
ಕಲಿಕಾ ಹಬ್ಬ : ಮಕ್ಕಳ ಅನಿಸಿಕೆ - 9
Wednesday, March 1, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 9
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ , ಜಿಲ್ಲೆಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಭರಮವ್ವ , 7ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ನಾನು ಭರಮವ್ವ ಧಾರವಾಡ 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಕಲಿಕಾ ಹಬ್ಬಕ್ಕೆ KPS ರಾಯನಾಳ ಶಾಲೆಗೆ ತುಂಬಾ ಖುಷಿಯಾಗಿ ಭಾಗವಹಿಸಲು ಹೋಗಿದ್ದೆ. ಅಲ್ಲಿ ಬೇರೆ ಬೇರೆ ಶಾಲೆಗಳಿಂದ ಬಹಳ ಮಕ್ಕಳು ಬಂದಿದ್ದರು. ಅಲ್ಲಿ ನಮ್ಮನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿದರು.
ಅಲ್ಲಿ ನನಗೆ ಆಡು-ಹಾಡು ಗುಂಪು ಬಂದಿತು. ನಮಗೆ ಹಾಡು ಹಾಡಿಸಿದರು ಮತ್ತು ಪದವೃಕ್ಷ, ಕಡುಬು ಗಣಪ, ಆಡೋ ಆಟ ಆಡೋ, ರಾಣಿಯ ಬಯಕೆ ಇಂತಹ ಚಟುವಟಿಕೆಯ ಮೂಲಕ ಕಲಿಕೆ ನಡೆಯಿತು. ಇದರಿಂದ ನಾನು ಬಹಳ ವಿಷಯ ತಿಳಿದುಕೊಂಡೆನು.
ಆಡು-ಹಾಡು ಈ ಗುಂಪಿನಲ್ಲಿ ನನಗೆ ಬಹಳ ಖುಷಿಯೆನಿಸಿತು. ಮಾಡು-ಆಡು ಗುಂಪಿನಲ್ಲೂ ಸೂಜಿ ರಂದ್ರ ಗ್ರಾಹಿ, ಸುರುಳಿ ಹಾವು ಹೀಗೆ ವಿನೋದದ ಜೊತೆಗೆ ಕಲಿಕೆ ತುಂಬಾ ಇಷ್ಟವಾಯಿತು. ಬರಿ ತರಗತಿಯಲ್ಲಲ್ಲದೆ ಹೊರಗೂ ಕಲಿಕೆ ಆಯಿತು. ಊರು ಸುತ್ತೋಣ, ಪರಿಸರ ಪಯಣ ಎಂಬ ಚಟುವಟಿಕೆಗಳು ಬಹಳ ಆಕರ್ಷಣೀಯವಾಗಿದ್ದವು.
ಹೀಗೆ ಬೇರ ಬೇರೆ ಗುಂಪಿನಲ್ಲಿ ಬಹಳ ಆಸಕ್ತಿಕರ ಆಟಗಳ ಮೂಲಕ ಕಲಿತೆವು. ನಾನು ಎಲ್ಲ ಆಟಗಳಲ್ಲಿ ಭಾಗವಹಿಸಿ ಬಹಳ ಜ್ಞಾನ ಪಡೆದೆ. ಅಲ್ಲಿ ಇದ್ದ ಎಲ್ಲ ಶಿಕ್ಷಕರು ತುಂಬಾ ಚೆನ್ನಾಗಿ ಕಲಿಸಿದರು.
ಅಷ್ಟೇ ಅಲ್ಲದೇ ಅಲ್ಲಿ ಕಲಿತ ಜ್ಞಾನವನ್ನು ಶಾಲೆಗೆ ಹಿಂದಿರುಗಿ ನಮ್ಮ ಎಲ್ಲ ಸ್ನೇಹಿತರಿಗೂ ಹೇಳಿಕೊಟ್ಟೆವು. ಇದರಿಂದ ನನಗೆ ತುಂಬಾ. ಇಂತಹ ಕಾರ್ಯಕ್ರಮಕ್ಕೆ ನನ್ನನ್ನು ಕಳಿಸಿಕೊಟ್ಟ ನನ್ನ ಶಾಲಾ ಗುರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಧನ್ಯವಾದಗಳೊಂದಿಗೆ.
7ನೇ ತರಗತಿ
ಸ.ಹಿ.ಪ್ರಾಶಾಲೆ ಪರಸಾಪೂರ
ಜಿ/ಧಾರವಾಡ
*********************************************