-->
ಕವನ ರಚನೆ : ಚೈತ್ರ ಯು, 9ನೇ ತರಗತಿ

ಕವನ ರಚನೆ : ಚೈತ್ರ ಯು, 9ನೇ ತರಗತಿ

ಕವನ ರಚನೆ : ಚೈತ್ರ ಯು
9ನೇ ತರಗತಿ
ಸರಕಾರಿ ಪ್ರೌಡ ಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ.

ಚೈತ್ರ ಯು, 9ನೇ ತರಗತಿ ಇವರು ಬರೆದಿರುವ ಕವನಗಳು......
                                                 
ರೈತ ಎಂದರೆ ಎರಡು ಚಾರಕ್ಷರವಲ್ಲ
ರೈತ ಎಂದಿಗೂ ನಿಸ್ವಾರ್ಥನಲ್ಲ
ರೈತ ಇಲ್ಲದಿದ್ದರೆ ಬೆಳೆಗೆ ಜನ್ಮವಿಲ್ಲ
ರೈತ ಇಲ್ಲದಿದ್ದರೆ ಹೊಟ್ಟೆಗೆ ಊಟ ಇಲ್ಲ
     ರೈತ ಸ್ವಾರ್ಥಕ್ಕಾಗಿ ಎಂದೂ ಬೆಳೆದವನಲ್ಲ
     ಬೆಳೆಯ ಹಣೆಬರಹ ಬರೆದವನು ನೀನು
     ಹಸಿದ ಹೊಟ್ಟೆಗೆ ಅನ್ನ ಹಾಕುವ 
     ಅನ್ನದಾತ ನೀನಾದೆ
     ಬೆಳೆಗೆ ಜನ್ಮ ನೀಡುವ ಜನ್ಮದಾತ ನೀನಾದೆ
ಮಣ್ಣಿನ ಮಗನಂತೆ ಎಂದಿಗೂ ರೈತ
ನಾವು ದೇವರನ್ನು ಪೂಜೆ ಮಾಡಿದರೆ
ಬೆಳೆಯನ್ನು ಪೂಜೆ ಮಾಡುತ್ತಾನೆ ರೈತ 
ಸ್ವಾರ್ಥಿ ನಮಗೆಲ್ಲಾ ಹಣ - ಅಂತಸ್ತು ಮುಖ್ಯ 
ಬೆಳೆಗಾರ ರೈತನಿಗೆ ಹೊಲವೇ ಮುಖ್ಯ
      ಹಸಿದ ಹೊಟ್ಟೆಗೆ ರೈತ ನೀ ದೇವರಾದೆ
      ದೇಶದ ಆರ್ಥಿಕತೆಗೆ ನೀ ಬೆನ್ನೆಲುಬಾದೇ 
      ಎಲ್ಲರ ಹಸಿವನ್ನು ನೀಗುವ ಕರುಣಾಮಯಿ 
      ನಿನ್ನ ನಲಿವಿನ ಬಾಳಿಗೆ ಕೊನೆಯಾಗದಿರಲಿ
................................................. ಚೈತ್ರ ಯು
9ನೇ ತರಗತಿ
ಸರಕಾರಿ ಪ್ರೌಡ ಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ.
*******************************************

        
ನಿನ್ನ ಬಗ್ಗೇ ಹೊಗಳಿದವು 
ಪಾಶ್ಚಿಮಾತ್ಯ ದೇಶಗಳು
ಅಮೆರಿಕಕ್ಕೆ ಭೇಟಿ ನೀಡಿದ 
ಮೊದಲ ಭಾರತೀಯ ನೀನಾದೆ
ನೀನಾದೆ ದೇಶದ ಅರ್ಥಕ್ಕೆ ತತ್ವಜ್ಞಾನಿ
ನಿನ್ನನ್ನು ಅರಿತರೆ ವೇದವನ್ನು ಅರಿತಂತೆ
       ನಿನ್ನ ಈ ಜೀವನನ್ನು ಬರೆದರು 
       ಲೇಖನದಿ ರಾಷ್ಟ್ರಕವಿ ಕುವೆಂಪುರವರು 
       ನೀನು ಭೋದಿಸಿದೆ ರಾಷ್ಟ್ರೀಯ ಪ್ರಜ್ಞೆ
       ಸದಾಕಾಲ ಇರಲಿ ಎಲ್ಲರಲ್ಲೂ ಜಾಣ್ಮೆ
       ಎಲ್ಲ ಎಲ್ಲೊಡೆಯ ನೀನು ಜಗದೀಶ 
       ಪ್ರೀತಿಯ ರಾಮಕೃಷ್ಣ ಪರಮಹಂಸರ ಶಿಷ್ಯಾ 
ಬುದ್ಧ ಕ್ರೈಸ್ತರು ಇಲ್ಲ ರಾಮ ರಹಿಮರು ಇಲ್ಲ
ಸ್ವತಂತ್ರ ಸಂಗ್ರಾಮಕ್ಕೆ ಪ್ರೇರಣೆ ನೀಡಿದೆ
ನಿನ್ನ ಬಗ್ಗೆ ಹುಟ್ಟು ಸ್ಫೂರ್ತಿಯ ನೆನಪುಗಳು
ಬೆಳೆದಿಹ ಮಂದಿಗೆ ನಿನ್ನ ಮಾತೇ ಒನಪುಗಳು 
       ನಿನ್ನ ಬಗ್ಗೆ ಹೊಗಳಲು ನುಡಿಗಳಿಲ್ಲ 
       ನಿನ್ನ ಬಗ್ಗೆ ಬರೆಯಲು ಪುಸ್ತಕ ಸಾಕಾಗಲ್ಲ
       ಓ ನನ್ನ ಭಾರತಾಂಬೆಯ ಕಂದ 
       ನೀನೇ ನನ್ನ ಸ್ಪೂರ್ತಿ ಸ್ವಾಮಿ ವಿವೇಕಾನಂದ
................................................. ಚೈತ್ರ ಯು
9ನೇ ತರಗತಿ
ಸರಕಾರಿ ಪ್ರೌಡ ಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ.
*******************************************

                 
ಹೆಣ್ಣು ಎಂಬುದು ಎರಡು ಅಕ್ಷರ ಅಲ್ಲ
ಹೆಣ್ಣಲ್ಲಿ ಇರುವುದು ಸ್ವಾರ್ಥವಲ್ಲ
ಹೆಣ್ಣು ಎಂಬುದು ಸಮಾಜದ ಪಿಡುಗು ಅಲ್ಲ
ಹೆಣ್ಣು ಇಲ್ಲದಿದ್ದರೆ ಈ ಜಗತ್ತು ಉದ್ಧಾರ ಆಗೋದಿಲ್ಲ....!!
       ಹೆಣ್ಣಿಲ್ಲದೆ ಜೀವವಿಲ್ಲ
       ಹೆಣ್ಣಿಲ್ಲದೇ ಜೀವನವಿಲ್ಲ
       ಹೆಣ್ಣಿಲ್ಲಿದಿದ್ದರೆ ಗಂಡಿನ ಸಾಧನೆ ಇಲ್ಲ
       ಹೆಣ್ಣು ಇಲ್ಲದೆ ಇದ್ದರೆ 
       ಈ ಬಾಳು ಬಂಗಾರವಲ್ಲ .....!!
ಹೆಣ್ಣು ಎಂಬುದು ಮಮತೆಯ ದೇವತೆಯಂತೆ
ಹೆಣ್ಣು ಎಂಬುದು ಗಿಡದ ಬೇರಿನಂತೆ
ಹೆಣ್ಣು ಎಂಬುದು ಆಕಾಶದ ನಕ್ಷತ್ರದಂತೆ
ಹೆಣ್ಣು ಎಂಬುದು ಪ್ರಕೃತಿಯ ಹಸಿರಿನಂತೆ
      ಹೆಣ್ಣು ಇಲ್ಲದಿದ್ದರೆ 
      ಚಂದ್ರ ಇಲ್ಲದ ಆಕಾಶದಂತೆ
      ಹೆಣ್ಣು ಮನೆಯಲ್ಲಿ ಇಲ್ಲದಿದ್ದರೆ 
      ಕತ್ತಲೆ ತುಂಬಿದ ಕೋಣೆಯಂತೆ
       ಹೆಣ್ಣೆಂದರೆ ಪ್ರತಿಯೊಂದನ್ನೂ
       ಸಾಧಿಸಬಲ್ಲವಳು
       ಹೆಣ್ಣೆಂದರೆ ಎಲ್ಲದರಲ್ಲೂ 
       ಮುನ್ನುಗ್ಗುವವಳು
       ಕೇವಲ ಮಾತ್ರವಲ್ಲ ಈ ಹೆಣ್ಣು 
       ಈ ಸುಂದರ ಜಗದ ಕಣ್ಣು....!!
................................................. ಚೈತ್ರ ಯು
9ನೇ ತರಗತಿ
ಸರಕಾರಿ ಪ್ರೌಡ ಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ.
*******************************************

Ads on article

Advertise in articles 1

advertising articles 2

Advertise under the article