ಪ್ರೀತಿಯ ಪುಸ್ತಕ : ಸಂಚಿಕೆ - 48
Friday, March 3, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 48
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ, ವಿಜ್ಞಾನ, ಗಣಿತ ಅಂದರೆ ಬಹಳ ಮಂದಿ ಮಕ್ಕಳಿಗೆ ಅದೇನೋ ಕಷ್ಟದ ವಿಷಯ ಅನ್ನುವ ಭಾವನೆ ಇದೆ. ಈ ಪುಸ್ತಕ ಓದಿದರೆ, ವಿಜ್ಞಾನದಲ್ಲಿ ಎಷ್ಟು ಮಜ ಇದೆ ಅಂತ ಗೊತ್ತಾಗುತ್ತದೆ. ಸುಮ್ಮನೇ ಕೈಕಟ್ಟಿ ಕುಳಿತರೆ ನಮಗೆ ಸತ್ಯ ತಿಳಿಯಲು ಆಗುತ್ತದೆಯೇ? ಇಲ್ಲವಲ್ಲಾ.. ನೋಡಬೇಕು, ವಿಚಾರಿಸಬೇಕು, ಆಳವಾಗಿ ಆಲೋಚಿಸಬೇಕು. ಪ್ರಯೋಗ ಮಾಡಿ ತಿಳಿದುಕೊಳ್ಳಬೇಕು ತಾನೇ? ಈ ಪುಸ್ತಕ ಹಾಗೆಯೇ ಚಿಕ್ಕ ಪುಟ್ಟ ಪ್ರಯೋಗ ಮಾಡುತ್ತಾ ವಿಜ್ಞಾನವನ್ನು ನಿಮ್ಮ ಎದುರು ತೆರೆದಿಡುತ್ತದೆ. ಹಗಲು ಹೇಗಾಗುತ್ತೆ? ರಾತ್ರಿ ಹೇಗಾಗುತ್ತದೆ? ಇಂತಹ ಹಲವಾರು ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತಾ ನೀವೇ ಪ್ರಯೋಗ ಮಾಡಿ ನೋಡಬಹುದು. ಕಾರ್ಟೂನ್ ತರಹದ ಚಿತ್ರಗಳು ಕೂಡಾ ಮಜವಾಗಿವೆ. ಮುನ್ರೋ ಲೀಫ್ ಅಮೆರಿಕದ ಲೇಖಕರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಪ್ರಸಿದ್ಧರು. ಇದನ್ನು ಓದುತ್ತಾ, ದಿನನಿತ್ಯದ ಜೀವನದಲ್ಲಿ ಕಾಣುವ ಎಷ್ಟೋ ಆಗುಹೋಗುಗಳನ್ನು ಗಮನಿಸುತ್ತಾ, ಯಾಕೆ ಹೀಗೆ ಎಂದು ಹುಡುಕುತ್ತಾ ಹೋಗಿ.
ಲೇಖಕರು: ಮುನ್ರೋ ಲೀಫ್
ಅನುವಾದ: ಟಿ.ಎ.ಪ್ರಶಾಂತ್ ಬಾಬು
ಚಿತ್ರಗಳು: ಮುನ್ರೋ ಲೀಫ್ ಮತ್ತು ಗುರುದತ್ ಸಂಕೇತ್
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102
ಬೆಲೆ: ರೂ.60/
ಆರು ಏಳನೆ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************