ಕಥೆ ರಚನೆ : ಕ್ಷಿತಿ ಹಿಮಾನಿ, 2ನೇ ತರಗತಿ
Wednesday, April 12, 2023
Edit
ಕಥೆ ರಚನೆ : ಕ್ಷಿತಿ ಹಿಮಾನಿ
2ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಒಂದು ಕಾಗೆ ಇತ್ತು. ಅದರ ಜೊತೆಗೊಂದು ಇರುವೆ ಇತ್ತು. ಅವರಿಬ್ಬರೂ ಗೆಳೆಯರು. ಅವರು ದಾರಿಯಲ್ಲಿ ಹೋಗುತ್ತಿರುವಾಗ ಅಲ್ಲಿ ಒಂದು ಸಿಂಹ ಕಂಡಿತು. ಅವರಿಬ್ಬರಿಗೂ ಭಯವಾಯ್ತು. ಅದಕ್ಕೆ ಅವರಿಬ್ಬರು ಅಡಗಿಕೊಂಡರು. ಆಗ ಸಿಂಹ ಏನೋ ಯೋಚನೆಯಲ್ಲಿತ್ತು. ಅದು ಏನಾಗಿರಬಹುದು??? ಕಾಗೆ ಮತ್ತು ಅದರ ಗೆಳೆಯ ಯೋಚಿಸಿದರು. ಅವರಿಬ್ಬರೂ ಸಿಂಹವನ್ನು ನೋಡಲು ಹೋದರು. ಅವರಿಬ್ಬರೂ "ಏನು ಯೋಚನೆ ಗೆಳೆಯಾ ಸಿಂಹ?" ಎಂದು ಕೇಳಿದರು. ಆಗ ಸಿಂಹವು, ಇಲ್ಲ ನಾನದನ್ನು ಹೇಳುವುದಿಲ್ಲ... ಯಾಕೆಂದರೆ ಅದು ತುಂಬಾ ಗಂಭೀರ ವಿಷಯ. ಅದಕ್ಕೆ ನಾನು ಹೇಳುವುದಿಲ್ಲ. ಆಗ ಕಾಗೆ ಮತ್ತು ಇರುವೆ... "ನಾವು ಯಾರಿಗೂ ಹೇಳುವುದಿಲ್ಲ ನಮ್ಮೊಂದಿಗೆ ಹೇಳು" ಎಂದರು.
ಆಗ ಸಿಂಹವು "ಆಯ್ತು ನಾನು ಹೇಳ್ತೇನೆ" ಎಂದು ಹೇಳಿತು. ಆಗ ಸಿಂಹವು, "ಅದೂ....... ನಾನು ಒಂದು ಕಲ್ಲನ್ನು ನೋಡಿದೆ. ನನಗೆ ಅದನ್ನು ನೋಡಿ ಆಶ್ಚರ್ಯ ಆಯ್ತು. ಅದು ಡೈನೋಸಾರ್ ನ ಮೊಟ್ಟೆ! ಅದನ್ನು ಒಡೆದಾಗ ಅದರೊಳಗೆ ಡೈನೋಸಾರ್ ಮಗು ಇತ್ತು. ಅದರ ಜೊತೆಗೆ ಅದರ ಅಮ್ಮ ಕೂಡಾ ಇದ್ದರು. ಆಗ ಅದರ ಅಮ್ಮ.... "ಸಿಂಹವೇ.. ನೀನು ಈ ಡೈನೋಸಾರ್ ನ್ನು ಮನೆಗೆ ತೆಗೆದುಕೊಂಡು ಹೋಗು ಮೂರು ದಿನ ಆದ ಮೇಲೆ ಕೊಡು" ಎಂದು ಹೇಳಿತು. ಆಗ ನಾನು ಆಯ್ತು ಎಂದು ಹೇಳಿದೆ. ನಾನು ಅದನ್ನು ಮನೆಗೆ ತೆಗೆದುಕೊಂಡು ಹೋದಾಗ ಒಂದು ವಿಶೇಷ ಆಯಿತು! ಅದು ಕೂಡಲೇ ದೊಡ್ಡದಾಗುತ್ತಾ ಹೋಯಿತು. ಆಗ ನನ್ನ ಮನೆ ಕೂಡಾ ದೊಡ್ಡದಾಯಿತು. ಮೂರು ದಿನ ಕಳೆದು ಆ ಕಲ್ಲು ಇದ್ದಲ್ಲಿಗೆ ಹೋದೆ. ಆಗ ಅದರ ಅಮ್ಮ ಸಣ್ಣ ಆಗಿದ್ರು... ಆಗ ಮಗು ಡೈನೋಸಾರ್.. ನನ್ನಲ್ಲಿ, ಈಗ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗು" ಎಂದಿತು.ನಾನು ಅದರ ಅಮ್ಮನನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಹೋದಾಗ ಅಮ್ಮ ಕೂಡಲೇ ದೊಡ್ಡದಾಯಿತು. ಆಗ ನಾನು ಇಬ್ಬರಲ್ಲಿಯೂ ಹೇಳಿದೆ.. "ನಾನು ನಿಮ್ಮಿಬ್ಬರನ್ನೂ ಸಾಕುವುದಿಲ್ಲ. ಕಲ್ಲಿನೊಳಗೆ ಹೋಗಿ" ಎಂದು ಹೇಳಿದೆ. ಆಗ ಅಲ್ಲಿಂದ ಕಲ್ಲು ಮಾಯ ಆಗಿತ್ತು!
ಅದಕ್ಕೆ ಅವರಿಬ್ಬರೂ ಈ ಭೂಮಿಯಲ್ಲಿಯೇ ಉಳಿದುಕೊಂಡು ಅವರಿಬ್ಬರ ನಂತರ ಅವರ ಮಕ್ಕಳು ದೊಡ್ಡದಾಗುತ್ತಾ ಭೂಮಿ ತುಂಬಾ ಡೈನೋಸಾರ್ ಗಳಾದವು. ಹೀಗೆ ಡೈನೋಸಾರ್ ಗಳು ಹುಟ್ಟಿದ್ದು ಎಂದು ಜನರು ನಂಬಿದರು.
ಹೀಗೆ ಸಿಂಹವು ಕಾಗೆ ಮತ್ತು ಇರುವೆಗೆ ಈ ಕಥೆಯನ್ನು ಹೇಳಿತು. ಈ ಭೂಮಿಯಲ್ಲಿ ಡೈನೋಸಾರ್ ಗಳೇ ಜಾಸ್ತಿ ಆದರೆ ಸಿಂಹಗಳಿಗೆ ಜಾಗವೇ ಇಲ್ಲ ಎಂದು ಆಲೋಚನೆ ಮಾಡ್ತಿದ್ದೆ. ನೆನಪಿಸಿಕೊಳ್ಳುತ್ತಾ ಅಳುತ್ತಿದ್ದೆ ಎಂದು ಹೇಳಿತು.
ಆಗ ಕಾಗೆ ಮತ್ತು ಗೆಳೆಯ ಇರುವೆ... ಕ್ಷಮಿಸು ಗೆಳೆಯಾ.. ನಾವು ಸಣ್ಣ ಜೀವಿಗಳು. ನಮಗೇನೂ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಹೋಗ್ತೇವೆ ಎಂದು ಕಾಗೆ ಮತ್ತು ಇರುವೆ ಅವರವರ ಮನೆಗೆ ಹೋದರು. ಇಲ್ಲಿಗೆ ಕಥೆ ಮುಗಿಯಿತು.
2ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************