-->
ಕವನ ರಚನೆ : ದೀಪ್ತಿ ಕೆ.ಸಿ, 9ನೇ ತರಗತಿ

ಕವನ ರಚನೆ : ದೀಪ್ತಿ ಕೆ.ಸಿ, 9ನೇ ತರಗತಿ

ಕವನ ರಚನೆ : ದೀಪ್ತಿ ಕೆ.ಸಿ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ

ದೀಪ್ತಿ ಕೆ.ಸಿ, 9ನೇ ತರಗತಿ ಇವರು ಬರೆದಿರುವ ಕವನಗಳು......                                 
                  
        ನನ್ನನ್ನು ನಿನ್ನ ಹೆಗಲ ಮೇಲೆ 
    ಹೊತ್ತು ಕಾಪಾಡಿರುವೆ
    ನಿನ್ನ ಬೆವರ ಹನಿಯಿಂದ 
    ನನ್ನ ನೋವನ್ನು ತಣಿಸಿರುವೆ
ಇಂದಿಗೂ ನನ್ನನ್ನು ಮಗಳೇ 
ಎಂದು ಕರೆಯುವೆ ನೀನು
ಅದನ್ನು ಕೇಳಿದಾಕ್ಷಣ ಆಗುವ ಸಂತಸವನ್ನು
ಯಾರಲ್ಲಿ ಹೇಳಲಿ ನಾನು?
     ಯಾರೇ ಬಂದರೂ ಸಹಾಯ 
     ಹಸ್ತ ಚಾಚುವ ನಿನ್ನನ್ನು
     ಕರ್ಣನಿಗೆ ಹೋಲಿಸಿದರೆ ತಪ್ಪೇನು...?
ಎಂದಿಗೂ ನಮ್ಮ ಖುಷಿಯನ್ನು ಬಯಸುವ ನಿನಗೆ
ನನ್ನ ಆಶಯವೇನೆಂದರೆ ಯಾವತ್ತಿಗೂ ಕಳೆದು ಹೋಗದಿರಲಿ ನಿನ್ನ ಆ ಕಿರುನಗೆ
    ನೀನು ನನಗೋಸ್ಕರ ನಿರ್ಮಿಸಿರುವೆ 
    ಕನಸುಗಳ ತಿಜೋರಿ
    ಅದನ್ನು ನೆರವೇರಿಸಲು ಕಾಯುತ್ತಿರುವಳು 
    ಈ ನಿನ್ನ ಕುವರಿ
............................................... ದೀಪ್ತಿ ಕೆ.ಸಿ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
*******************************************
                     

          ನಿನಗೋಸ್ಕರ ಕಾದಿಹುದು 
      ನನ್ನೀ ಹುಚ್ಚು ಮನ
      ನಿನ್ನಲ್ಲೇ ಇರಲು ಬಯಸಿಹುದು 
      ಅನುದಿನ....!
ಹೊಸ ಹೊಸ ವಿಚಾರಗಳನ್ನು 
ಹೊತ್ತು ತರುವೆ ನೀನು
ಅದನ್ನು ಅನುಭವಿಸಲು 
ಕಾತುರಳಾಗಿರುವೆ ನಾನು
      ರಾತ್ರಿಯೆಲ್ಲಾ ನಿದ್ದೆಯಲ್ಲಿ 
      ಬಂದು ಕಾಡುವ ನೀನು
      ಎಚ್ಚರವಾದ ತಕ್ಷಣ ಓಡಿಹೋಗಲು       
      ಕಾರಣವೇನು....?
ನಿನ್ನನ್ನು ಕಾಣದ ಮನುಷ್ಯರೇ ಇರಲಿಕ್ಕಿಲ್ಲ ...
ಆದರೆ ನಿನ್ನನ್ನು ಹಣ ಕೊಟ್ಟು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ...!!
      ನಿನ್ನ ಹೆಸರಿನಲ್ಲಿದೆ ಬರೀ ಮೂರಕ್ಷರ
      ಅದೇ - ಕನಸು ; ಎಂಬ 
      ನೆನಪುಗಳ ಮಹಾಸಾಗರ
................................................. ದೀಪ್ತಿ ಕೆ.ಸಿ
9ನೇ ತರಗತಿ 
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article