-->
ಪ್ರೀತಿಯ ಪುಸ್ತಕ : ಸಂಚಿಕೆ - 49

ಪ್ರೀತಿಯ ಪುಸ್ತಕ : ಸಂಚಿಕೆ - 49

ಪ್ರೀತಿಯ ಪುಸ್ತಕ
ಸಂಚಿಕೆ - 49

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 
       
            ಸರಿ ಯಾವುದು? ತಪ್ಪು ಯಾವುದು?
       ಪ್ರೀತಿಯ ಮಕ್ಕಳೇ... ಸರಿ ಯಾವುದು? ತಪ್ಪು ಯಾವುದು? ನಿಮಗೂ ಈ ಪ್ರಶ್ನೆ ಆಗಾಗ ಎದುರಾಗಬಹುದು. ಇಲ್ಲಿ ಒಬ್ಬ ಪುಟ್ಟ ಹುಡುಗಿಗೆ ಅವಳ ಪೋಕರಿ ತಮ್ಮನ ಬಗ್ಗೆ ಚಿಂತೆ. ಅವನು ಮಾಡುವುದರಲ್ಲಿ ಸರಿ ಯಾವುದು? ತಪ್ಪು ಯಾವುದು ಎಂಬ ಆತಂಕ. ಅವನ ಪೋಕರಿತನಗಳ ಹೇಳುತ್ತಾ ಹೋಗುತ್ತಾಳೆ, ಏನೇನೋ ಕಲ್ಪನೆ ಕೂಡಾ ಮಾಡುತ್ತಾಳೆ. ಏನೇ ಇರಲಿ ತಮ್ಮನ ಹತ್ತಿರ ಪ್ರೀತಿಯಂತೂ ಇದೆ. ಈ ಪುಸ್ತಕದಲ್ಲಿ ಚಿತ್ರಗಳೇ ತುಂಬಿಕೊಂಡಿದ್ದು, ಬರಹ ಕಡಿಮೆ ಇದೆ. ಚಿತ್ರ ನೋಡುತ್ತಾ ಓದುವುದು ಖುಶಿ ಕೊಡುತ್ತದೆ. ಓದಿ ನೋಡಿ. ಮಜವಾಗಿದೆ. ಇದನ್ನು ಓದುವಾಗ, ನೀವು ಮಾಡುವ ಪೋಕರಿತನಗಳೂ ನಿಮಗೆ ನೆನಪಾಗಬಹುದು. ಅಣ್ಣ, ತಂಗಿ, ಅಕ್ಕ, ತಮ್ಮನ ನಡುವೆ ಎಷ್ಟೊಂದು ಪೋಕರಿತನಗಳು ಇರುತ್ತವಲ್ಲವೇ? ಎಲ್ಲಾ ಆದ ಮೇಲೆ ಮತ್ತೆ ಪ್ರೀತಿ ಇರುತ್ತದೆ. ಅದೇ ನಮ್ಮ ಜೀವನದ ಚಂದ. 
ಲೇಖಕರು: ಸಿಗ್ರುನ್ ಶ್ರೀವಾಸ್ತವ
ಅನುವಾದ: ಭೈರರಾಜ 
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718) 
ಬೆಲೆ: ರೂ.40.00
ನಾಲ್ಕು ಐದನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article