ಅಪ್ಪ ಮಾಡಿದ ಹಕ್ಕಿಗೂಡು
Tuesday, April 25, 2023
Edit
ಲೇಖನ : ತ್ವಿಶಾ ಪಾಂಡುರಂಗ ಮೇಸ್ತ
9ನೇ ತರಗತಿ
ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆ
ಸುರತ್ಕಲ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಒಂದು ಸುಂದರವಾದ ಮುಸ್ಸಂಜೆ. ಒಂದು ಹಕ್ಕಿಗಳ ಗುಂಪೇ ನಮ್ಮ ಮನೆ ಕಡೆ ಬಂತು. ಆಹಾ...... ಆ ಸುಂದರ ವಾತಾವರಣಕ್ಕೆ ಸರಿದೂಗಿಸಿದಂತೆ ಆ ಪಕ್ಷಿಗಳ ಚಿಲಿಪಿಲಿ ನಾದ. ನಾವೆಲ್ಲ ಅದನ್ನೇ ನೋಡಿ ಕುಳಿತೆವು. ಇದಕ್ಕೆಲ್ಲಾ ಕಾರಣ ನನ್ನ ಅಪ್ಪ. ಅಪ್ಪನಿಗೆ ಎಲ್ಲಿಂದ ತಲೆ ಹೊಳೆಯಿತೋ ಗೊತ್ತಿಲ್ಲ ಕೊರೋನ ಸಮಯದಲ್ಲಿ ನಾವೆಲ್ಲಾ ಮನೆಯಲ್ಲಿ ಇರ್ತಿದ್ವಲ್ಲ ಆಗ ಅವರು ಗೋಣಿಚೀಲ ಕತ್ತರಿಸಿ ತೆಂಗಿನ ನಾರನ್ನು ಹಾಕಿ ಏನೋ ಮಾಡುತ್ತಿದ್ದರು. "ಏನು ಮಾಡುತ್ತಿದ್ದೀರಿ? ಅಪ್ಪ" ಅಂತ ಕೇಳಿದೆ. "ನೀವೇ ನೋಡಿ ಮತ್ತೆ" ಅಂತ ಹೇಳಿದ್ರು. ಎರಡು ಮೂರು ಸಲ ಕೇಳಿದ್ವಿ. ಏನೂ ಹೇಳಿಲ್ಲ ಅದಕ್ಕೆ ಸುಮ್ಮನೆ ಅವರು ಮಾಡುವುದನ್ನು ನೋಡ್ತಾ ಕೂತ್ಕೊಂಡ್ವಿ. ಕೊನೆಗೂ ಆಯ್ತು! ಆಮೇಲೆ ಗೊತ್ತಾಯ್ತು ಅವರು ಮಾಡಿರೋದು ಹಕ್ಕಿಗೂಡು ಅಂತ. ನಮ್ಮ ಮನೆಯ ಎದುರಿನ ತುಳಸಿ ಕಟ್ಟೆ ಹತ್ರ ಇರೋ ಚಿಕ್ಕದಾದ ಬೇವಿನಮರಕ್ಕೆ ಆ ಗೂಡನ್ನು ನೇತಾಕಿದ್ದರು. ಏನ್ ಮಜಾ ಗೊತ್ತಾ... ಆ ಗೂಡಿಗೆ ಎರಡು ಮೂರು ತಿಂಗಳಾದರೂ ಒಂದೇ ಒಂದು ಪಕ್ಷಿ ಸಹ ಬರಲಿಲ್ಲ. ಅಪ್ಪನಿಗೆ ತಮಾಷೆ ಮಾಡ್ತಿದ್ವಿ. ನೀವು ಮಾಡಿರೋದು ವೇಸ್ಟ್ ಅಂತ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಒಂದು ಪಕ್ಷಿ ಬಂತು. ನಮಗೆಲ್ಲ ತುಂಬಾ ಖುಷಿ ಅನ್ನಿಸ್ತು, ನಂತರ ಎರಡು ಹಕ್ಕಿಗಳು ಆ ಗೂಡಿನಲ್ಲಿ ಕಾಣಿಸಿತು. ಕ್ರಮೇಣ ಆ ಗೂಡಿನಲ್ಲಿ ಎಂಟತ್ತು ಪಕ್ಷಿಗಳು ಸಂಜೆ ಹೊತ್ತಲ್ಲಿ ಪುರ್ರನೆ ಬಂದಿದ್ದು ನೋಡಿ ನನ್ನ ಅಮ್ಮನಿಗೆ ಖುಷಿಯೋ ಖುಷಿ. ಇದನ್ನು ಅವರು ವಿಡಿಯೋ ಮಾಡಿದರು. ಅದನ್ನು ನೋಡಿ ಅಪ್ಪ ಇನ್ನೊಂದು ಗೂಡನ್ನು ಮಾಡಿದರು. ಆದರೆ ಅದರಲ್ಲಿ ಇನ್ನೂ ತನಕ ಒಂದು ಪಕ್ಷಿ ಬರಲಿಲ್ಲ. ನಮ್ಮ ಮನೆಗೊಂದು ಯಾರೋ ಬಿಟ್ಟು ಹೋದ ಬೆಕ್ಕು ಬಂತು. ಅದನ್ನು ನಾವೇ ಸಾಕಿದ್ವಿ. ಅದು ದೊಡ್ಡದಾಯಿತು. ಆದರೆ ಅದು ಮರ ಹತ್ತಿ ಆ ಪಕ್ಷಿಗಳನ್ನು ತಿನ್ನಲು ಗೂಡನ್ನು ಹರಿಯಿತು ಒಂದಿನ ಅದು ಸಿಕ್ಕಿ ಬಿತ್ತು. ಆಕೃತಿ ಕೆಡಿಸಿದ್ದ ಗೂಡಲ್ಲಿ ಪಕ್ಷಿಗಳು ಇನ್ನು ಬರುತ್ತಿವೆ. ಸ್ನೇಹಿತರೆ ನಾವೆಲ್ಲ ಇದೇ ರೀತಿ ಗೂಡನ್ನು ನಮ್ಮ ಮನೆಯ ಹಿತ್ತಲಲ್ಲಿ ಅಥವಾ ಸುತ್ತಮುತ್ತಲು ಕಟ್ಟಿ ಪಕ್ಷಿ ಸಂಕುಲ ಬೆಳೆಯಲು ಸಹಕರಿಸೋಣ ಥ್ಯಾಂಕ್ಯೂ ಅಪ್ಪ. ............................ ತ್ವಿಶಾ ಪಾಂಡುರಂಗ ಮೇಸ್ತ
9ನೇ ತರಗತಿ
ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆ
ಸುರತ್ಕಲ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************