ಕವನ ರಚನೆ : ಸುಶ್ಮಿತಾ ಬಿ.ಆರ್ ದ್ವಿತೀಯ ಕಲಾ ವಿಭಾಗ
Thursday, March 23, 2023
Edit
ಕವನ ರಚನೆ : ಸುಶ್ಮಿತಾ ಬಿ.ಆರ್
ದ್ವಿತೀಯ ಕಲಾ ವಿಭಾಗ
ವಿವೇಕಾನಂದ ಪದವಿ ಪೂರ್ವ ಕಾಲೇಜು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅವಳಿಂದಲೇ ನಡೆಯುತಿಹುದು
ಈ ಜಗವೆಲ್ಲ
ಇವಳಿಲ್ಲದ ಬದುಕನು
ನೆನೆಯಲು ಸಾಧ್ಯವಿಲ್ಲ
ಜನನಿಯ ಸಹಾಯವಿಲ್ಲದೆ
ಈ ವಿಶ್ವವಿಲ್ಲ
ಸಕಲ ಜೀವದ ಉಗಮಕ್ಕೆ
ಇವಳೇ ಮೂಲ
ಮರೆಯಲಾಗುವುದಿಲ್ಲ ಇವಳ
ಜೊತೆ ಕಳೆದ ಕಾಲ
ಮಕ್ಕಳ ಏಳಿಗೆಗೆ
ಶ್ರಮಿಸುವಳು ಚಿರಕಾಲ
ತೀರಿಸಲು ಬಲು ಕಷ್ಟ
ಈಕೆ ನೀಡಿದ ಸಾಲ
ಮಗು ಜನಿಸುವ ಮುನ್ನವೇ
ಚಡಪಡಿಸುವಳು ಪ್ರತಿ ಕ್ಷಣ
ಬದುಕಿರುವವರೆಗೆ ಮಗುವೆ
ಅವಳ ಜೀವ ಚೈತನ್ಯದ ಕಣ
ಇಂಗಿಸಲಾಗದು ಅವಳು ನೀಡಿದ
ಪ್ರೀತಿಯ ಋಣ
ತಾಯಿಯ ಋಣ ತೀರಿಸಲು
ಪ್ರಯತ್ನಿಸೋ ಜಾಣ
ತಾಳ್ಮೆಗೆ ಪ್ರತೀಕ
ಮಮತೆಯ ಕನ್ನಡಿ ಇವಳು
ಮಗುವಿನ ಖುಷಿಯಲಿ
ತಾನು ಸಂತಸ ಪಡುವಳು
ಕಂದನಿಗಾಗಿ ಆಡುವಳು
ಕುಣಿದಾಡುವಳು
ಮನೆಯ ಉನ್ನತಿಗಾಗಿ
ದ್ವಿತೀಯ ಕಲಾ ವಿಭಾಗ
ವಿವೇಕಾನಂದ ಪದವಿ ಪೂರ್ವ ಕಾಲೇಜು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************