ಪ್ರೇಮಾ ಶಿವಪ್ಪ ಶಿರಹಟ್ಟಿ ಬರೆದಿರುವ ಕವನಗಳು....
Tuesday, February 28, 2023
Edit
ಕವನ ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
ಪ್ರೇಮಾ ಶಿವಪ್ಪ ಶಿರಹಟ್ಟಿ ಬರೆದಿರುವ ಕವನಗಳು......
ಓ ನನ್ನ ಮುದ್ದು ಅಪ್ಪ (ಕವನ)
--------------------------------------
ಓ ನನ್ನ ಮುದ್ದು ಅಪ್ಪ
ನೀನೆ ನಮಗೆ ದೇವರಪ್ಪ
ಬಾಳ ಬೆಳಕು ನೀನಪ್ಪ
ನಿನ್ನೆ ನನಗೆ ಉಸಿರಪ್ಪ
ಕರುಣಿ ಎಂದರೆ ನೀನಪ್ಪ
ಮಕ್ಕಳ ಪ್ರೀತಿ ನೀನಪ್ಪ
ಕಾಣಿಸುವ ದೇವರು ನೀನಪ್ಪ
ಓ ನನ್ನ ಮುದ್ದು ಅಪ್ಪ
ಕೈಯ ಹಿಡಿದು ನಡೆಸು ನೀನು
ಕೈಯ ಮುಗಿದು ನಮಿಸುವೆ ನಾನು
ನಿನ್ನ ನಗುವ ನೆನೆಯುವೆ ನಾನು
ಓ ನನ್ನ ಮುದ್ದು ಅಪ್ಪ
ಮಗುವ ಮನಸು ನಿನ್ನದಪ್ಪ
ದುಡಿಯದೆ ಬದುಕು ಸಾಗದಪ್ಪ
ದುಡಿದು ಸಾಕುವೆ ನಿನ್ನ ನಾ ಅಪ್ಪ
ನನ್ನ ಮುದ್ದು ಅಪ್ಪ
.............................. ಪ್ರೇಮಾ ಶಿವಪ್ಪ ಶಿರಹಟ್ಟಿ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************
ಬೀಳ್ಕೊಡುಗೆ (ಕವನ)
-------------------------
ಕೂಗಿ ಕೂಗಿ ಕರೆಯುತ್ತಿರು
ಶಾಲೆ ಎಂಬ ನೆನಪೊಂದನು
ಕಲಿಸಿದ ಗುರುವನ್ನು ಮರೆಯದಿರು
ಬಿಟ್ಟೊಕ್ತಿವಿ ಶಾಲೆನಾ
ಇಷ್ಟೊಂದು ಪ್ರೀತಿ ಕೊಟ್ಟು
ನಮ್ಮ ಮೇಲೆ ನಂಬಿಕೆ ಇಟ್ಟು
ಜ್ಞಾನವೆಂಬ ಬೆಳಕ ಕೊಟ್ಟು
ಕಳಿಸುವಿರಿ ನಿಮ್ಮೆಲ್ಲರ ಬಿಟ್ಟು
ಬಿಟ್ಟೊಕ್ತಿವಿ ಈ ಪ್ರೀತಿನಾ
ಕೂಗಿ ಕೂಗಿ ಕರೆಯುತ್ತಿರು
ಶಾಲೆಯೆಂಬ ದೇವಾಲಯ
ಮಾತು ತಪ್ಪದ ಶಾಲೆಯಿದು
ಪ್ರೀತಿ ಅಮೃತ ಹಂಚುವುದು
ಬಿಟ್ಟೊಕ್ತಿವಿ ಸ್ನೇಹಾನಾ
ಯಾರು ಕದಿಯದ ಆಸ್ತಿಯಿದು
ಜ್ಞಾನವನ್ನು ಹೇಳಿದರೂ
ತಪ್ಪಿದ ದಾರಿಯನ್ನು ಸರಿಪಡಿಸುವರು
ಅವರೇ ನಮ್ಮ ಶಿಕ್ಷಕರು
ಬಿಟ್ಟೊಕ್ತಿವಿ ನಂಬಿದ ಶಾಲನಾ
.............................. ಪ್ರೇಮಾ ಶಿವಪ್ಪ ಶಿರಹಟ್ಟಿ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************
ಓ ಗುರು ಮಾತೆಯೇ (ಕವನ)
-------------------------------------
ಎಂದು ನೀವು ನಗುತಿರುವಿರಿ
ಎಲ್ಲರಿಗೂ ನೀವು ಬೆಳಕಾಗಿರುವಿರಿ
ಎಲ್ಲರಲ್ಲೂ ಜ್ಞಾನದ ಭಂಡಾರ ತುಂಬುವಿರಿ
ಎಲ್ಲರ ಮನಸ್ಸಲ್ಲೂ ಸದಾ ನೆಲೆಸಿರುವಿರಿ
ಓ ಗುರುಮಾತೆಯೇ
ನಮ್ಮೆಲ್ಲರಿಗೂ ನೀವು ಮಾರ್ಗದರ್ಶನ
ನೀಡುವಿರಿ ಹೊಸ ಹೊಸ ಶಿಕ್ಷಣ
ನೀವೇ ನಮ್ಮೆಲ್ಲರಿಗೂ ಸ್ಪೂರ್ತಿ
ತುಂಬಿರಿ ಶಾಲೆಗೆ ಕೀರ್ತಿ
ಓ ಗುರು ಮಾತೆಯೇ
ಅಜ್ಞಾನದ ಕತ್ತಲೆ ತೊಲಗಿಸಿದೆ
ಜ್ಞಾನದ ಬೆಳಕನ್ನು ಬೆಳಗಿಸಿದೆ
ಮಾನವೀಯತೆಗೆ ಗುರು ನೀನು ಅಮ್ಮ
ಶಿಸ್ತಿಗೆ ನೀನೆ ಹೆಸರಮ್ಮ
ಓ ಗುರು ಮಾತೆಯೇ
ಜ್ಞಾನ ದೇವತೆಯ ಸ್ವರೂಪವಾಗಿರುವಿರಿ
ಸರಸ್ವತಿಯ ಪ್ರತಿರೂಪ ನೀವಾಗಿರುವಿರಿ
ನಮ್ಮ ಎಲ್ಲರ ಮನೆ ಮಗಳಾಗಿರುವಿರಿ
ಮುಗ್ಧ ಮನಸ್ಸಿನ ಹಸನ್ಮುಖಿ ನೀವಾಗಿರುವಿರಿ
ಓ ಗುರು ಮಾತೆಯೇ
ಓ ಗುರುಮಾತೆಯೇ
.............................. ಪ್ರೇಮಾ ಶಿವಪ್ಪ ಶಿರಹಟ್ಟಿ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************
ಬಾಳು ಬೆಳಗಿಸಿದ ಅಕ್ಕ (ಕವನ)
----------------------------------------
ನನ್ನ ಜೀವನದ ಮುದ್ದು ಅಕ್ಕ
ತಾಯಿಯ ಪ್ರತಿರೂಪ ನೀ ನಕ್ಕ
ತವರಿನ ಮೇಲೆ ನಿನ್ನ ಪ್ರೀತಿ ಚಂದ
ನಗುವ ನಿನ್ನ ಮುಖವೇ ಅಂದ
ಕಷ್ಟದಲ್ಲೂ ನಗುವುದನ್ನು ನೀ ಕಲಿಸಿದೆ
ನನಗೆ ನೀ ಎಂದು ದಾರಿದೀಪವಾದೆ
ಗುರುವಾದೆ ನೀ ನನಗೆ
ಮಗು ಆಗುವೆ ನಿನ್ನ ಮಡಿಲಿಗೆ
ಸ್ನೇಹಿತೆ ಆದೆ ಕಷ್ಟದಲ್ಲಿ
ತಾಯಿಯಾದೆ ಮನದಲ್ಲಿ
ಅಪ್ಪ ಆದೆ ಮಮಕಾರದಲ್ಲಿ
ನೀ ಸದಾ ನನ್ನ ಮನಸಲ್ಲಿ
ಓ ಜೀವ ಬೆಳಗಿಸಿದ ಅಕ್ಕ
ಈ ಜೀವ ನಿನದಕ್ಕ
.............................. ಪ್ರೇಮಾ ಶಿವಪ್ಪ ಶಿರಹಟ್ಟಿ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************
ಅಮ್ಮ (ಕವನ)
--------------------
ಅಮ್ಮ ಅಮ್ಮ ನೀ ನೀಡಿದೆ ಜನ್ಮ
ನಾ ಕಂಡ ಪ್ರತ್ಯಕ್ಷ ದೇವರಮ್ಮ
ಉಸಿರಿಗೆ ಉಸಿರಾಗಿ ಬೆಳೆಸಿದೆ ಅಮ್ಮ
ಜೀವಕ್ಕೆ ಜೀವ ಕೊಡುವೆ ಅಮ್ಮ
ವಜ್ರದಂತೆ ಮಿನುಗುವೆ ಅಮ್ಮ
ಶಕ್ತಿಯಾಗಿ ಇರುವೆ ಅಮ್ಮ
ನಕ್ಷತ್ರದ ಬೆಳಕು ನೀ ನನಗಮ್ಮ
ಬಾಳಲ್ಲಿ ಹೊಂಬಾಳೆ ನೀ ಅಮ್ಮ
ನಗುಮುಖದ ರಾಜಕುಮಾರಿ ನೀನಮ್ಮ
ನಿನ್ನ ಪ್ರೀತಿ ಸ್ವರ್ಗಕ್ಕಿಂತ ಮಿಗಿಲಮ್ಮ
ನಿನಗಿಂತ ಬೇರೆ ಬಂಧುವಿಲ್ಲ ಅಮ್ಮ
ನಿನಗಿಂತ à ದೇವರಿಲ್ಲ ಅಮ್ಮ
ಕಂದ ಕೂಗೋ ಕರೆಯೆ ಅಮ್ಮ
ವಾತ್ಸಲ್ಯವ ತುಂಬಿದ ಕೈತುತ್ತಲ್ಲಿ
ಮಮಕಾರ ತುಂಬಿದೆ ಎದೆ ಹಾಲಲ್ಲಿ
ಐ ಲವ್ ಯು ಅಮ್ಮ
10ನೇ ತರಗತಿ.
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************