-->
ಕವನ ರಚನೆ : ಮೌನೇಶ ಬಾರಕೇರ, ಪ್ರಥಮ ಪಿಯುಸಿ

ಕವನ ರಚನೆ : ಮೌನೇಶ ಬಾರಕೇರ, ಪ್ರಥಮ ಪಿಯುಸಿ

ಕವನ ರಚನೆ : ಮೌನೇಶ ಬಾರಕೇರ
ಪ್ರಥಮ ಪಿಯುಸಿ
ಪ್ರಭವಿತುಂ ಪಿ ಯು ಕಾಲೇಜ್ ಮಸ್ಕಿ. 
ತಾಲ್ಲೂಕು ಮಸ್ಕಿ. ಜಿಲ್ಲೆ ರಾಯಚೂರು.
                                        

ಬೆಂದಕಾಳೂರು ತಂತು
ನೂರಾರು ಕೆಲಸವ
ಮೊದಲಬಾರಿ ನಡೆದ
ಈ ಹಳ್ಳಿ ಬಡವ
        ದಿನಗಳುರುಳಿದವು
        ಅನ್ನಕ್ಕೆ ಧಿಕ್ಕಾರವಿಲ್ಲದೆ
        ತಿಳಿದು ದುಡಿದನು
        ಜೀವ ತನ್ನದಲ್ಲದೆ!.
ಗಳಿಸಿದ ಬೆರಗಾಗುವಷ್ಟು
ಸುರಿದಿಟ್ಟನು ಗಳಿಸಿದಷ್ಟು
ಕಂಡರೂ ತನ್ನವರು
ಅವರಿಗಾಗಲೇ ಆಸೆ ಹುಟ್ಟಿತ್ತು
        ಊರೇ ಹೊರಟಿತು
        ಇವನ ಬಡಾವಣೆಗೆ
        ಬೆಂದಕಾಳೂರು ತಿರುಗಿತು
        ಬೆಂಗಳೂರಿನವರೆಗೆ
ಬೆಂಗಳೂರು ಬಂದಿತು, ಹಣದಾಸೆ 
ಜನ-ಜಂಗುಳಿನ ಸೆಳೀತು.!.
ಈ ನಗರಕ್ಕೆ ನಮ್ಮ ಹಳ್ಳಿ ಮನೆ ಸೋತಿತು..!!
ಯಾರಿಲ್ಲ ಈ ಮನೇಲಿ 
ಮುದುಕ ಮುದುಕಿಯಾ ಹೊರತು....!!?!
.................................... ಮೌನೇಶ ಬಾರಕೇರ
ಪ್ರಥಮ ಪಿಯುಸಿ
ಪ್ರಭವಿತುಂ ಪಿ ಯು ಕಾಲೇಜ್ ಮಸ್ಕಿ. 
ತಾಲ್ಲೂಕು ಮಸ್ಕಿ. ಜಿಲ್ಲೆ ರಾಯಚೂರು.
*******************************************

Ads on article

Advertise in articles 1

advertising articles 2

Advertise under the article