
ಕವನ ರಚನೆ : ತನ್ವಿತ್ ರೈ
Wednesday, February 8, 2023
Edit
ಕವನ ರಚನೆ : ತನ್ವಿತ್ ರೈ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ತನ್ವಿತ್ ರೈ ಬರೆದಿರುವ ಕವನ......
ಮೊದಲಾಗಿ ನಿನಗೆ ಮಾಡುವೆ ನಮನ.
ಅಮ್ಮ ನಾ ನಿನ್ನ ಮರೆಯಲಾರೆ
ಎಂದಿಗೂ ನಿನ್ನನ್ನು ಬಿಡಲಾರೆ
ಅಮ್ಮ ನೀನು ಹೇಳಿದ ಮಾತು
ನನ್ನ ಜೀವನಕ್ಕೆ ಕವಚವಾಯಿತು
ನೀನು ನನ್ನ ಮುದ್ದಿನ ಬಂಗಾರ
ನನ್ನನ್ನು ಕಾಯುವ ಕಾವಲುಗಾರ
ಅಮ್ಮಾ ನೀನೆಂದರೆ ನನಗೆ ಇಷ್ಟ
ಸಹಿಸುವೆ ನೀ ನನ್ನ ಕಷ್ಟ
ಒಂಭತ್ತು ತಿಂಗಳು ನೀ ಹೊತ್ತಿರುವೆ
ನಾ ನಿನ್ನ ಹೊಟ್ಟೆಯಲ್ಲಿ ತರಲೆ ಮಾಡಿರುವೆ
ಓ ನನ್ನ ಪ್ರೀತಿಯ ಅಮ್ಮ
ನಿಮಗೆ ಏನು ಕೊಡಲಿ ಹೇಳಮ್ಮ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************