ಪ್ರೀತಿಯ ಪುಸ್ತಕ : ಸಂಚಿಕೆ - 50
Friday, March 17, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 50
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಆನೆ ಅಂದರೆ ಹೆಚ್ಚಿನ ಮಕ್ಕಳಿಗೂ ಬಹಳ ಬಹಳ ಇಷ್ಟ. ಅಷ್ಟು ದೊಡ್ಡ ಜೀವ ಸೊಂಡಿಲು ಎತ್ತಿಕೊಳ್ಳುವ, ನಿಧಾನಗತಿಯಲ್ಲಿ ನಡೆಯುವ ದೃಶ್ಯವನ್ನು ಕಣ್ಣು ಬಿಟ್ಟು ನೋಡುವುದು ಸಾಮಾನ್ಯ. ಈ ಪುಸ್ತಕ ಮೋರ ಎಂಬ ಹೆಸರಿನ ಆನೆಯ ಕಥೆ ಹೇಳುತ್ತದೆ. ಕಾಡಿನಲ್ಲಿ ತನ್ನ ಕುಟುಂಬದ ಜೊತೆಗೆ, ಇತರ ಆನೆಗಳ ಜೊತೆಗೆ ಬದುಕುವ ರೀತಿಯ ವಿವರ ಇದೆ. ಎಲ್ಲಕ್ಕೂ ಹೆಚ್ಚಾಗಿ ಮನುಷ್ಯರಿಂದ ಆನೆಗಳಿಗೆ ಆಗುವ ಅಪಾಯದ ವಿವರ ಇದೆ. ನಮಗೆ ನಾಡಿನಲ್ಲಿ ಅಡ್ಡಾಡುವ ಆನೆ ನೋಡುವುದಕ್ಕೆ ಏನೋ ಖುಶಿ. ಆದರೆ ಕಾಡಿನಲ್ಲಿ ಅವುಗಳನ್ನು ಹಿಡಿವ ರೀತಿ, ಅವುಗಳಿಗಾಗುವ ನೋವು ನಮಗೆ ಗೊತ್ತಾಗುವುದಿಲ್ಲ. ಓದುವಾಗ ಮೋರನ ನೋವು ಸಂಕಟ ನಮಗೆ ಅರ್ಥವಾಗುತ್ತದೆ. ಕಾಡಿನಲ್ಲಿ ಆನೆಯ ಬದುಕನ್ನು ತೋರಿಸುವ, ಆನೆಯ ಭಾವನೆಗಳನ್ನು ಹಿಡಿದಿಡುವ ಚಿತ್ರಗಳಿವೆ. ಓದಿ, ನಿಮಗೇನು ಅನಿಸುತ್ತದೆ ನೋಡಿ.
ಲೇಖಕರು: ಮುಲ್ಕ್ ರಾಜ್ ಆನಂದ್
ಅನುವಾದ: ಟಿ.ಎಸ್. ಸಂಜೀವರಾವ್
ಚಿತ್ರಗಳು: ರೂಪ್ರೆಕ್ಟ್ ಹ್ಯಾಲರ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.65.00
ಐದು, ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************