-->
ಪ್ರೀತಿಯ ಪುಸ್ತಕ : ಸಂಚಿಕೆ - 54

ಪ್ರೀತಿಯ ಪುಸ್ತಕ : ಸಂಚಿಕೆ - 54

ಪ್ರೀತಿಯ ಪುಸ್ತಕ
ಸಂಚಿಕೆ - 54

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                     ಜಮ್ಲೋ ಹೆಜ್ಜೆ ಹಾಕುತ್ತಾಳೆ 
     ಪ್ರೀತಿಯ ಮಕ್ಕಳೇ..... ಕರೋನಾ ಕಾಲ ನಿಮಗೆ ನೆನಪಿರಬಹುದಲ್ಲವೇ? ಶಾಲೆಗಳು ಮುಚ್ಚಿದ್ದವು; ಕೆಲಸಗಳು ನಿಂತು ಹೋಗಿದ್ದವು, ಜನರೆಲ್ಲಾ ಬೇಸರದಿಂದ ಭಯದಿಂದ ಇದ್ದರು. ಯಾವ ಯಾವುದೋ ಊರಿಗೆ ಕೆಲಸಕ್ಕಾಗಿ ಬಂದವರು ತಮ್ಮ ತಮ್ಮ ಊರಿಗೆ ಕಾಲುನಡಿಗೆಯಲ್ಲಿಯೇ ವಾಪಾಸು ತಮ್ಮ ಊರಿಗೆ ವಾಪಾಸು ಹೋಗಬೇಕಾಗಿತ್ತು. ಹಾಗೆ ನಡೆದುಕೊಂಡು ಹೋದ ಸಾವಿರಾರು ಮಂದಿಯಲ್ಲಿ ಜಮ್ಲೊ ಎಂಬ ಪುಟ್ಟ ಹುಡುಗಿಯೂ ಒಬ್ಬಳು. ತೆಲಂಗಾಣದಲ್ಲಿ ಮೆಣಸಿನ ಕಾಯಿ ಹೊಲಕ್ಕೆ ಕೆಲಸಕ್ಕಾಗಿ ಬಂದವಳು, ದೂರದ ಛತ್ತೀಸ್ ಗಡಕ್ಕೆ ತಾನು ಸಂಪಾದಿಸಿದ ಮೆಣಸಿನಕಾಯಿ ಚೀಲ ಹೊತ್ತುಕೊಂಡು ನಡೆದಿದ್ದಳು. ಈ ಪುಟ್ಟ ಹುಡುಗಿ ಅಷ್ಟು ದೂರ ಹೇಗೆ ನಡೆದಿರಬಹುದು? ಕೊನೆಗೂ ತನ್ನ ಅಮ್ಮ ಅಪ್ಪನ ಹತ್ತಿರ ಸೇರಿದಳೇ? ಎಂಬುದು ತಿಳಿಯಲು ಪುಸ್ತಕ ಓದಿ. ಮನಸ್ಸು ತಟ್ಟುವಂತಹ ಚಿತ್ರಗಳು ಇವೆ. ಇಂತಹ ಬೇರೆ ಯಾವ ಕಥೆಗಳು ನಿಮಗೆ ಗೊತ್ತು ಯೋಚನೆ ಮಾಡಿ. ನಿಮ್ಮ ಊರಿನಲ್ಲಿ ಏನಾಯಿತು ಅಂತ ನೆನಪು ಮಾಡಿಕೊಳ್ಳಿ. ನಿಮ್ಮ ಅನುಭವಗಳನ್ನೂ ಬರೆದಿಡಿ. ಈ ಜಮ್ಲೊಗೆ ಏನು ಸಿಗಬೇಕಾಗಿತ್ತು? ಯಾರು ಅವನ್ನು ಕೊಡಬೇಕಾಗಿತ್ತು ಯೋಚನೆ ಮಾಡಿ. 
ಲೇಖಕರು: ಸಮೀನಾ ಮಿಶ್ರಾ
ಅನುವಾದ: ಬೇದ್ರೆ ಮಂಜುನಾಥ್ 
ಚಿತ್ರಗಳು: ತಾರೀಖ ಅಜೀಜ್ 
ಪ್ರಕಾಶಕರು: ನವಕರ್ನಾಟಕ ಪ್ರಕಾಶನ 
ಬೆಲೆ: ರೂ.90/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
......................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article