-->
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 7

ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 7

ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 7
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ , ಜಿಲ್ಲೆಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಸಿಂಚನಾ ಶೆಟ್ಟಿ , 5ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.... 
   
             ಎಲ್ಲರಿಗೂ ಸಿಂಚನಾ ಮಾಡುವ ನಮಸ್ಕಾರಗಳು. ನಾನಿಂದು ಕಲಿಕಾ ಹಬ್ಬದ ಅನಿಸಿಕೆಗಳನ್ನು ತಮ್ಮ ಮುಂದೆ ಹೇಳುತ್ತಿದ್ದೇನೆ.
      ಮೊದಲು ಮೆರವಣಿಗೆಯಿಂದ ಭವನಕ್ಕೆ ಬಂದೆವು. ನಂತರ ಅರವಿಂದ್ ಕುಡ್ಲ ಇವರು ನಮಗೆ ಚಂದ ಚಂದ ಹಾಡುಗಳನ್ನು ಕಲಿಸಿಕೊಟ್ಟರು.
        ನನಗೆ ಸಿಕ್ಕಿದ ಮೊದಲ ಕಾರ್ನರ್ ಹಾಡು ಆಡು. ಹಾಡು ಆಡು ಕಾರ್ನರ್ ನಲ್ಲಿ ತುಂಬಾ ಆಟಗಳನ್ನು ಆಡಿದೆವು ಮತ್ತು ಹೊಸ ಹೊಸ ಹಾಡುಗಳನ್ನು ಕಲಿತೆ. ನನಗೆ ತುಂಬಾ ಗೆಳೆಯರು ಸಿಕ್ಕಿದರು. ಎರಡು ಗೊಂಬೆಗಳನ್ನು ನಮ್ಮನ್ನು ನಗಿಸುತ್ತಿದ್ದವು. 
     ನನಗೆ ತುಂಬಾ ತುಂಬಾ ಸಂತೋಷವಾಯಿತು. ನಂತರ ಉಪಹಾರದ ವ್ಯವಸ್ಥೆಗಳು ತುಂಬಾ ಚೆನ್ನಾಗಿದ್ದವು. ರುಚಿ ರುಚಿಯಾದ ತಿಂಡಿಗಳು. ನಂತರ ನಾನು ಕಾಗದ ಕತ್ತರಿ ಬಣ್ಣ ಕಾರ್ನರಿಗೆ ಹೋದೆ. ಅಲ್ಲಿ ಒಂದು ಟೋಪಿಯಿಂದ ಆರು ಟೋಪಿಗಳನ್ನು ರಚಿಸುವುದು. ಬೆಕ್ಕು, ಲೇಡಿ ಬಗ್, ಕಪ್ಪೆ ಮಾಡಿದೆವು. 
     ಎರಡನೇ ದಿನವೂ ತುಂಬಾ ಸಂತೋಷವಾಯಿತು. ನಾನು ಮೊದಲು ಊರು ಸುತ್ತೋಣ ಕಾರ್ನರ್ ಗೆ ಹೋದೆ. ಅಲ್ಲಿ ಮರದ ಎತ್ತರ ಕಂಡುಹಿಡಿಯುವುದು ಹೇಗೆ ಎಂದು ಹೇಳಿ ಕೊಟ್ಟರು, ಪರಿಸರದ ಪಯಣ, ಜೀವ ಭಾವ, ನಮ್ಮೂರ ನಕ್ಷೆ, ಮರದ ಅಧ್ಯಯನ ಇತ್ತು. ನಂತರ ಮಾಡು ಆಡು ಕಾರ್ನರ್ ಗೆ ಹೋದೆ. ಅಲ್ಲಿ ತ್ರೀಡಿ ಗ್ಲಾಸ್, ಹಾವು, ಇತ್ಯಾದಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದೆವು ನಂತರ ಪ್ರಯೋಗ ಶಾಲೆಗೆ ಹೋದೆ. ಅಲ್ಲಿ ನೋಡಿದರೆ ತರ ತರದ ಮೀನುಗಳು, ಜೀವಕೋಶಗಳು , ಅಸ್ಥಿ ಪಂಜರ ನೋಡಿದೆ. ನಂತರ ಸೆಲ್ಫಿ ಕಾರ್ನರ್ ಗೆ ಹೋದೆ ಅಲ್ಲಿ ನೋಡಿದರೆ ತೆಂಗಿನ ಚಿಪ್ಪಿನಿಂದ ಅಲಂಕಾರ, ಗೂಡುದೀಪ, ಬಣ್ಣ ಬಣ್ಣದ ಹೂಗಳ ಗುಚ್ಚ.
      ಸಭಾಭವನಕ್ಕೆ ಹೋದೆನು. ನಂತರ ನನ್ನ ಕಲಿಕಾ ಹಬ್ಬದ ಅನಿಸಿಕೆ ಹೇಳಿದೆ. ನಂತರ ಮನೆಗೆ ಬಂದು ನಾನು ಮಾಡಿದ ಕೆಲಸಗಳನ್ನು ಮನೆಯಲ್ಲಿ ಹೇಳಿದೆ. ನನ್ನ ಪೋಷಕರಿಗೆ ತುಂಬಾ ಸಂತೋಷವಾಯಿತು. ಮರುದಿನ ಶಾಲೆಗೆ ಶಾಲೆಯ ಮಕ್ಕಳಿಗೆ ನನ್ನ ಅನುಭವ ಹೇಳಿಕೊಂಡೆನು. 
       ಶಾಲೆಯಲ್ಲಿ ಎಲ್ಲ ಚಟುವಟಿಕೆಗಳನ್ನು ಹೇಳಿಕೊಟ್ಟೆನು. ಮುಂದಿನ ವರ್ಷವೂ ಈ ಕಲಿಕಾ ಹಬ್ಬ ಇರಬೇಕೆಂದು ಹಾರೈಸುತ್ತೇನೆ. ಎಷ್ಟು ಹೇಳಿದರೂ ಕಲಿಕಾ ಹಬ್ಬವನ್ನು ಎರಡು ಮೂರು ವಾಕ್ಯಗಳಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹ ಅವಕಾಶ ಮಾಡಿಕೊಟ್ಟ ತಮಗೆಲ್ಲರಿಗೂ ಧನ್ಯವಾದಗಳು.
.......................................ಸಿಂಚನಾ ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article