-->
ರಂಜಿತಾ ಶೇತಸನದಿ, ದ್ವಿತೀಯ ಪಿಯುಸಿ ಇವರು ಬರೆದಿರುವ ಕವನ...

ರಂಜಿತಾ ಶೇತಸನದಿ, ದ್ವಿತೀಯ ಪಿಯುಸಿ ಇವರು ಬರೆದಿರುವ ಕವನ...

ಕವನ ರಚನೆ : ರಂಜಿತಾ ಶೇತಸನದಿ
(ಯುವಕವಿಯಿತ್ರಿ) 
ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತಳು
ದ್ವಿತೀಯ ಪಿಯುಸಿ
ಕರ್ನಾಟಕ ವಿದ್ಯಾಲಯ ಧಾರವಾಡ ಕಾಲೇಜು


ಸಂಬಂಧಗಳ ಸಾರಥಿ
ಸರಳ ಸಜ್ಜನಿಕೆಯ ಮೂರುತಿ
ಸಕಲ ಸಾಧಕರಿಗು ಕೀರುತಿ
ಸಾಧನೆಯ ಶಿಖರವನ್ನೇರಿದ ನಿಮಗೆ 
ನನ್ನಿಂದ ಕವನದ ಆರುತಿ
ಸದಾ ಹಸನ್ಮುಖಿಯೊಳಿರುವ ಸಂಜಯ
    ನಿಷ್ಕಲ್ಮಶ ಮನಸ್ಸಿನ ಸಂಜಯ 
    ನೀವು ನಕ್ಕರೆ 
    ಆಗುವುದು ಸೂರ್ಯೋದಯ
    ನೀವು ನಮ್ಮೊಂದಿಗೆ ಇದ್ದಾಗ 
    ಸದಾ ನಮಗೆ ಜಯ
    ಮತ್ಯಾಕೆ ನಮಗೆ ಸೋಲಿನ ಭಯ
    ಸದಾ ಹಸನ್ಮುಖಿಯೊಳಿರುವ ಸಂಜಯ
ಬೆಳೆಯುವ ಸಾಧಕರನ್ನು ಬೆಳೆಸುವರು
ತಾ ಜೊತೆಗೂಡಿ ಪ್ರೋತ್ಸಾಹಿಸುವರು
ಸದಾ ಸಮಾಜ ಸೇವೆಯಲ್ಲಿ ತೊಡಗಿದವರು
ಎಲ್ಲರ ಜೀವನದ ಒಳಿತಿಗೆ ಶ್ರಮಿಸುವರು
ಸದಾ ಹಸನ್ಮುಖಿಯೊಳಿರುವ ಸಂಜಯ
    ಸಕಲ ಸಾಧನೆಯ ಶಿಖರವನ್ನೇರಿದರು 
    ಕೊಂಚ ಕೂಡ ಇಲ್ಲ ಅಹಂಕಾರ
    ಸುಜನರನ್ನು ಪ್ರೀತಿಯಿಂದ ಕಾಣುವ 
    ವಾರಸುದಾರ
    ಮುಗ್ಧ ಮಾತಿನಿಂದ ಎಲ್ಲರ 
    ಮನಸ್ಸನ್ನು ಗೆದ್ದ ಸಾಹುಕಾರ 
    ನನ್ನ ನಮದೋಳು ಬಿತ್ತಿದೆ 
    ಸಾಧನೆಯ ಹರಿಕಾರ
    ಸದಾ ಹಸನ್ಮುಖಿಯೊಳಿರುವ ಸಂಜಯ
ಯಾವ ಕೆಲಸದಲ್ಲೂ ಮೇಲು ಕೀಳೆಂಬ 
ಭೇದ ತೋರದವರು
ಎಲ್ಲಾ ಕೆಲಸದಲ್ಲೂ ಕ್ರೀಯಾಶೀಲತೆ ಉಳ್ಳವರು
ಮಕ್ಕಳೊಂದಿಗೆ ತಾ ಮಕ್ಕಳಾಗಿ ರಂಜಿಸುವರು
ಹಿರಿಯರೋಡಗೂಡಿ ತಾ ಗೌರವ ನೀಡುವರು
ಸದಾ ಹಸನ್ಮುಖಿಯೊಳು ಸಂಜಯ
     ಶುಭಗಳಿಗೆಯಲ್ಲಾಯ್ತು ನಿಮ್ಮ ಜನನ
     ನಿಮಗೆ ಜನ್ಮ ನೀಡಿದ 
     ಜನ್ಮದಾತರಿಗೆ ನಮ್ಮ ನಮನ
     ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ      
     ನಿಮಗೆ ನಮ್ಮ ಹೂರಣ
     ನಿಮ್ಮ ಸಾಧನೆಯೇ 
     ಎಲ್ಲರ ನಮದೋಳು ಮನನ
     ಸದಾ ಹಸನ್ಮುಖಿಯೊಳಿರುವ ಸಂಜಯ 
................................... ರಂಜಿತಾ ಶೇತಸನದಿ
(ಯುವಕವಿಯಿತ್ರಿ) 
ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತಳು
ದ್ವಿತೀಯ ಪಿಯುಸಿ
ಕರ್ನಾಟಕ ವಿದ್ಯಾಲಯ ಧಾರವಾಡ ಕಾಲೇಜು
*******************************************


Ads on article

Advertise in articles 1

advertising articles 2

Advertise under the article