-->
ಸಂಚಾರಿಯ ಡೈರಿ : ಸಂಚಿಕೆ - 34

ಸಂಚಾರಿಯ ಡೈರಿ : ಸಂಚಿಕೆ - 34

ಸಂಚಾರಿಯ ಡೈರಿ : ಸಂಚಿಕೆ - 34

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ  ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ          
           ಅಸ್ಸಾಂನ‌ ನಲ್ಬರಿಯಲ್ಲಿ ಗ್ರಾಮ್ಯ ಸೌಂದರ್ಯ ಸವಿದ ನನಗೆ ಅರುಣಾಚಲ್‌ ಪ್ರದೇಶ ನೋಡುವ ತವಕವಿತ್ತು. ಅರುಣಾಚಲ ಪ್ರದೇಶದ ಯೋಜನೆ ಈ ಹಿಂದೆ ಹಲವು ಬಾರಿ‌ ಹಾಕಿದ್ದರೂ ತಾಂತ್ರಿಕ ಕಾರಣಗಳಿಂದ ನೆರವೇರಿರಲಿಲ್ಲ. ಈ ಬಾರಿ ಅದು ಕೈಗೂಡಿತ್ತು....!!  
            ಭಾರತ ದೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವುದಕ್ಕೆ ಯಾವ ತಡೆಯೂ ಇಲ್ಲ. ಆದರೆ ಕೆಲವೊಂದು ರಾಜ್ಯಗಳಿಗೆ ತೆರಳಲು ಕೆಲವು ದಾಖಲೆಗಳ ಅಗತ್ಯವಿರುತ್ತದೆ. ಅಂತಹ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ ಕೂಡಾ ಒಂದು. ಇಲ್ಲಿ ಯಾವುದೇ ಅನ್ಯರಾಜ್ಯದವರು ತೆರಳಲು ILP ( Inner Line Permit) ಪಡೆಯಬೇಕಾಗುತ್ತದೆ. ಅಂದರೆ ಅರುಣಾಚಲ ಪ್ರದೇಶದ ಒಳಗೆ ಕಾಲಿಡಲು, ಅರುಣಾಚಲ ಪ್ರದೇಶದ ಸರ್ಕಾರ ಕೊಡಮಾಡುವ ಸನ್ನದು ಪಡೆಯಬೇಕಾಗುತ್ತದೆ. ಇದು ಆನ್‌ಲೈನ್‌ನಲ್ಲೂ ಲಭ್ಯವಿದೆ. ಅರುಣಾಚಲ ಪ್ರದೇಶದಲ್ಲಿರುವ ಎರಡು ರೈಲು ನಿಲ್ದಾಣಗಳಲ್ಲಿ ಒಂದಾದ ನಹರ್ಲಾಗನ್‌ನಲ್ಲಿ ಇಳಿದ ತಕ್ಷಣ  ಅಲ್ಲಿ ಐದಾರು ಕೌಂಟರ್‌ಗಳಲ್ಲಿ ILP ಮಾಡಿಸಿಕೊಡುತ್ತಾರೆ. ಅಲ್ಲಿ ಭಾರತ ಸರ್ಕಾರದಿಂದ ಕೊಡಮಾಡುವ ಯಾವುದೇ ದಾಖಲೆಯನ್ನ ತೋರಿಸಿ 110₹ ಕೊಟ್ಟು, ILP ಪಡೆಯಬಹುದು. ಅಂದಹಾಗೆ ಅಲ್ಲಿ ನೀವು ಭೇಟಿ ನೀಡುವ ಜಿಲ್ಲೆ/ಜಿಲ್ಲೆಗಳ ಹೊರತಾಗಿ  ೨ಬೇರೆ ಜಿಲ್ಲೆಗಳಿಗೆ ತೆರಳುವಂತಿಲ್ಲ. ಅಲ್ಲಿ ILP ಪಡೆದಾಗ ಅಧಿಕೃತವಾಗಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ಸಿಕ್ಕಿದಂತಾಗಿತ್ತು.
‌          ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ್‌, ನಹರ್ಲಾಗನ್ ರೈಲು ನಿಲ್ದಾಣದಿಂದ 12 ಕಿಮೀ ದೂರದಲ್ಲಿದೆ. ಅಲ್ಲಿ ಸಿಗುವ ಟೆಂಪೋ ಹತ್ತಿ, ಇಟಾನಗರ್‌ ತಲುಪಿದಾಗ ಸಮಯ ಬೆಳಗ್ಗಿನ ಹತ್ತು ಗಂಟೆ.
      ಇಟಾನಗರ್‌ ನೋಡಲು ಪರ್ವತದ ಮಧ್ಯೆ ಇರುವ ನಗರ. ನಮ್ಮ ಮಡಿಕೇರಿಯನ್ನೇ ಹೋಲುವ ಈ ಸುಂದರ ನಗರ ವೈವಿಧ್ಯಮಯ ಸಂಸ್ಕೃತಿಯ ಜನರನ್ನು ಒಳಗೊಂಡಿದೆ. ಇಟಾನಗರ್‌‌ನಲ್ಲಿ ಅಂತಹ ದೊಡ್ಡ ಪ್ರವಾಸೀ ತಾಣವಿಲ್ಲದಿದ್ದರೂ, ನೂರು ಕಿಮೀ ದೂರದಲ್ಲಿರುವ ಝೀರೋ ಕಣಿವೆಯಲ್ಲಿ ಸುಂದರ ಕಿವಿ ಹಣ್ಣಿನ ತೋಟಗಳಿವೆ. ಸಣ್ಣ ಪುಟ್ಟ ತೊರೆ ಅದರ ಪಕ್ಕದಲ್ಲಿ ಬೆಟ್ಟಗಳು, ಒಂದು ಅವರ್ಣನೀಯ ಗಮ್ಯಸ್ಥಾನಗಳಿವೆ. ಅಲ್ಲಿಂದ ಮುನ್ನೂರು ಕಿಮೀ ದೂರದಲ್ಲಿರುವ ತವಾಂಗ್ ಹಿಮಾಚ್ಛಾದಿತ ಪ್ರದೇಶಗಳಿಗೆ ಹೆಸರಾಗಿವೆ. ಅರುಣಾಚಲ ಪ್ರದೇಶದ ಹತ್ತಾರು ಬುಡಕಟ್ಟು ಜನಾಂಗ ಹಾಗೂ ಅವರ ಸಂಸ್ಕೃತಿ ಎಲ್ಲವೂ ಪ್ರವಾಸೀ ಆಕರ್ಷಣೆಗಳೇ..! ಭಾರತದಲ್ಲಿ ಮೊದಲು ಅರುಣ ಉದಯಿಸುವ ನಾಡು ಇದೇ...!
     ಅಂದಹಾಗೆ ಅರುಣಾಚಲ್‌ನಲ್ಲಿ ಹತ್ತಾರು ಬುಡಕಟ್ಟು ಜನಾಂಗದವರು 1960 ರಿಂದ, ಹಿಂದಿಯಲ್ಲೇ ಸಂವಹಿಸುತ್ತಿರುವ ಕಾರಣ, ಹಿಂದಿ ಗೊತ್ತಿದ್ದರೆ ಸಮಸ್ಯೆಯಾಗದು. ಎಂದಾದರೂ ಅರುಣಾಚಲ್ plan ಮಾಡಿದ್ರೆ ಈ ಎಲ್ಲಾ ಅಂಶಗಳನ್ನು ನೆನಪಿಟ್ಟುಕೊಂಡು, ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿ.  
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************


Ads on article

Advertise in articles 1

advertising articles 2

Advertise under the article