-->
 ಸಿ ಎ - ಕನಸಿನ ಮುನ್ನ

ಸಿ ಎ - ಕನಸಿನ ಮುನ್ನ

ಲೇಖಕರು : ರಶ್ಮಿತಾ
ಚಾರ್ಟರ್ಡ್ ಅಕೌಂಟೆಂಟ್
'ಭರಣಿ', ಬಿಜೈ ಕಪಿಕಾಡ್
ಬಾಳೆಬೈಲ್ ರೋಡ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
            
          ಬ್ಯಾಂಕಿಂಗ್, ಹಣಕಾಸು ವ್ಯವಹಾರ ಹಾಗೂ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಹುದ್ದೆ ಕೂಡ ಒಂದು. 
      ಲೆಕ್ಕ ಪರಿಶೋಧಕರೆಂದರೇನು ....? ಲೆಕ್ಕಪರಿಶೋಧಕರಾಗಲು ಏನು ಮಾಡಬೇಕು? ಯಾವ ಪರೀಕ್ಷೆ ಬರೆಯಬೇಕು? ಶೈಕ್ಷಣಿಕ ಅರ್ಹತೆ ಏನು? ಇತ್ಯಾದಿ ವಿಷಯಗಳನ್ನು ಇಲ್ಲಿ ಅರ್ಥೈಸಿಕೊಳ್ಳೋಣ.
      ಸಿಎ ಅಥವಾ ಚಾರ್ಟೆಡ್ ಅಕೌಂಟೆಂಟ್ ಅಥವಾ ಲೆಕ್ಕ ಪರಿಶೋಧಕರು. ಈ ಪದವಿ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ (ICAI) ಯಿಂದ ಸ್ವೀಕರಿಸಲ್ಪಡುತ್ತದೆ ಈ ಅಧ್ಯಯನ ಮಾಡಲು ಪ್ರಮುಖವಾಗಿ ಮೂರು ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
1. ಫೌಂಡೇಶನ್ - ಪ್ರವೇಶ ಪರೀಕ್ಷೆ
2. ಇಂಟರ್ ಮೀಡಿಯೆಟ್ - ಮೂಲ ವಿಷಯಗಳ ಜ್ಞಾನ
3. ಫೈನಲ್ - ಅಂತಿಮ ಪರೀಕ್ಷೆ - ಮೂಲ ವಿಷಯಗಳ ಜ್ಞಾನ ಹಾಗೂ ಪ್ರಯೋಗಗಳು
    ಸಿ ಎ ಪ್ರವೇಶ ಪರೀಕ್ಷೆ ಬರೆಯಬೇಕಾದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ನಂತರ ನೋಂದಣಿ ಮಾಡಬಹುದು. ಆದರೆ ಪರೀಕ್ಷೆ ಬರೆಯಲು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಉತ್ತೀರ್ಣರಾಗಿರಬೇಕು. ನೋಂದಣಿಯಾದ ಕನಿಷ್ಠ ನಾಲ್ಕು ತಿಂಗಳ ನಂತರ ಪರೀಕ್ಷೆ ಬರೆಯಬಹುದು. ಆದರೆ ಪದವಿ ಅಥವಾ ಅತ್ಯುನ್ನತ ಪದವಿ ಶೇಕಡ 55 ಅಂಕ ಪಡೆದವರು ಹಾಗೂ ICSI ಅಥವಾ ICMA ಪರೀಕ್ಷೆ ಉತ್ತೀರ್ಣರಾದವರು ಪ್ರವೇಶ ಪರೀಕ್ಷೆ ಬರೆಯಬೇಕಾಗಿಲ್ಲ. ನೇರವಾಗಿ ಇಂಟರ್ ಮೀಡಿಯೆಟ್ ಪರೀಕ್ಷೆ ಬರೆಯಬಹುದು.
      ಪ್ರವೇಶ ಪರೀಕ್ಷೆ ತೇರ್ಗಡೆಯಾದ ನಂತರ ಇಂಟರ್ ಮೀಡಿಯೆಟ್ ಪರೀಕ್ಷೆಗೆ ನೋಂದಣಿ ಮಾಡಿ ಎಂಟು ತಿಂಗಳಲ್ಲಿ (8 ವಿಷಯಗಳು) ಅಧ್ಯಯನ ಮಾಡಿ ಪರೀಕ್ಷೆಯನ್ನು ಬರೆಯಬಹುದು. ಇದರಲ್ಲಿ ಎರಡು ಗುಂಪು ಅಥವಾ ಹಂತವಿದೆ. ಯಾವುದಾದರೂ ಒಂದು ಅಥವಾ ಎರಡೂ ಹಂತವನ್ನು ಪೂರ್ಣಗೊಳಿಸಿದರೆ ಪ್ರಾಕ್ಟೀಸ್ ಮಾಡುತ್ತಿರುವ ಲೆಕ್ಕಪರಿಶೋಧಕರೊಡನೆ ಮೂರು ವರ್ಷ ಆರ್ಟಿಕಲ್ ಶಿಪ್ ಮಾಡಬಹುದು. ಇದರ ಮೊದಲು ICAI ನಡೆಸುವ ಕೆಲವು ಕೋರ್ಸ್ ಗಳನ್ನು ಮಾಡಬೇಕಾಗುತ್ತದೆ.
        ಎರಡೂ ಇಂಟರ್ ಹಂತಗಳನ್ನು ಮುಗಿಸಿದ ನಂತರ, ಅಂತಿಮ ಪರೀಕ್ಷೆಗೆ ನೋಂದಣಿ ಮಾಡಿ, ಆರ್ಟಿಕಲ್ ಶಿಪ್ ನ 2 ರಿಂದ 5 ವರ್ಷಗಳಲ್ಲಿ ICAI ಕೋರ್ಸುಗಳನ್ನು ಮುಗಿಸಿ, ಅಂತಿಮ ಪರೀಕ್ಷೆಯನ್ನು ಬರೆಯಬಹುದು. ಇದರ ಎರಡು ಹಂತಗಳನ್ನು (8 ವಿಷಯಗಳು) ಪೂರ್ಣಗೊಳಿಸಿದ್ದಲ್ಲಿ CA ಪದವಿ ನಮ್ಮದಾಗುತ್ತದೆ. ಆದರೆ ಈ ಎಲ್ಲಾ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಾದರೆ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ ಶೇಕಡ 40 ಅಂಕ ಹಾಗೂ ಒಟ್ಟು ಕನಿಷ್ಠ ಶೇಕಡ 50 ಅಂಕ ಗಳಿಸಲೇಬೇಕು. 
       ಇತರ ಅಧ್ಯಯನಗಳಿಗೆ ಹೋಲಿಸಿದರೆ ಈ ಪದವಿಯು ಕಡಿಮೆ ಖರ್ಚು ಬೀಳುವ ಅಧ್ಯಯನವಾಗಿದೆ. ಆದರೆ ದೇಶದಲ್ಲೇ ಕಠಿಣ ಅಧ್ಯಯನಗಳಲ್ಲಿ ಒಂದಾಗಿದೆ. ಆದರೆ ಏಕಾಗ್ರತೆ ಸತತ ಪರಿಶ್ರಮ ಹಾಗೂ ಛಲವಿದ್ದಲ್ಲಿ ಯಾರಾದರೂ ಇದನ್ನು ಸಾಧಿಸಬಹುದೆಂಬುದು ನನ್ನ ಅನಿಸಿಕೆ.
...................................................... ರಶ್ಮಿತಾ
ಚಾರ್ಟರ್ಡ್ ಅಕೌಂಟೆಂಟ್
'ಭರಣಿ', ಬಿಜೈ ಕಪಿಕಾಡ್
ಬಾಳೆಬೈಲ್ ರೋಡ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Ph : 7353359497
******************************************


Ads on article

Advertise in articles 1

advertising articles 2

Advertise under the article