ಬೇಸಿಗೆ ರಜೆಯ ಅನುಭವ : ಲೇಖನ : ಸಪ್ತಮಿ ಅಶೋಕ್ ದೇವಾಡಿಗ
Monday, April 24, 2023
Edit
ಲೇಖನ : ಸಪ್ತಮಿ ಅಶೋಕ್ ದೇವಾಡಿಗ
8ನೇ ತರಗತಿ ,
ಶುಭದ ಆಂಗ್ಲ ಮಧ್ಯಮ ಶಾಲೆ ಕಿರಿಮಂಜೇಶ್ವರ,
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ನಮಸ್ತೆ ಸ್ನೇಹಿತರೆ. ಫೆಬ್ರವರಿ-ಮಾರ್ಚ್ ತಿಂಗಳು ಬಂದಿತೆಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಕಾಡುವ ಭಯವೆಂದರೆ ಅದು ಪರೀಕ್ಷೆ. ಅಷ್ಟೇ ಅಲ್ಲದೆ ಈ ವರ್ಷದಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ. ಅದು ಸಹ ಪಬ್ಲಿಕ್ ಪರೀಕ್ಷೆಯೋ ಅಥವಾ ಶಾಲಾ ಮಟ್ಟದ ಪರೀಕ್ಷೆಯೋ ಎಂಬ ಗೊಂದಲವು ನಮ್ಮೆಲ್ಲರಲ್ಲಿ ಮೂಡಿಬಂದಿತ್ತು. ಹಲವು ಗೆಳೆಯರಿಗೆ ಪಬ್ಲಿಕ್ ಪರೀಕ್ಷೆ ಬೇಕು ಇನ್ನು ಕೆಲವು ಸ್ನೇಹಿತರಿಗೆ ಪಬ್ಲಿಕ್ ಪರೀಕ್ಷೆ ಬೇಡ. ಆದರೇನು ಸರ್ಕಾರವು ಪಬ್ಲಿಕ್ ಪರೀಕ್ಷೆ ಎಂದು ನಿರ್ಧಾರ ಮಾಡಿತು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕವನ್ನು ಗಳಿಸಿದ್ದು ಹಾಗೂ ನನ್ನ ಎಲ್ಲಾ ಸ್ನೇಹಿತರು ಕೂಡ ಉತ್ತಮ ಶ್ರೇಣಿಯನ್ನು ಗಳಿಸಿದ್ದಾರೆ ಎನ್ನುವುದು ಸಂತೋಷದ ವಿಷಯ. ಅಂತೂ ಇಂತೂ ಕಡೆಗೂ ಪರೀಕ್ಷೆ ಮುಗಿಯಿತು. ಬೇಸಿಗೆ ರಜೆಯಿಂದ ಪರೀಕ್ಷೆ ವೆಂದರೆ ಭಯಪಡುತ್ತಿದ್ದ ನಾನು ಮತ್ತು ನನ್ನ ಎಲ್ಲಾ ಸ್ನೇಹಿತರ ಮನಸ್ಸು ನಿರಾಳವಾಯಿತು ಎಂಬುದಂತೂ ನಿಜ.
ಇನ್ನೇನು ಕೇವಲ ಮೋಜು-ಮಸ್ತಿ. ಪೆನ್ನು-ಪುಸ್ತಕ ಹಿಡಿದುಕೊಳ್ಳುವ ಕೈಗಳಲ್ಲಿ ಬಾಲ್-ಬ್ಯಾಟ್ ಹಿಡಿಯುವಂತೆ ಮಾಡಿತು. ನಾನು ಹಿಂದಿನ ವರ್ಷ ಬಹಳ ಅದ್ಭುತವಾಗಿ ಬೇಸಿಗೆ ರಜೆ ದಿನಗಳನ್ನು ನನ್ನ ತಂದೆಯ ಮನೆಯಲ್ಲಿ ಕಳೆದಿದ್ದೆ. ಆ ವರ್ಷ ನಾನು ಹಲವಾರು ಕಡೆ ಪ್ರವಾಸಕ್ಕೆ ಹೋಗಿದ್ದೆ. ಆದರೆ ಈ ವರ್ಷ ನಾನು ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ. ಅಲ್ಲಿ ನಾನು ಸಮಯವನ್ನು ಹೇಗೆ ಕಳೆಯುವುದು ಎಂದು ಗೊತ್ತಾಗಲಿಲ್ಲ. ಹಲವಾರು ಆಟವಾಡುತ್ತಿದ್ದೆ, ಕೇವಲ ಗುರುಗಳು ಹೇಳಿರುವ ಗೃಹ ಕಾರ್ಯ (ಹೋಂ ವರ್ಕ್) ವನ್ನು ಮಾತ್ರ ಮಾಡುತ್ತಿದ್ದೆ. ಹೆಚ್ಚಿನ ಸಮಯವನ್ನು ನಾನು ನಿದ್ರೆ ಮಾಡುವಲ್ಲಿ ಹಾಗೂ ತಿನ್ನುವುದರಲ್ಲಿ ಕಳೆಯುತ್ತಿದ್ದೆ. ಇಂತಹ ಪ್ರಸಂಗದಲ್ಲಿ ನಾನು ಚಿತ್ರ ಬಿಡಿಸುವ ಹವ್ಯಾಸವನ್ನು ಕಂಡುಕೊಂಡೆ. ನಾನು ಬಿಡಿಸಿರುವ ಚಿತ್ರವನ್ನು ನೋಡಿ ನನಗೆ ಅಚ್ಚರಿಯಾಯಿತು. ಮನೆಯಲ್ಲಿ, ಶಾಲೆಯಲ್ಲಿ ಯಾರಾದರೂ ನನ್ನ ಹತ್ತಿರ ಚಿತ್ರ ಬಿಡಿಸು ಎಂದು ಹೇಳಿದರೆ ಓಡಿ ಹೋಗುತ್ತಿದ್ದ ನಾನು ಇಂದು ಚಿತ್ರ ಬಿಡಿಸಲು ನನ್ನಿಂದ ಸಾಧ್ಯವೆಂದು ನಾನು ತಿಳಿದೆ. ಈ ಘಟನೆಯು ಹಿರಿಯರು ಹೇಳಿರುವ "ಅಸಾಧ್ಯವೆಂಬುದು ಯಾವುದೂ ಇಲ್ಲ" ಎಂಬ ನುಡಿ- ಮಾತಿಗೆ ಸಮಾನವಾಗಿದೆ. ಸಾಧ್ಯವಾಗದು ಎಂದು ನಾನು ಸುಮ್ಮನೆ ಕುಳಿತಿದ್ದರೆ ಇಂದು ನಾನು ಆ ಹವ್ಯಾಸವನ್ನು ಕಂಡುಕೊಳ್ಳುವುದಿಲ್ಲವಾಯಿತು. ಹಾಗಾಗಿ ನನ್ನ ನೆಚ್ಚಿನ ಸ್ನೇಹಿತರೆ ಬೇಸಿಗೆ ರಜೆಯನ್ನು ಹೇಗೆ ಕಳೆಯುವುದೆಂದು ಯೋಚಿಸುವುದನ್ನು ಬಿಟ್ಟು ಹೊಸ ಹೊಸ ಹವ್ಯಾಸವನ್ನು ಹಾಗೂ ಮೌಲ್ಯಭರಿತವಾದ ಶಿಕ್ಷಣವನ್ನು ಬೆಳೆಸಿಕೊಳ್ಳಬೇಕೆನ್ನುವುದು ನನ್ನ ಅನಿಸಿಕೆಯಾಗಿದೆ. ನಾನು ನನ್ನ ಮುಂದಿನ ಬೇಸಿಗೆ ರಜೆ ಅನಿಸಿಕೆಯನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುತ್ತೇನೆ. ನಿಮ್ಮ ಸಂತೋಷವನ್ನು ಬಯಸುತ್ತಾ ಈ ಲೇಖನಕ್ಕೆ ನಾನು ಮುಕ್ತಾಯವನ್ನು ಹೇಳುತ್ತೇನೆ. ಧನ್ಯವಾದಗಳು
8ನೇ ತರಗತಿ ,
ಶುಭದ ಆಂಗ್ಲ ಮಧ್ಯಮ ಶಾಲೆ ಕಿರಿಮಂಜೇಶ್ವರ,
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
*******************************************