
ಮೌಲ್ಯದ ದಾರಿಯಲಿ
ನಾ ಹೋಗುವೆ ನೀ ಕಂಡ 
ಸಮಾಜ ನಿರ್ಮಾಣದ ಹಾದಿಯಲಿ,
      ನನಗೆ ನೀ ಹೇಳಿದ ನೀತಿಕಥೆಯು
      ಅದರಲ್ಲಿತ್ತು ನಿನ್ನ ಪರಿಶ್ರಮದ ವ್ಯಥೆಯು,
      ಬಯಸಿದೆ ನೀ ನಿನ್ನ ಮಕ್ಕಳ ಒಳಿತು
      ಕಂಡೆ ಕನಸ ನಿನ್ನ ಕಷ್ಟವ ಮರೆತು
ನಾ ಗೆದ್ದಾಗ ತಲೆ ಮೇಲೆತ್ತಿಕೊಂಡು ಮೆರೆಸಿ,
ನಾ ಬಿದ್ದಾಗ ಎದೆಗಪ್ಪಿ ಕಣ್ಣೀರ ವರೆಸಿ... 
ಸದಾ ನನ್ನೊಟ್ಟಿಗಿರುವ ಜೀವ... 
"ಅಪ್ಪ ನನ್ನ ಅಪ್ಪ"
............................................ ನಂದಿತಾ ಯು
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ , ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article