ಕಂಪ್ಯೂಟರ್ (ಲೇಖನ) : ದಿಯಾ ಉದಯ್ ಡಿ ಯು
Tuesday, February 21, 2023
Edit
ಲೇಖನ : ದಿಯಾ ಉದಯ್ ಡಿ ಯು.
4ನೇ ತರಗತಿ.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ, ಮೂಲ್ಕಿ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ನಾವು ನಿತ್ಯ ನೋಡುವ ವಸ್ತುಗಳಲ್ಲಿ ಕಂಪ್ಯೂಟರ್ ಸಹ ಒಂದು. ಕಂಪ್ಯೂಟರ್ ಗಳನ್ನು ನಾವು ನೋಡಿದಂತೆ ಮನೆಗಳಲ್ಲಿ, ಶಾಲೆಗಳಲ್ಲಿ, ಬ್ಯಾಂಕುಗಳಲ್ಲಿ, ಆಸ್ಪತ್ರೆಗಳಲ್ಲಿ, ರೈಲ್ವೆ ಸ್ಟೇಷನ್ ಗಳಲ್ಲಿ , ಕಛೇರಿಗಳಲ್ಲಿ, ಅಂಗಡಿಗಳಲ್ಲಿ , ಮಾಲ್ ಗಳಲ್ಲಿ ಹೀಗೆ ಎಲ್ಲ ಕಡೆ ಬಳಸುತ್ತಾರೆ. ನಾವೂ ಕೂಡ ಶಾಲೆಗಳಲ್ಲಿ ಕಂಪ್ಯೂಟರ್ ಕಲಿಯುತ್ತೇವೆ.
ನಾವು ಕಂಪ್ಯೂಟರಗಳಲ್ಲಿ ಅಕ್ಷರಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ, ಬೇರೆ ಬೇರೆ ಗಾತ್ರಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಬರೆಯಬಹುದು, ಲೆಕ್ಕಗಳನ್ನು ಮಾಡಬಹುದು, ಚಿತ್ರಗಳನ್ನು ಮಾಡಬಹುದು, ಭಾವಚಿತ್ರಗಳನ್ನು ಇಡಬಹುದು, ಭಾವಚಿತ್ರಗಳನ್ನು ತೆಗೆಯಬಹುದು, ಗೂಗಲ್ನಿಂದ ನಮಗೆ ಬೇಕಾದ ವಿಷಯಗಳನ್ನು ಹುಡುಕಬಹುದು, ಸಾಮಾಜಿಕ ಜಾಲ ತಾಣಗಳನ್ನು ನೋಡಬಹುದು, ಅಲ್ಲದೇ ಬೇಕಾದ ಇನ್ನು ಹಲವಾರು ಕೆಲಸಗಳನ್ನು ಮಾಡಿ ಫೈಲ್ ಗಳಲ್ಲಿ ಸಂಗ್ರಹಿಸಿ ಇಡಬಹುದು.
ಕಂಪ್ಯೂಟರಗಳು ನಾವೇ ತಯಾರಿಸಿದ ವಸ್ತುಗಳು. ಮೊಬೈಲ್ ಕೂಡ ಕಂಪ್ಯೂಟರ್ ನಂತೆ ಕೆಲಸ ಮಾಡುತ್ತದೆ. ರೋಬೋಟ್ ಗಳು ಮನುಷ್ಯರಂತೆಯೇ ಕೆಲಸ ಮಾಡಬಲ್ಲವು. ಆದರೆ ಕಂಪ್ಯೂಟರ್ ಗಳಿಗೆ ಕರೆಂಟ್ ಬೇಕೇ ಬೇಕು. ಇಲ್ಲದಿದ್ದರೆ ಅವು ಕೆಲಸಮಾಡಲು ಸಾದ್ಯವಿಲ್ಲ. ನಮ್ಮ ಹಾಗೆ ಅವುಗಳಿಗೆ ಕರುಣೆ, ಪ್ರೀತಿ, ದ್ವೇಷ, ಮಮತೆ, ವಂಚನೆ ಯಾವುದೂ ತಿಳಿದಿಲ್ಲ. ಸ್ವಲ್ಪ ತಪ್ಪಿದರೂ ಸಾವು ಖಚಿತ. ನಾವು ಅದನ್ನು ಸರಿಯಾದ ಕ್ರಮದಲ್ಲಿ ಬಳಸಬೇಕು.
4 ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ,
ಮೂಲ್ಕಿ , ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************