
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ : 10
Thursday, March 2, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 10
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ , ಜಿಲ್ಲೆಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಸಾತ್ವಿಕ್ ಗಣೇಶ್, 8ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
31- 01-2023 ರಿಂದ 01-02-2023 ರ ವರೆಗೆ ನಮ್ಮ ಶಾಲೆ ಸ.ಪ. ಪೂ. ಕಾ (ಪ್ರೌ.ಶಾ.ವಿ) ವೇಣೂರು ಇಲ್ಲಿ ಬಜಿರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ನಡೆಯತು.
ಗೂಡು ದೀಪ, ಬಣ್ಣದ ಕಾಗದದ ಹೂ ಮೊದಲಾದವುಗಳನ್ನು ಮಾಡಿ ಶಾಲೆಯನ್ನು ಸಿಂಗರಿಸಿದೆವು. ನಮ್ಮ ಶಾಲೆಯು
ತಳಿರು ತೋರಣಗಳಿಂದ ಸಿಂಗರಿಸಿ ಮದುವೆ ಮನೆಯಂತೆ ಕಂಗೊಳಿಸುತ್ತಿತ್ತು. ಸಂಭ್ರಮದಿಂದ ನಾವೆಲ್ಲರೂ ಬಣ್ಣ ಬಣ್ಣದ ಉಡುಗೆಯನ್ನು ಧರಿಸಿ ಬೆಳಗ್ಗೆ ಬೇಗನೆ ಬಂದೆವು. ಶಿಕ್ಷಕರು, ಎಸ್ ಡಿ ಎಂ ಸಿ ಯವರು ಮತ್ತು ಮಕ್ಕಳಿಂದ ಕಲಿಕಾ ಹಬ್ಬದ ಮೊದಲನೆಯ ದಿವಸ ಮೆರವಣಿಗೆಯು ನಡೆಯಿತು.
ಇದರಲ್ಲಿ ಎಲ್ಲಾ ಮಕ್ಕಳೂ ಸಂತೋಷದಿಂದ ಭಾಗವಹಿಸಿದರು. ಮಕ್ಕಳಿಗೆ ಸಂತಸದ ದಿನವಾಗಿತ್ತು. ಹಾಡು ಆಡು, ಕಥೆ ಕಟ್ಟೋಣ, ಊರು ತಿಳಿಯೋಣ ಮೊದಲಾದ ಕಾರ್ನರ್ ತಿಳಿದೆವು. ನನಗೆ ಕಥೆ ಕಟ್ಟೋಣ ಚಟುವಟಿಕೆ ತುಂಬಾ ಇಷ್ಟವಾಯ್ತು. ಎಲ್ಲರಿಗೂ ಸಿಹಿಯನ್ನು ಹಂಚಿದೆವು. ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************