ಪಶ್ಚಾತ್ತಾಪ ಕಥೆ - ರಚನೆ : ಪ್ರತ್ಯುಷಾ ಶೆಣೈ, 3ನೇ ತರಗತಿ
Wednesday, April 12, 2023
Edit
ಕಥೆ ರಚನೆ : ಪ್ರತ್ಯುಷಾ ಶೆಣೈ
3ನೇ ತರಗತಿ
ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಒಂದು ಊರಿನಲ್ಲಿ ಪ್ರಿಯ ಎನ್ನುವ ಒಬ್ಬಳು ಹುಡುಗಿ ಇದ್ದಳು. ಅವಳಿಗೆ ಅವಳ ಅಪ್ಪ ಅಂದ್ರೆ ತುಂಬಾ ಇಷ್ಟ. ಅಮ್ಮ ಅಂದ್ರೆ ಅವಳಿಗೆ ಇಷ್ಟವೇ ಇರ್ಲಿಲ್ಲ. ಒಂದು ದಿನ ಅವಳ ಶಾಲೆಯಲ್ಲಿ ಅವಳ ಶಿಕ್ಷಕಿ ಹೇಳ್ತಾರೆ, "ಡಿಸೆಂಬರ್ 26ಕ್ಕೆ ನಿಮ್ಮ ವಾರ್ಷಿಕೋತ್ಸವ ಇದೆ. ಹಾಗಾಗಿ ಎಲ್ಲರೂ ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬನ್ನಿ ಎಂದು. ಪ್ರಿಯಾ ಮನೆಗೆ ಬಂದು ಅವಳ ಅಪ್ಪನ ಹತ್ತಿರ ಹೇಳುತ್ತಾಳೆ. ಅಪ್ಪ "ಡಿಸೆಂಬರ್ 26ಕ್ಕೆ ನನ್ನ ಶಾಲೆಯ ವಾರ್ಷಿಕೋತ್ಸವ ಇದೆ. ನೀನು ಬರಲೇಬೇಕು ನನ್ನ ಕಾರ್ಯಕ್ರಮ ನೋಡಲು" ಅಂತ ಹೇಳ್ತಾಳೆ. ಆಗ ಅಪ್ಪ ಹೇಳ್ತಾರೆ ನೋಡು ಪುಟ್ಟ ಆ ದಿನ ನನಗೆ ಆಫೀಸಿಗೆ ರಜೆ ಹಾಕಲು ಆಗುವುದಿಲ್ಲ. ಹಾಗಾಗಿ ನೀನು ನಿನ್ನ ಅಮ್ಮನನ್ನು ಕರೆದುಕೊಂಡು ಹೋಗು ಅಂತ ಹೇಳ್ತಾರೆ. ಆದರೆ ಪ್ರಿಯನಿಗೆ ಅಮ್ಮನನ್ನು ಕರೆದುಕೊಂಡು ಹೋಗಲು ಇಷ್ಟವೇ ಇರಲಿಲ್ಲ. ಅಮ್ಮ ನೀನು ನನ್ನ ಶಾಲೆಗೆ ಬರುವುದೇ ಬೇಡ. ನನ್ನ ಸ್ನೇಹಿತರೆಲ್ಲರೂ ನಿನ್ನ ಕುರೂಪವಾದ ಮುಖ ನೋಡಿ ನಗ್ತಾರೆ. ನನಗೆ ಎಲ್ಲರೆದುರು ಅವಮಾನ ಆಗುವುದು ಅಂತ ಹೇಳ್ತಾಳೆ. ಇದನ್ನು ಕೇಳಿದ ಪ್ರಿಯಾಳ ಅಪ್ಪ ಮಗಳ ಮಾತು ಕೇಳಿ ತುಂಬಾ ಬೇಸರ ಪಟ್ಟುಕೊಳ್ಳುತ್ತಾರೆ. ಅವರು ಪ್ರಿಯಾ "ನಿನ್ನ ಅಮ್ಮನ ಮುಖ ಹೀಗಾಗಲು ಕಾರಣ ಏನು ಗೊತ್ತಾ...? ನೀನು 3 ವರ್ಷದವಳಿರುವಾಗ ಅಡುಗೆ ಮನೆಯಲ್ಲಿ ಆಟ ಆಡುತ್ತಿದ್ದೆ. ಆಗ ಕುಕ್ಕರ್ ಸಿಡಿದು ನಿನ್ನ ಮೈಮೇಲೆ ಬೀಳುವುದನ್ನು ತಪ್ಪಿಸಲು ನಿನ್ನ ಅಮ್ಮ ಅಡ್ಡ ಬಂದಳು. ಆಗ ಅವಳ ಮುಖಕ್ಕೆ ಕುಕ್ಕರ್ ಸಿಡಿದು ಅವಳ ಮುಖ ವಿರೂಪ ಗೊಂಡಿತು. ಆ ದಿನ ನಿನ್ನ ಅಮ್ಮ ನಿನ್ನನ್ನು ರಕ್ಷಿಸದೆ ಇದ್ದರೆ ಇವತ್ತು ನಿನ್ನ ಮುಖವೂ ಹೀಗೆಯೇ ಕುರೂಪವಾಗುತ್ತಿತ್ತು". ಎಂದರು. ಇದನ್ನು ಕೇಳಿದ ಪ್ರಿಯಾ ತನ್ನ ಕೀಳು ಆಲೋಚನೆಗಾಗಿ ತುಂಬಾ ಪಶ್ಚಾತ್ತಾಪ ಪಡುತ್ತಾಳೆ.
ಮರುಕ್ಷಣವೇ ಅವಳು ಅವಳ ಅಮ್ಮನನ್ನು ತಬ್ಬಿಕೊಂಡು ಅಳಲು ಆರಂಭಿಸಿದಳು. ಅಮ್ಮಾ ನನ್ನನ್ನು ಕ್ಷಮಿಸು. ನಾನು ತಪ್ಪು ಮಾಡಿದೆ ಇನ್ನೆಂದೂ ನಾನು ನಿನ್ನನ್ನು ನೋಯಿಸುವುದಿಲ್ಲ ಎಂದು ಭಾಷೆ ಕೊಟ್ಟಳು. ಪ್ರಿಯಾಳ ಈ ವರ್ತನೆ ಕಂಡು ಅವಳ ಅಪ್ಪ ಅಮ್ಮನಿಗೆ ತುಂಬಾ ಸಂತೋಷವಾಗುತ್ತದೆ.
3ನೇ ತರಗತಿ
ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
*******************************************