ಆರ್ಟ್ ಗ್ಯಾಲರಿ : ಶಿಲ್ಪಕಲಾವಿದ ಎಂ ವೇಣುಗೋಪಾಲ್ ಆಚಾರ್ಯ : ಸಂಚಿಕೆ - 30
Thursday, March 2, 2023
Edit
ಆರ್ಟ್ ಗ್ಯಾಲರಿ : ಶಿಲ್ಪಕಲಾವಿದ ಎಂ ವೇಣುಗೋಪಾಲ್ ಆಚಾರ್ಯ : ಸಂಚಿಕೆ - 30
ART GALLERY : ನಾಡಿನ ಯುವ ಶಿಲ್ಪಕಲಾವಿದರ ಕಲಾಕೃತಿಗಳ ಪ್ರದರ್ಶನ
◾ಕಲಾವಿದರ ಹೆಸರು : ಎಂ ವೇಣುಗೋಪಾಲ್ ಆಚಾರ್ಯ
Artist Name : M.VENUGOPAL ACHARYA
▪️DOB : 21-08-1984
▪️Designation : Sculptor , SHILPAKALA , Kasargod, Kerala
◾Address :
M.Venugopal Acharya
SHILPAKALA
Krishna Nagar, Kumbala (P.O) 671321
Kasargod (Dist), Kerala (State)
Mob : +91 8547 213 968
Mob : +91 7012 138 571
ನಾಡು ಕಂಡ ಭರವಸೆಯ ಶಿಲ್ಪಿ, ಪ್ರತಿಭಾವಂತ ಕಲಾವಿದ ವೇಣುಗೋಪಾಲ್ ಆಚಾರ್ಯ ಕುಂಬಳೆ. ವೇಣು ಕುಂಬಳೆಯ ಜನಪ್ರಿಯ ಶಿಲ್ಪಿ, ಇತ್ತೀಚೆಗಷ್ಟೇ ಅಗಲಿದ ಎಂಜಿಕೆ ಆಚಾರ್ಯರ ಪುತ್ರ. ತಂದೆಯೇ ಇವರ ಗುರು.
ಮಂಗಳೂರಿನ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಕ್ಷೇತ್ರಕ್ಕೆ ಕಾಲಿಟ್ಟ ಕೆಲವೇ ವರುಷಗಳಲ್ಲಿ ತನ್ನ ನೆಚ್ಚಿನ ಶಿಲ್ಪಕಲಾ ಕ್ಷೇತ್ರದಲ್ಲಿ ಭಿನ್ನ ಹಾದಿ ತುಳಿದ ಪ್ರತಿಭಾವಂತ. ಎಳೆಯ ಹರೆಯದಲ್ಲೇ ಹೆಸರು ಪಡೆದ ಕಲಾವಿದ. ವೇಣು ಪ್ರತಿಭೆ, ಸಾಮರ್ಥ್ಯ ಅರಿಯಬೇಕಿದ್ದರೆ... ವೇಣು ಸೃಜನತೆ ಅರಿಯಬೇಕಿದ್ದರೆ ನೀವೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್ ನೋಡಬೇಕು. ಅಲ್ಲಿರುವ ಗಣಪತಿ, ತೆಂಕು ಬಡಗಿನ ಯಕ್ಷಗಾನ ಶಿಲ್ಪಗಳನ್ನು ನೋಡಬೇಕು.. ಖ್ಯಾತ ರಂಗಕರ್ಮಿ ಜೀವನ್ ರಾಂ ಸುಳ್ಯರ ಸುಳ್ಯದ ರಂಗಮನೆಗೆ ಒಮ್ಮೆ ಹೋಗಬೇಕು.. ಅಲ್ಲಿ ಮನೆಯಂಗಳದಲ್ಲಿ ಮನೆಯಷ್ಟೇ ಎತ್ತರಕ್ಕೆ ನಿರ್ಮಿಸಿರುವ ಆಕರ್ಷಕ ನಟರಾಜ ಶಿಲ್ಪ ವೇಣು ಕೈಗಳಲ್ಲರಳಿದ್ದು.. ಹೀಗೆ ಬಾದಾಮಿ, ಬಸವಕಲ್ಯಾಣ, ತುಮಕೂರು, ಬಳ್ಳಾರಿ, ಧಾರವಾಡ ಸಹಿತ ಕನ್ನಡ ನಾಡಿನ ಉದ್ದಗಲ ವೇಣು ನಿರ್ಮಿಸಿದ ಜನಪ್ರಿಯ ಶಿಲ್ಪಗಳಿವೆ. ಅನೇಕಾನೇಕ ದೇವಾಲಯಗಳು ಇವರ ಕಲ್ಪನೆಯ ಉಬ್ಬು ಶಿಲ್ಪಗಳಿಂದ ಆಕರ್ಷಕವಾಗಿದೆ.
SIZE : 15 Feet
MEDIA : Cement Work
SIZE : 10 Feet
MEDIA : Cement Work
SIZE : 12 Feet
MEDIA : Cement Work
SIZE : 12 Feet
MEDIA : Cement Work
SIZE : 10 Feet
MEDIA : Cement Work
SIZE : 15 Feet
MEDIA : Cement Work
SIZE : 12 Feet
MEDIA : Cement Work
SIZE : 12 Feet
MEDIA : Cement Work
SIZE : 3 Feet
MEDIA : Cement Work
ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ.
ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
M.Venugopal Acharya
SHILPAKALA
Krishna Nagar, Kumbala (P.O) 671321
Kasargod (Dist), Kerala (State)
Mob : +91 8547 213 968
Mob : +91 7012 138 571 ********************************************