ಕವನ ರಚನೆ : ಜಯಪ್ರದ, 10ನೇ ತರಗತಿ
Friday, March 31, 2023
Edit
ಕವನ ರಚನೆ : ಜಯಪ್ರದ
10ನೇ ತರಗತಿ
ಯಸ್.ವಿ.ವಿ.ಯಚ್.ಯಸ್. ಮೀಯಪದವು.
ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ
ಗಿಡ ಮರಗಳಿಗಿಲ್ಲ ಯಾವುದೇ ಆಕೃತಿ|
ವರ್ಣಿಸಬಹುದು ಸಾವಿರ ಕೃತಿಯಲ್ಲಿ
ಸುಸಮೃದ್ಧವಾದ ನಮ್ಮ ಸಂಸ್ಕೃತಿ|
ಮರ ಗಿಡಗಳೆಲ್ಲ ಹಸಿರಸಿರು
ಇವಿಲ್ಲದಿದ್ದರೆ ನಿಲ್ಲುವುದು ನಮ್ಮ ಉಸಿರು|
ಗಾಳಿ ಬೀಸಿ ಮೋಡಮುಸುಕಿ
ಬಂದರೆ ಮಳೆ ನೀರು....
ಬೆಳೆ ಬೆಳೆದ ರೈತನು
ಖುಷಿಯಿಂದ ಬಿಡುವನು ನಿಟ್ಟುಸಿರು|
ಬೆಳೆದು ನಿಂತ ಹಸಿರಿನ ವನ
ಆಗಿದೆ ಪ್ರಾಣಿಪಕ್ಷಿಗಳ ವಾಸಸ್ಥಾನ
ದಯವಿಟ್ಟು ಮನುಜ ಕಡಿಯಬೇಡ
ನಮ್ಮ ಪರಿಸರದ ಗಿಡಮರಗಳ|
ಪ್ರಕೃತಿ ನೀಡುತ್ತದೆ ಸಿಹಿ ಸಿಹಿಯಾದ ಹಣ್ಣು
ಪ್ರಕೃತಿ ವೀಕ್ಷಣೆಗೆ ಸಾಲದು ಎರಡು ಕಣ್ಣು|
ಪ್ರಕೃತಿದತ್ತವಾದ ಶುದ್ಧ, ವಾಯು, ಜಲ, ಮಣ್ಣು
ಹಿತಮಿತವಾಗಿ ಉಪಯೋಗಿಸಬೇಕು ಇದನಿನ್ನು|
ನಮ್ಮ ಪ್ರಕೃತಿಯೇ ಚಿನ್ನದಗಣಿ
ಈ ಪ್ರಕೃತಿಗೆ ನಾನೆಂದಿಗೂ ಚಿರಋಣಿ|
ಹಸಿರಿದ್ದರೆಯೇ ಉಸಿರು
ಉಸಿರಿದ್ದರೆಯೇ ಹೆಸರು|
10ನೇ ತರಗತಿ
ಯಸ್.ವಿ.ವಿ.ಯಚ್.ಯಸ್. ಮೀಯಪದವು.
ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ
*******************************************