-->
ಸಂಚಾರಿಯ ಡೈರಿ : ಸಂಚಿಕೆ - 31

ಸಂಚಾರಿಯ ಡೈರಿ : ಸಂಚಿಕೆ - 31

ಸಂಚಾರಿಯ ಡೈರಿ : ಸಂಚಿಕೆ - 31

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ


          ತುಂಬಾ ವರ್ಷಗಳಿಂದ ಮಹಾರಾಷ್ಟ್ರದ ಒಂದು ಊರಿಗೆ ತೆರಳುವ ಉತ್ಕಟ ಆಸೆಯಿತ್ತು. ಎಷ್ಟೇ ಯೋಜನೆ ಹಾಕಿದರೂ ಅದೂ ಇದೂ ಎಂಬ ಹಲವಾರು ಕಾರಣಗಳಿಂದಾಗಿ ಮುಂದೂಡಲ್ಪಡುತ್ತಿತ್ತು. ಅಂದಹಾಗೆ ಆ ಊರಿನ ಹೆಸರು ಹತ್ತು ದಿನಗಳ‌ ಮುಂಚೆ ಬದಲಾಗಿದೆ ಅದೇ ಸಂಭಾಜೀನಗರ್ , ಹಿಂದಿನ ಔರಂಗಾಬಾದ್.. ಅಲ್ಲೇನ್ ವಿಶೇಷ ಅಂತೀರಾ ವಿಶ್ವವಿಖ್ಯಾತ ಎಲ್ಲೋರಾ ಗುಹೆಗಳು ಇರೋದು ಈ ನಗರದ ಪಕ್ಕದಲ್ಲಿ, ಜ್ಯೋತಿರ್ಲಿಂಗಗಳಲ್ಲಿ ಒಂದಾದ ಘೃಷ್ಣೇಶ್ವರ, ತಾಜ್‌ಮಹಲ್ ಹೋಲುವ ಬೀಬಿ‌-ಕಾ-ಮಕ್ಬರಾ ಇರೋದು ಇಲ್ಲೇ..
        ಎಲ್ಲೋರಾ ನಾನು ತಲುಪಿದಾಗ ಸಮಯ ಬೆಳಗ್ಗಿನ ಹತ್ತಾಗಿತ್ತು. ಎಂಟ್ರಿ ಟಿಕೆಟ್ 40 ರೂ ಕೊಟ್ಟು ಒಳಹೊಕ್ಕೆ. ಈ‌ ಹಿಂದೆ ಒಡಿಶಾದ ಭುವನೇಶ್ವರದ ಖಂದಗಿರಿ-ಉದಯಗಿರಿಯ ಗುಹಾಂತರ ದೇವಾಲಯದ‌ ಬಗ್ಗೆ ಮಾಹಿತಿ ನೀಡಿದ್ದೆ, ಅದನ್ನೇ ಹೋಲುವ ವಿಶಿಷ್ಟ ಕೆತ್ತನೆಗಳುಳ್ಳ ಗುಹಾಂತರ ದೇವಾಲಯಗಳು ಎಲ್ಲೋರಾದ ವಿಶೇಷತೆ. ಇಲ್ಲಿ ಹಿಂದೂ, ಜೈನ ಹಾಗೂ ಬೌದ್ಧ ಧರ್ಮಗಳ ಗುಹಾಂತರ ದೇವಾಲಯಗಳಿವೆ. ರಾಷ್ಟ್ರಕೂಟ ಹಾಗೂ ಯಾದವ ಸಾಮ್ರಾಜ್ಯಗಳ ಅವಧಿಯಲ್ಲಿ ನಿರ್ಮಾಣಗೊಂಡಂತಹ ಈ ಗುಹೆಗಳನ್ನ ನೋಡಲು ದೇಶ ವಿದೇಶಗಳ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ 17 ಹಿಂದೂ ಧರ್ಮಕ್ಕೆ ಸೇರಿದ ಗುಹೆಗಳು ,12 ಬೌದ್ಧ ಹಾಗೂ 05 ಜೈನ ಧರ್ಮಕ್ಕೆ ಸೇರಿದ ಗುಹೆಗಳಿವೆ. ಎಲ್ಲೋರಾ ಒಳ ಪ್ರವೇಶಿಸುತ್ತಲೇ ನಾವು ನೋಡೋದು ಕೈಲಾಸನಾಥ ದೇವಾಲಯವನ್ನ. ಗುಹೆ ಸಂಖ್ಯೆ 11 & 12 ರಲ್ಲಿ ಸುಂದರವಾದ ಕಟ್ಟಡ ನಂ: 10 ರಲ್ಲಿ ಬುದ್ಧನ ಸುಂದರ ಮೂರ್ತಿ ಇದೆ. ಬಂಡೆಗಳನ್ನ ಸುಂದರವಾಗಿ ಕೆತ್ತಿ ಅದ್ಭುತ ಕಲಾಕೃತಿಗಳನ್ನು ನಿರ್ಮಿಸಿದ ಶಿಲ್ಪಿಗಳಿಗೆ ಶಹಬ್ಬಾಸ್ ಎನ್ನಲೇಬೇಕು.
     
      ಔರಂಗಾಬಾದ್/ಸಂಭಾಜಿನಗರ್‌‌ನಲ್ಲಿ ವಿಮಾನ ನಿಲ್ದಾಣವಿದೆ, ಆದರೆ ಅಲ್ಲಿಗೆ ಬೆಂಗಳೂರಿನಿಂದ ವಿಮಾನ ಸೌಲಭ್ಯವಿದೆಯೋ ಗೊತ್ತಿಲ್ಲ! ರೈಲು ನಿಲ್ದಾಣಕ್ಕೆ ಮುಂಬೈ / ಪುಣೆ /ಅಹ್ಮದ್‌ನಗರ್‌ನಿಂದ ರೈಲು ಸಂಪರ್ಕವಿದೆ.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************

Ads on article

Advertise in articles 1

advertising articles 2

Advertise under the article