ಚುಟುಕು ರಚನೆ : ದಿಯಾ ಉದಯ್ ಡಿ ಯು., 4ನೇ ತರಗತಿ
Tuesday, April 18, 2023
Edit
4ನೇ ತರಗತಿ.
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ,
ಕಿಲ್ಪಾಡಿ, ಮೂಲ್ಕಿ.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗೆಳತಿಯರು
--------------------
ಗೆಳತಿಯರೆಂದರೆ ಖುಷಿಯು ನನಗೆ
ಅವರ ಜೊತೆಯಲಿ ಬಹಳ ಸಲಿಗೆ
ಊಟ ತಿಂಡಿಯ ಹಂಚಿ ತಿನ್ನುವೆವು
ಜೊತೆಯಲಿ ಕಲಿತು ಆಟ ಆಡುವೆವು
ಕಾಮನ ಬಿಲ್ಲು
--------------------
ಕಾಮನ ಬಿಲ್ಲಿನ ಬಣ್ಣದ ಒಳಗೆ ಸೇರಿ ಹೋದೆನು
ಅಮ್ಮ ಟೀಚರ್ ಗೆಳತಿಯರಿಗೆ ಟಾಟಾ ಹೇಳಿದೆನು
ಸಂಜೆಯು ಆಗಿ ಸೂರ್ಯನು ಹೋಗಿ ಕತ್ತಲು ಬಂದಿತ್ತು
ಹೊರಗೆ ಬರಲು ದಾರಿಯ ಕಾಣದೆ ಹೆದರಿಕೆ ಆಗಿತ್ತು
ನಾಯಿ
--------------------
ನಮ್ಮ ನಾಯಿಯ ಹೆಸರು ಪಾಂಡು
ತಿಂದು ಆಗಿತ್ತು ಗುಂಡು ಗುಂಡು
ಅಜ್ಜಿಯ ಚಪ್ಪಲಿಯನ್ನು ಮಾಡಿತ್ತು ತುಂಡು
ಹತ್ತು ಪೆಟ್ಟು ಹೊಡೆದರು ಓಡಿಸಿ ನಾಲ್ಕು ರೌಂಡು..
4ನೇ ತರಗತಿ.
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ,
ಕಿಲ್ಪಾಡಿ, ಮೂಲ್ಕಿ.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
*******************************************