
ಮುಹಮ್ಮದ್ ಸಿಂಸಾರುಲ್ ಹಕ್ , ದ್ವಿತೀಯ ಪಿಯುಸಿ ಇವರು ಬರೆದಿರುವ ಕವನ...
Monday, March 20, 2023
Edit
ಕವನ ರಚನೆ : ಮುಹಮ್ಮದ್ ಸಿಂಸಾರುಲ್ ಹಕ್
ದ್ವಿತೀಯ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಹಾಳು ಮಾಡುವಿರಾ ನನ್ನನ್ನು
ನಾನಾಗಿರುವೆ ಸಹನೆಯ ಮೂರ್ತಿ.....!
ಅಡವಿ ಹಸಿರನ್ನು ಕತ್ತರಿಸಿ
ಕಾರ್ಖಾನೆಗಳ ಬಿತ್ತರಿಸಿ....
ನದಿಗಳಲ್ಲಿ ವಿಷವೇರಿಸಿ
ಇಡೀ ಭೂಮಂಡಲದ
ಅವನತಿಗೆ ಕಾರಣವಾಗುವೆಯಾ
ಓ ಮನುಜ ಯೋಚಿಸು.....!
ನಿನ್ನಯ ಸ್ವಾರ್ಥಕ್ಕೆ ನನ್ನ ಅವನತಿ
ಮಾಡುವಿರಾ ನೀವೆಲ್ಲ....!
ಮುಂದಿನ ಪೀಳಿಗೆ ಇದೆ ಎಂಬುದನ್ನೂ ಯೋಚಿಸಿರುವಿರಲ್ಲ......!!
ನಾನು ಸುಟ್ಟು ನಶಿಸುತ್ತಿರುವೆ
ಉಸಿರುಗಟ್ಟಿ ನೀ ಸಾಯುತ್ತಿರುವೆ....!
ಸೂರ್ಯನ ಕಿರಣ ಸಹಿಸಲಾಗುವುದಿಲ್ಲ ನನಗೆ.
ವರುಣನ ಆರ್ಭಟದಿ
ಸವೆದಿರುವೆ ನಾನು.....!!
ನನ್ನ ಆಕರಗಳು ಸಾಯುತ್ತಿದೆ ಕೊಳೆತು
ಕಾರ್ಖಾನೆಯ ವಿಷಭರಿತ ನೀರುಗಳು ಬೆರೆತು ಮನುಜರ ಸ್ವಾರ್ಥಕ್ಕೆ ಸಿಲುಕಿ
ಬರಿದಾಗುತ್ತಿರುವೆನು ನಾನು....!!
ದ್ವಿತೀಯ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************