ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 3
Wednesday, February 8, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 3
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಸಾನ್ವಿ ಸಿ ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ನಾನು ಸಾನ್ವಿ ಸಿ ಎಸ್. ನನ್ನ ಶಾಲೆ ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು. ನನ್ನದು ಸರ್ಕಾರಿ ಶಾಲೆ ಅಲ್ಲದಿದ್ದರೂ ನನಗೆ ಕಲಿಕಾ ಹಬ್ಬದಲ್ಲಿ ಭಾಗವಹಿಸುವ ಭಾಗ್ಯ ಸಿಕ್ಕಿತು. ಅದು ಹೇಗೆಂದರೆ ಅಂದು ನನಗೆ ಶಾಲೆಗೆ ರಜೆ ಇದ್ದುದರಿಂದ ಅನಿರೀಕ್ಷಿತವಾಗಿ ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನದಲ್ಲಿ ನಡೆದಂತಹ ಕೊಳ್ನಾಡು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಹೋದೆ.
ಆ ದಿನ ಬೆಳಗ್ಗೆ ಹೋದ ಕೂಡಲೇ ನಮಗೆ ವಿವಿಧ ಬಗೆಯ ಟೊಪ್ಪಿ ಮಾಡಲು ಶಾಂಭವಿ ಮೇಡಂ ಕಲಿಸಿಕೊಟ್ಟರು. ಆಮೇಲೆ ಹಲವಾರು ಪದ್ಯಗಳನ್ನು ಹಾಡಿದೆವು. ಆ ಹಾಡುಗಳಲ್ಲಿ ನನಗೆ ಕಾರಣವಿದೆಯಣ್ಣ ತುಂಬಾ ಇಷ್ಟದ ಹಾಡು ಆಗಿಹೋಯಿತು. ಬಳಿಕ ತಿಂಡಿ ತಿಂದು ಮೆರವಣಿಗೆಯಲ್ಲಿ ಬಂದು ಸಭೆಯಲ್ಲಿ ಕುಳಿತುಕೊಂಡೆ.
ಅಲ್ಲಿ ಅತಿಥಿಗಳ ಭಾಷಣ ಮುಗಿದ ನಂತರ ವಾಟರ್ ರಾಕೆಟ್, ಶ್ಯಾಂಪಿನಿಂದ ಬಬ್ಬಲ್ಸ್ ಮಾಡಲಾಯಿತು. ನಂತರ ನಾನು ಕಾಗದ ಕತ್ತರಿ ಕಾರ್ನರ್ ಗೆ ಹೋದೆ. ಅಲ್ಲಿ ತಾರನಾಥ್ ಕೈರಂಗಳ ಸರ್ ಮುಳ್ಳುಹಂದಿ, ಕಪ್ಪೆ, ತೊಗಲುಗೊಂಬೆ, ಹಕ್ಕಿ, ಬೆಕ್ಕು ಮಾಡಲು ಹೇಳಿಕೊಟ್ಟರು. ಹಾಡು ಆಡು ಕಾರ್ನರ್ ಅಲ್ಲಿ ಟಾಮ್ ಅಂಡ್ ಜೆರ್ರಿ, ಕಡುಬು ಗಣೇಶ, ರಾಣಿಯ ಬಯಕೆ, ಪ್ರಾಸ ಪದ, ಇಟ್ಟಿಗೆ ಪಾದರಕ್ಷೆ, ಪದ ಏಣಿ ಮುಂತಾದ ಆಟಗಳನ್ನು ಶಾಂಭವಿ ಟೀಚರ್ ಹಾಗೂ ಶಶಿ ಟೀಚರ್ ಹೇಳಿಕೊಟ್ಟರು.
ಆಮೇಲೆ ಮಾಡು ಆಡು ಕಾರ್ನರ್ ಅಲ್ಲಿ ಸ್ಕೆಲಿಟನ್, ಟೆಲಿಸ್ಕೋಪ್, ಏರುವ ಹಲ್ಲಿ, 3D ಕನ್ನಡಕ ಮುಂತಾದವುಗಳನ್ನು ಹೇಳಿಕೊಟ್ಟರು. ಊರು ತಿಳಿಯೋಣ ಇದರಲ್ಲಿ ಪರಮೇಶ್ವರ್ ಸರ್ , ಸ್ವಪ್ನಾ ಮೇಡಮ್ ಅವರು ಪರಿಸರದ ಬಗ್ಗೆ ತಿಳಿಸಿ, ಚಾರ್ಟ್ ಮಾಡಿಸಿದರು.
ಬಳಿಕ ಸಿಂಗಾರಿ ಎಕ್ಸ್ಪ್ರೆಸ್ ರೈಲಿನಲ್ಲಿ ನಾವು ಫೋಟೋ ತೆಗೆದೆವು. ಈ ಕಲಿಕಾ ಹಬ್ಬ ನನಗೆ ಮರೆಯಲಾರದಂತಹ ಅನುಭವ ಕೊಟ್ಟಿತು..
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************