-->
ಪ್ರೀತಿಯ ಪುಸ್ತಕ : ಸಂಚಿಕೆ - 51

ಪ್ರೀತಿಯ ಪುಸ್ತಕ : ಸಂಚಿಕೆ - 51

ಪ್ರೀತಿಯ ಪುಸ್ತಕ
ಸಂಚಿಕೆ - 51

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                                        ನಂ ತಪ್ಪಲ್ಲ  
  ಪ್ರೀತಿಯ ಮಕ್ಕಳೇ, ‘ಇಲ್ಲಿ ಹಾಲು ಚೆಲ್ಲಿದ್ದು ಯಾರು?’ ಅಂತ ಕೇಳಿದರೆ, ‘ನನ್ ತಪ್ಪಲ್ಲ, ಹಾಲು ಹಿಡಿದುಕೊಂಡಿದ್ದೆ, ಅವಳು ಹಿಂದಿನಿಂದ ಬಂದು ನೂಕಿದಳು. ಹಾಲು ಚೆಲ್ಲಿತು,’ ಅಂತ ಹೇಳುತ್ತಾರೆ ಅಲ್ಲವೇ? ಈ ಪುಸ್ತಕದಲ್ಲಿ ಇಂತಹುದೇ ಮಜಾ ಅನಿಸುವ ಕಥೆ ಇದೆ. ಶ್ಯಾಮಪ್ರಸಾದ ಎಂಬ ಹೆಸರಿನ ಹುಡುಗ ಮನೆಯಲ್ಲಿ, ಶಾಲೆಯಲ್ಲಿ ಎಡವಟ್ಟು ಮಾಡಿಕೊಳ್ಳುತ್ತಾ ಇರುತ್ತಾನೆ. ಅದಕ್ಕೆ ಅವನ ಟೀಚರ್ ಇಟ್ಟ ಹೆಸರು ‘ಎಡವಟ್ಟಣ್ಣ’. ಇವವೇನು ವಿಶೇಷವಲ್ಲ. ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಾರೆ. ನಾವು ದೊಡ್ಡವರೂ ಮಾಡಿಕೊಳ್ಳುತ್ತೇವೆ. ಇರಲಿ, ಈ ಕಥೆಯಲ್ಲಿ ಶ್ಯಾಮ ಮಾಡುವ ಎಡವಟ್ಟುಗಳೇನು, ಆಮೇಲೆ ಅವನು ಏನು ಮಾಡುತ್ತಾನೆ ಎಂಬ ವಿವರ. ಇದೆ. ಒಂದು ಸಾರಿ ಅವನು ಒಬ್ಬನೇ ಹೊರಟು ಬಿಡುತ್ತಾನೆ. ಊರು ದಾಟಿ ಕಾಡಿಗೆ ಬರುತ್ತಾನೆ, ಮನೆಯಿಂದ ಬರುವಾಗ ಒಂದು ಕಾಲಿಗೆ ತನ್ನ ಬೂಟು ಮತ್ತೊಂದು ಕಾಲಿಗೆ ಅಪ್ಪನ ಬೂಟು ಹಾಕಿಕೊಂಡು ಬರುತ್ತಾನೆ. ದಾರಿಯಲ್ಲಿ ಒಂದು ಬೂಟು ಕಳಚಿ ಹೋಗುತ್ತದೆ. ಮುಂದೆ ಹೋಗುವಾಗ ತಲೆ ಮೇಲೆ ಪಟಕ್ ಅಂತ ಏನೋ ಬೀಳುತ್ತದೆ. ಆಮೇಲೆ ಏನಾಯಿತು ನೀವೇ ಓದಿ ನೋಡಿ. ಚಿತ್ರಗಳೂ ಕೂಡಾ ಚೆನ್ನಾಗಿವೆ. 
         ಓದಿದ ಮೇಲೆ ‘ಒಬ್ಬ ಹುಡುಗನನ್ನು ಈ ರೀತಿ ‘ಎಡವಟ್ಟಣ್ಣ’ ಎಂಬ ಹೆಸರಿನಲ್ಲಿ ಕರೆಯುವುದು ಸರಿಯೇ ಎಂದು ಯೋಚನೆ ಮಾಡಿ.
ಲೇಖಕರು: ಎನ್. ಶ್ರೀನಿವಾಸ ಉಡುಪ,
ಚಿತ್ರಗಳು: ರುಬಿ ಮಸ್ಹಾಣಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ 
ಬೆಲೆ: ರೂ.60/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
.......................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article