-->
ಕಲಿಕಾ ಹಬ್ಬ : ಮಕ್ಕಳ ಅನಿಸಿಕೆ - 8

ಕಲಿಕಾ ಹಬ್ಬ : ಮಕ್ಕಳ ಅನಿಸಿಕೆ - 8

ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 8
  ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ , ಜಿಲ್ಲೆಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಜನನಿ ಪಿ , 6ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....   
   
        ಮಕ್ಕಳ ಜಗಲಿಯ ಬಳಗಕ್ಕೆ ನನ್ನ ತುಂಬು ಹೃದಯದ ನಮಸ್ಕಾರಗಳು. ನಾನು ಜನನಿ. ಶಿಕ್ಷಕರು ನನ್ನನ್ನು ಕಲಿಕಾ ಹಬ್ಬಕ್ಕೆ ಆಯ್ಕೆ ಮಾಡಿದಾಗ ತುಂಬಾ ಸಂತೋಷವಾಯ್ತು. ನಾವು 31.01.23 ನೇ ತಾರೀಕು ಶಾಲೆಯಿಂದ 8.45ಕ್ಕೆ ಜೀಪಿನಲ್ಲಿ ಹೊರಟೆವು. ಸ ಹಿ. ಪ್ರಾ. ಶಾಲೆ ಸಬಳೂರು ಇಲ್ಲಿ ನಮಗೆ ಕಲಿಕಾ ಹಬ್ಬದಲ್ಲಿ ಮೆರವಣಿಗೆಯ ಜೊತೆ ಹೋಗಿ ಭಾಗವಹಿಸಿ ಹಾಡು, ಹರಟೆ, ಆಟ, ನಾಟಕ, ಕವನ, ಕ್ರಾಪ್ಟ್, ವೀಕ್ಷಣೆ, ಪ್ರಯೋಗ, ಸಮೀಕ್ಷೆ, ಅನ್ವೇಷಣೆ, ಹೀಗೆ ಅನುಭವಾತ್ಮಕ ಕಲಿಕೆಯಲ್ಲಿ ಸಂಭ್ರಮಿಸಿದೆನು. ನಮಗೆ ಇಲ್ಲಿ ದಿನಾಂಕ 31.01.23 ಮತ್ತು 01.02.23 ರಂದು ಎರಡು ದಿನ ತರಬೇತಿ ನಡೆಯಿತು. 
     ಬೇರೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರೊಂದಿಗೆ ಗೆಳೆತನ ಮಾಡುವಂತಹ ಅವಕಾಶ ದೊರೆಯಿತು. ನಾನು ಹಾಡು ಹಾಡಲು, ಕವನ ಬರೆಯಲು, ಕಥೆ ಕಟ್ಟಲು, ಕ್ರಾಪ್ಟ್ ಮಾಡಲು, ಚಿತ್ರ ಮಾಡಲು, ನಕ್ಷೆ ಬಿಡಿಸಲು ಕಲಿತೆನು.  
     ವಿಜ್ಞಾನ ಪ್ರಯೋಗಗಳ ಹಿಂದಿನ ತತ್ವ, ರಾಕೆಟ್ ಉಡಾವಣೆಯ ಹಿಂದಿನ ತತ್ವ, ಕರಕುಶಲ ಕೆಲಸಗಳ ಬಗ್ಗೆ ತಿಳಿದೆನು. ಮಕ್ಕಳ ಕಲಿಕಾ ಹಬ್ಬದಲ್ಲಿ ನಮಗೆ ಬೆಳಗ್ಗಿನ ಉಪಾಹಾರ ನೀಡಿದರು. ಮಧ್ಯಾಹ್ನ ಪಾಯಸದ ಊಟವನ್ನು ನೀಡಿದರು. ಒಟ್ಟಾರೆಯಾಗಿ ಕಲಿಕಾ ಹಬ್ಬವು ನನ್ನ ಜ್ಞಾನವನ್ನು ಹೆಚ್ಚಿಸಿತು. 
      ನಾನು ತುಂಬಾ ಸಂತೋಷವಾಗಿದ್ದೆನು. ಇದರಲ್ಲಿ ಭಾಗವಹಿಸುವುದರಿಂದ ನಾನು ತುಂಬಾ ಚೆನ್ನಾಗಿ ಕಲಿಯುವಂತೆ ಆಯಿತು.
................................................. ಜನನಿ. ಪಿ
6ನೇ ತರಗತಿ 
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ. 
ಕೊಯಿಲ ಕೆ. ಸಿ. ಫಾರ್ಮ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article