-->
ಪ್ರಸ್ತುತ ಶಿಕ್ಷಣ - ಲೇಖನ : ಶಿವನಾಗ ಬಸವರಾಜ ಅಡವಳ್ಳಿಮಠ , 10ನೇ ತರಗತಿ

ಪ್ರಸ್ತುತ ಶಿಕ್ಷಣ - ಲೇಖನ : ಶಿವನಾಗ ಬಸವರಾಜ ಅಡವಳ್ಳಿಮಠ , 10ನೇ ತರಗತಿ

ಲೇಖನ : ಶಿವನಾಗ ಬಸವರಾಜ ಅಡವಳ್ಳಿಮಠ
10ನೇ ತರಗತಿ 
ತುಂಗಭದ್ರಾ ಪ್ರೌಢಶಾಲೆ ಹೂವಿನಹಡಗಲಿ
ತಾಲೂಕು : ಹೂವಿನಹಡಗಲಿ
ಜಿಲ್ಲೆ : ವಿಜಯನಗರ
                         .           
           
            ಹೀಗೆ ಒಂದು ಶಾಲಾ ವಾರ್ಷಿಕೋತ್ಸವದಲ್ಲಿ, ಅದೇ ಶಾಲೆಯ ಹಳೆ ವಿದ್ಯಾರ್ಥಿ, ಪೊಲೀಸ್ ಹುದ್ದೆಯನ್ನು ಹೊಂದಿದ್ದನು. ಈ ಸಮಾರಂಭದ ಸಂದರ್ಭದಲ್ಲಿ, ಪ್ರಸ್ತುತ ಶಿಕ್ಷಣದ ಬಗ್ಗೆ ತನ್ನ ಮನದಾಳದ ಮಾತನ್ನು ಹೇಳುತ್ತಾನೆ. ಆ ಮಾತುಗಳು ಹೀಗಿವೆ... "ನೋಡಿ ಮಕ್ಕಳೇ, ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವ ಗಾದೆ ಮಾತಿನಂತೆ, ನೀವು ಅಂಕಗಳು ಅಥವಾ ನೌಕರಿಗಾಗಿ ಎಂದು ಓದಬೇಡಿ, ಏಕೆಂದ್ರೆ ನಿಮಗೆಲ್ಲ ತಿಳಿದಂತೆ ಪ್ರಸ್ತುತ ಶಿಕ್ಷಣದ ಬುನಾದಿ ಹಾಕಿದವರೆ ಬ್ರಿಟಿಷರು. ಈ ಬ್ರಿಟಿಷರು ಶಿಕ್ಷಣಕ್ಕೆ ಹಾಕಿದ ಬುನಾದಿ ಅಷ್ಟೇನು ಸರಿಯಿಲ್ಲ, ಏಕೆ ಗೊತ್ತೇ?. ಏಕೆಂದರೆ ಈಗಿನ ಶಿಕ್ಷಣವು ವಿದ್ಯಾರ್ಥಿಗಳ ಮುಂದೆ ಹಸಿ ಹುಲ್ಲು ಎಂಬ ಅಂಕಗಳನ್ನು ಕಟ್ಟಿ ಕತ್ತೆ ಹಾಗೆ ಓದಿಸ್ತಾಯಿದೆ. ಅಷ್ಟೇ ಅಲ್ಲ ಈ ಶಿಕ್ಷಣದಿಂದ ನಮಗೆ ಆತ್ಮವಿಶ್ವಾಸ, ದೈರ್ಯ, ಪ್ರೀತಿ, ಕರುಣೆ, ನಂಬಿಕೆಗಳು ದೂರವಾಗುತ್ತಿವೆ. ಹೇಗೆಂದರೆ.... ನಾವು ತರಗತಿಯಲ್ಲಿ ಕುಳಿತು ಪಠ್ಯಪುಸ್ತಕದಲ್ಲಿ ಓದೋದೆ ಬೇರೆ, ಶಾಲೆಯ ಗೇಟನ್ನು ದಾಟಿ ಸಮಾಜದಲ್ಲಿ ಕಾಲಿಟ್ಟರೆ ಅಲ್ಲಿ ನಡೆಯೋದೆ ಬೇರೆ. ಇದಕ್ಕೆ ಒಂದು ಉದಾಹರಣೆ ಕೊಡ್ತೀನಿ ನೋಡ್ರಿ.... ನಾವೆಲ್ಲ ಎಂಟು ಮತ್ತು ಒಂಭತ್ತನೆ ತರಗತಿಯಲ್ಲಿ ಓದಿದ ಹಾಗೆ, ಚುನಾವಣೆಗೆ ನಿಲ್ಲಲು ವ್ಯಕ್ತಿಗೆ ಇರುವ ಅರ್ಹತೆಗಳೇನು ಅಂತ, ಅದರಲ್ಲಿ ಒಂದೆರೆಡು ಪಾಯಿಂಟ್ಸ ಹೇಳ್ತಿನಿ ಕೇಳಿ,
▪️ಚುನಾವಣಾ ಅಭ್ಯರ್ಥಿಯು ಜೈಲುವಾಸ ಅನುಭವಿಸಬಾರದು
▪️ಅವನು ಭಾರತದ ಪ್ರಜೆಯಾಗಿರಬೇಕು ಮತ್ತು ಅವನು ದಿವಾಳಿಯಾಗಿರಬಾರದು.
     ಎಂಬ ಹಲವಾರು ನಿಯಮಗಳು ಚುನಾವಣಾ ಎದುರಿಸುವ ಅಭ್ಯರ್ಥಿಗೆ ಇರುತ್ತವೆ. ಈ ನಿಯಮಗಳು ನಮ್ಮ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ. ಇಂದು ಸಮಾಜದಲ್ಲಿರುವ ಎಲ್ಲಾ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಭ್ರಷ್ಟರು ಮತ್ತು ಜೈಲುವಾಸ ಅನುಭವಿಸಿರೋರೆ ಆಗಿದ್ದಾರೆ. ಹಾಗಾದರೆ ಈಗ ಹೇಳಿ ನಮ್ಮ ಶಿಕ್ಷಣಕ್ಕೂ ಮತ್ತು ನಾವಿರುವ ಸಮಾಜಕ್ಕೂ ಏನು ಸಂಬಂಧ ಅಂತ...! ಆ ಕುತಂತ್ರಿ ಬ್ರಿಟಿಷರು ಇಂತಹ ಶಿಕ್ಷಣದ ವ್ಯವಸ್ಥೆಯನ್ನು ನೀಡಿದ್ದಾರೆ. ಮತ್ತು ಈ ಜನರು, ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಮನುಷ್ಯತ್ವ, ಮಾನವೀಯತೆಯನ್ನು ಮರೆತು ಹಣದ ಹಿಂದೆ ಓಡುತ್ತಾ ಇದ್ದಾರೆ. ಅದಕ್ಕೆ ನಮ್ಮ ದ.ರಾ ಬೇಂದ್ರೆ ಅಜ್ಜ ಹೇಳಿದ್ದು....
       ಕುರುಡು ಕಾಂಚಾಣ ಕುಣಿಯುತಲಿತ್ತೋ
       ಕಾಲಿಗೆ ಬಿದ್ದವರ ತುಳಿಯುತಲಿತ್ತೋ
ಅಂತ. ಆದ್ದರಿಂದ ಮಕ್ಕಳೇ ನಾ ಹೇಳೋದು ಇಷ್ಟೇ, ನೀವು ಪಡೆದುಕೊಳ್ಳುವ ಶಿಕ್ಷಣದಿಂದ ಮನುಷ್ಯತ್ವ ಮತ್ತು ಮಾನವೀಯ ಗುಣಗಳನ್ನು ಬೆಳಿಸಿಕೊಳ್ಳಿರಿ." ಅಂತ ಹೇಳುತ್ತಾ ತನ್ನೆರೆಡು ಮಾತುಗಳನ್ನು ಮುಗಿಸುತ್ತಾನೆ ಆ ಶಾಲೆಯ ಹಳೆ ವಿದ್ಯಾರ್ಥಿಯಾದ ಪೊಲೀಸ್ ಅಧಿಕಾರಿ.
.............. ಶಿವನಾಗ ಬಸವರಾಜ ಅಡವಳ್ಳಿಮಠ
10ನೇ ತರಗತಿ 
ತುಂಗಭದ್ರಾ ಪ್ರೌಢಶಾಲೆ ಹೂವಿನಹಡಗಲಿ
ತಾಲೂಕು : ಹೂವಿನಹಡಗಲಿ
ಜಿಲ್ಲೆ : ವಿಜಯನಗರ
*******************************************


Ads on article

Advertise in articles 1

advertising articles 2

Advertise under the article