ಕವನಗಳ ರಚನೆ : ಸ್ನೇಹ ನೆಗಳೂರು , 10ನೇ ತರಗತಿ
Wednesday, May 24, 2023
Edit
ಕವನಗಳ ರಚನೆ : ಸ್ನೇಹ ನೆಗಳೂರು
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಯಾರೇ ಇರಲಿ
ತಪ್ಪಾಗಿ ನೋಡುವವರಿಂದ
ಬಡವರೇ ಇರಲಿ
ಅವರ ಹತ್ತಿರದಲ್ಲಿರಲಿ
ನಿನ್ನ ಸ್ನೇಹ
ಪ್ರೀತಿಯಿಂದ ನೋಡುವವರಿಂದ
ನಿನಗೂ ಬೆಲೆ
ಮಾತಿಗೂ ಬೆಲೆ
ನಿನ್ನ ಭಾವನೆಗಳಿಗೂ ಬೆಲೆ....!!
........................................ ಸ್ನೇಹ ನೆಗಳೂರು
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಸಮಸ್ಯೆಗಳು ತಾನಾಗೆ ಬರುತ್ತವೆ
ನಲಿವಿನಿಂದ ನಗುತ್ತಿದ್ದರೆ
ಸ್ನೇಹ ತುಂಬಿ ತುಳುಕುತ್ತದೆ....
ಸ್ನೇಹ ಎನ್ನುವುದು
ಕೂಡಿರಬೇಕು ಹೃದಯದಿಂದ
ಸ್ವಾರ್ಥ ತುಂಬಿದ
ಇನ್ನೊಬ್ಬರ ಮಾತಿನಿಂದಲ್ಲ....
ಜೊತೆಯಲ್ಲೇ ಇರೋಣ
ಸ್ನೇಹದಲ್ಲಿರುವ ಸಂತೋಷವು
ಎಲ್ಲಿಯೂ ಇಲ್ಲವೆಂದು
ಜಗತ್ತಿಗೆಲ್ಲ ಸಾರೋಣ
ಕೆಟ್ಟವರನ್ನು ಬದಲಾಯಿಸಿ
ಜೊತೆಯಲ್ಲಿ ನಿಲ್ಲಿಸಬೇಕು
ಸ್ನೇಹ ಎಂಬ ಕೈ ಹಿಡಿದು
ಸತ್ಪಥದಲ್ಲಿ ನಡೆಸಬೇಕು
ಒಳ್ಳೆಯವರಾಗಿದ್ದರೆ ಹತ್ತಿರ
ಬರುತ್ತಾರೆ ಬಿಟ್ಟು ಮತ್ಸರ
ಸರಿದಾರಿಯಲ್ಲಿ ಜೊತೆಯಾಗಿ
ನಡೆಸುವುದೇ ಸ್ನೇಹ
ಸ್ನೇಹವಿರುವ ಪ್ರಪಂಚ
ಸ್ನೇಹಿತರಿರುವ ಜೀವನ
ರಸ ತುಂಬಿದ ಹಣ್ಣು
ಪರಿಮಳ ಬೀರುವ ಪುಷ್ಪ....!!!
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************