ಕವನ ರಚನೆ : ದೇವಪ್ಪ ರೋಡಗಿ, ದ್ವಿತೀಯ ಪಿಯುಸಿ
Thursday, April 6, 2023
Edit
ಕವನ ರಚನೆ : ದೇವಪ್ಪ ರೋಡಗಿ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ...
ಕಲಬುರಗಿ ಜಿಲ್ಲೆ, ಮಣ್ಣೂರ
ಸೀರೆ ಉಟ್ಟ ಶ್ರೀದೇವಿಯು ನನ್ನಮ್ಮ
ಅಂಧಕಾರದ ಆಸೆ ಇಲ್ಲದವಳು ನನ್ನಮ್ಮ
ನಿನಗಾಗೀ.. ಪುಟ್ಟ ಕಂದನ ಪ್ರಣಾಮ
ನನ್ನ ಹೊತ್ತು ಹೆತ್ತವಳು ನನ್ನಮ್ಮ
ನವಮಾಸದ ನೋವು ಉಂಡವಳು ನನ್ನಮ್ಮ
ನನ್ನ ಎತ್ತಿ ಆಡಿಸಿದವಳು ನನ್ನಮ್ಮ
ಎನ್ನ ಮುದ್ದಿಸಿ ಕರೆದವಳು ನನ್ನಮ್ಮ
ತೊಟ್ಟಿಲು ತೂಗಿದವಳು ನನ್ನಮ್ಮ
ಬೆರಳಿನಿಂದ ಬೆಣ್ಣೆ ತಿನಿಸಿದವಳು ನನ್ನಮ್ಮ
ಕೋಗಿಲೆಯ ಕಂಠದವಳು ನನ್ನಮ್ಮ
ಜೋಗುಳ ಹಾಡಿದವಳು ನನ್ನಮ್ಮ
ತುತ್ತಿಟ್ಟು ಉಣಿಸಿದವಳು ನನ್ನಮ್ಮ
ಮುತ್ತಿಟ್ಟು ಬೆಳೆಸಿದವಳು ನನ್ನಮ್ಮ
ಅತ್ತಾಗ ನಗಿಸಿದವಳು ನನ್ನಮ್ಮ
ಸೋತಾಗ ಗೆಲಿಸಿದವಳು ನನ್ನಮ್ಮ
ಮಾಮರದ ರೆಂಬೆಯು ನನ್ನಮ್ಮ
ಕೊಂಬೆಯ ಕಾಯಿಯು ನಾನಮ್ಮ
ಶ್ರೀಗಂಧದ ಪರಿಮಳ ನನ್ನಮ್ಮ
ಎನ್ನ ಜೀವಕೆ ಜೀವ ನನ್ನಮ್ಮ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ...
ಕಲಬುರಗಿ ಜಿಲ್ಲೆ, ಮಣ್ಣೂರ
*******************************************