
ಕವನ ರಚನೆ : ಸಿಂಚನಾ ಎಸ್ ಶೆಟ್ಟಿ
Monday, February 27, 2023
Edit
ಕವನ ರಚನೆ : ಸಿಂಚನಾ ಎಸ್ ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
ಸಿಂಚನಾ ಎಸ್ ಶೆಟ್ಟಿ ಬರೆದಿರುವ ಕವನ......
ಮಕ್ಕಳ ದಿನಾಚರಣೆ (ಕವನ)
---------------------------
ಅಂತು ಇಂತು ಬಂತು
ಮಕ್ಕಳ ದಿನಾಚರಣೆ
ಮಕ್ಕಳೆಲ್ಲ ಉತ್ಸಾಹದಿಂದೆದ್ದು
ಸಿದ್ಧರಾದರು ಮುಂಜಾನೆ
ದಿನಬೆಳಗಾದರೆ ಸಮವಸ್ತ್ರ
ಧರಿಸುತಿದ್ದ ಮಕ್ಕಳು
ಇಂದು ಬಣ್ಣ ಬಣ್ಣದ
ಚಿಟ್ಟೆಗಳಾಗಿ ಕಾಣಿಸುವರು ಸುತ್ತಲೂ
ಹುಮ್ಮಸ್ಸಿನ ಜೊತೆಗೆ ಸಂತೋಷದ
ನದಿಯಲ್ಲಿ ತೇಲಿ ಹೋಗಿರುವರಿಂದು
ಕೊನೆಗೂ ಆಡಿ ಆಡಿ ಸುಸ್ತಾಗಿ
ಬಿದ್ದುಕೊಂಡರು ಮನೆಗೆ ಬಂದು
..................................... ಸಿಂಚನಾ ಎಸ್ ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
*******************************************
ಅಜ್ಜಿಯ ಮನೆ (ಕವನ)
--------------------
ರಜೆ ಸಿಕ್ಕರೆ ಸಾಕು
ಓಡುವೆವು ಅಜ್ಜಿಯ ಮನೆಗೆ
ಹಿಂತಿರುಗಿ ಬರುವಾಗ ಕರೆದುಕೊಂಡು
ಬರುವೆವು ಅಜ್ಜಿಯನ್ನು ಜೊತೆಗೆ
ಯಾವ ಪಕ್ಷಿಯೂ ಕೂಡ
ಕೋಗಿಲೆಯಷ್ಟು ಇಂಪಾಗಿ ಹಾಡದು
ಅಂದರೆ ಯಾವ ಪ್ರವಾಸ ತಾಣವು
ಅಜ್ಜಿಮನೆಯಷ್ಟು ಖುಷಿ ನೀಡದು
ನಿಷ್ಕಲ್ಮಶವಾದ ಪ್ರೀತಿಗೆ
ಇನ್ನೊಂದು ಹೆಸರೇ ಅಜ್ಜಿ
ಆಹಾ..! ಚಪ್ಪರಿಸಿಕೊಂಡು ತಿನ್ನಬೇಕು
ಆಕೆ ಮಾಡುವ ಬಜ್ಜಿ
ಮಾರ್ಗದರ್ಶನ ನೀಡುವಲ್ಲಿ
ಅಜ್ಜಿಯರದ್ದೇ ಎತ್ತಿದ ಕೈ
ಹೆಮ್ಮೆಯಿಂದ ಹೇಳುವ ನಮ್ಮೆಲ್ಲರ
ಅಜ್ಜಿಯರಿಗೊಂದು ಜೈ
ಅಜ್ಜಿಯ ಮನೆಯಲ್ಲಿದೆ
ಎರಡು ಎಕರೆ ಮಾವಿನ ತೋಟ
ಅದರ ಪಕ್ಕದಲ್ಲಿಯೇ ಇದೆ
ಎಣಿಸಲಾಗದಷ್ಟು ಸಪೋಟ
ಅದ ಕೀಳಲು ಗೆಳೆಯರೊಡನೆ
ಎಲ್ಲಿಲ್ಲದ ಓಟ
ರಜಾ ದಿನಗಳು ಕಳೆದು ಶುರುವಾಗಿದೆ
ಈಗ ಶಾಲೆಯ ಪಾಠ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪಿ ಯು ಕಾಲೇಜು ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
*******************************************