ಕವನ ರಚನೆ : ಧನುಷ್ ನಾಯ್ಕ್ , ದ್ವಿತೀಯ ಪಿಯುಸಿ
Monday, April 24, 2023
Edit
ಕವನ ರಚನೆ : ಧನುಷ್ ನಾಯ್ಕ್
ದ್ವಿತೀಯ ಪಿಯುಸಿ
ಶ್ರೀ ಭುವನೇಂದ್ರ ಕಾಲೇಜ್
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ನೋಡಲು ಎಷ್ಟು ಚಂದ
ಬಣ್ಣಬಣ್ಣದ ಹೂವು ಅರಳುತ್ತಿರಲು
ಮನಸಿಗೇನೋ ಆನಂದ
ಬೆಳಿಗ್ಗಿನ ಹಕ್ಕಿಗಳ ಚಿಲಿಪಿಲಿ ಕಲರವ
ಮನಸಿಗಾಗುವುದು ಹೊಸತನದ ಅನುಭವ
ನಿಶ್ಶಬ್ದವಾದ ಬೆಳಿಗ್ಗಿನ ವಾತಾವರಣ
ದುಃಖವ ಮರೆಯಲು ಅದ್ಭುತ ತಾಣ
ಹಚ್ಚ ಹಸುರಿನ ಸುಂದರವಾದ ಕಾಡು
ಕಾಡಿನ ಪ್ರಾಣಿ ಪಕ್ಷಿಗಳ ಕಲರವ ನೋಡು
ನವಿಲು ನಲಿದಾಡುತಿಹುದು ತೋಟದಲ್ಲಿ
ಗೂಡು ಕಟ್ಟಿದೆ ಹಕ್ಕಿ ಮರದಲ್ಲಿ
ಈ ನಮ್ಮ ಚಂದದ ಪರಿಸರ
ಕಣ್ಣಿಗೆ ನೋಡಲು ಬಲು ಮನೋಹರ
ಪ್ರಕೃತಿಯಲ್ಲಿರುವ ಈ ಆನಂದ
ಬೇರೆಲ್ಲೂ ಸಿಗದು ಈ ಚಂದ
ನಿಸರ್ಗದಲ್ಲಿರುವ ಹಸಿರಿನ ಮರ
ನೋಡಿದರೆ ನಮ್ಮ ಮನಸ್ಸು ಹಗುರ
ಪರಿಸರ ದೇವರು ಕೊಟ್ಟ ವರ
ನಾಶ ಮಾಡಿದರೆ ಬರುವುದು ಬರ
ದ್ವಿತೀಯ ಪಿಯುಸಿ
ಶ್ರೀ ಭುವನೇಂದ್ರ ಕಾಲೇಜ್
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
*******************************************