-->
ಕವನಗಳ ರಚನೆ : ಪುಟಾಣಿ ವಿದ್ಯಾರ್ಥಿಗಳು , ಸಿಲ್ವರ್ ಓಕ್ಸ್ ಶಾಲೆ, ಬೆಂಗಳೂರು

ಕವನಗಳ ರಚನೆ : ಪುಟಾಣಿ ವಿದ್ಯಾರ್ಥಿಗಳು , ಸಿಲ್ವರ್ ಓಕ್ಸ್ ಶಾಲೆ, ಬೆಂಗಳೂರು

ಕವನಗಳ ರಚನೆ : ಪುಟಾಣಿ ವಿದ್ಯಾರ್ಥಿಗಳು 
4ನೇ ತರಗತಿ 
ಸಿಲ್ವರ್ ಓಕ್ಸ್ ಶಾಲೆ, ಬೆಂಗಳೂರು

                  
                  ಅಮ್ಮ
               --------------
ಅಮ್ಮನ ಟಪ್ಪುಗರ ಬಲು ಚೆನ್ನಾ
ತಬ್ಬಿ ಮುದ್ದಾಡುತ್ತಾಳೆ ನನ್ನ
ಅಮ್ಮನ ನುಡಿ ಬಲು ಹಿತ
ಅಮ್ಮನ ಹೆಸರು ಸ್ಮಿತ
ಅಮ್ಮನ ಅಡುಗೆ ಬಲು ರುಚಿ
ಅಮ್ಮನ ಅಡುಗೆ ಮನೆ ಬಲು ಶುಚಿ
...................................................... ಸಿಯಾ
4ನೇ ತರಗತಿ 
ಸಿಲ್ವರ್ ಓಕ್ಸ್ ಶಾಲೆ 
ಬೆಂಗಳೂರು
*******************************************
              ಅಮ್ಮ
            --------------
ಅಮ್ಮ ಅಮ್ಮ ನೆಚ್ಚಿನ ಅಮ್ಮ
ನೀ ನನ್ನ ದೇವತೆ 
ಅಮ್ಮ ಒಂಭತ್ತು ತಿಂಗಳು ಹೊತ್ತು 
ನೀ ನೀಡಿದೆ ಜನ್ಮ 
ನೀ ನನಗೆ ಸಹಾಯ ಮಾಡಿ
ತೋರುವೆ ಪ್ರೀತಿ
ಅಮ್ಮ ನೀ ತಿನ್ನಿಸುವೆ ಪ್ರೀತಿಯಿಂದ 
ಬೆಳೆಸಿದೆ ಪ್ರೇಮದಿಂದ 
ನೀ ನನ್ನ ಮೊದಲ ಗುರು
........................................................ ಸಾನ್ವಿ 
4ನೇ ತರಗತಿ 
ಸಿಲ್ವರ್ ಓಕ್ಸ್ ಶಾಲೆ 
ಬೆಂಗಳೂರು
*******************************************
                  ಅಜ್ಜಿ
              --------------
ಅಜ್ಜಿ ಅಜ್ಜಿ ಮುದ್ದಿನ ಅಜ್ಜಿ
ನೀನು ಅಂದರೆ ನನಗೆ ಇಷ್ಟ
     ನೀನು ನನ್ನ ಜೊತೆ ಆಟ ಆಡುತ್ತೀಯ
     ಪಾಠ ಹೇಳಿಕೊಡುತ್ತೀಯಾ
ನೀನು ನನ್ನನ್ನು ಅಕ್ಕರೆಯಿಂದ ಬೆಳೆಸಿದ್ದೀಯಾ 
ನೀನು ಅಂದರೆ ನನಗೆ ಇಷ್ಟ
     ನಾನು ಅತ್ತಾಗ ನಗಿಸುತ್ತೀಯಾ
     ಬಿದ್ದಾಗ ಸಂತೈಸುತ್ತೀಯಾ
     ಹಸಿದಾಗ ತಿನ್ನುಸುತ್ತೀಯಾ
ಅಜ್ಜಿ ಅಜ್ಜಿ ಮುದ್ದಿನ ಅಜ್ಜಿ
ನೀನು ಅಂದರೆ ನನಗೆ ಇಷ್ಟ
........................................................ ಜನ್ಯ
4ನೇ ತರಗತಿ 
ಸಿಲ್ವರ್ ಓಕ್ಸ್ ಶಾಲೆ 
ಬೆಂಗಳೂರು
*******************************************

Ads on article

Advertise in articles 1

advertising articles 2

Advertise under the article