-->
ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 6

ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 6

ಲೇಖಕರು : ಶ್ರೀಮತಿ ಮಂಗಲಾ ಕೆ ನಾಯ್ಕ
ಸಹಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ
ಕ್ಲಸ್ಟರ್: ಹೊಲನಗದ್ದೆ
ತಾಲೂಕು : ಕುಮಟಾ
ಜಿಲ್ಲೆ: ಉತ್ತರ ಕನ್ನಡ     
          
          ಸಮಗ್ರ ಶಿಕ್ಷಣ ಕರ್ನಾಟಕವು ಹಮ್ಮಿಕೊಂಡಿರುವ `ಕಲಿಕಾ ಹಬ್ಬ´ ಕಾರ್ಯಕ್ರಮದ ಮಾರ್ಗಸೂಚಿ ಬಂದಾಗ ಇದರ ವ್ಯಾಪ್ತಿ ಹಾಗೂ ಉದ್ದೇಶಗಳನ್ನು ಮನನ ಮಾಡಿಕೊಂಡ ನಮ್ಮ ಹೊಲನಗದ್ದೆ ಕ್ಲಸ್ಟರನ ಕ್ರಿಯಾಶೀಲ ಸಿ ಆರ್ ಪಿ ಯವರಾದ ಶ್ರೀ ಪ್ರದೀಪ ನಾಯಕ ರವರ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ನಾವು ಈ ಹಬ್ಬವನ್ನು ಆಚರಿಸಬೇಕು ಎನ್ನುವ ಆಶಯವನ್ನು ಹೊತ್ತು ಇಲಾಖಾ ನಿಯಮದಂತೆ ನಮ್ಮನ್ನು ತರಬೇತಿಗೆ ಕಳುಹಿಸಿದರು.
     ತರಬೇತಿ ಪಡೆದು ಬಂದ ನಮ್ಮಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತಾ ನಮ್ಮ ಸಹೋದ್ಯೋಗಿ ಶಿಕ್ಷಕರಾದ ಶ್ರೀ ರವೀಂದ್ರ ಭಟ್ಟ ಸೂರಿಯವರ ಹಾಗೂ ಶ್ರೀ ವಿಶ್ವನಾಥ ಪಟಗಾರ ಸರ್ ಅವರ ಬೆಂಬಲದೊಂದಿಗೆ ಕಾರ್ಯಕ್ರಮದ ಸಂಪೂರ್ಣ ಉದ್ದೇಶಗಳನ್ನು ಸಮುದಾಯಕ್ಕೆ ಪರಿಚಯಿಸುತ್ತಾ ದಾನಿಗಳ ಸಹಕಾರವನ್ನು ಪಡೆದು ಕಾರ್ಯಕ್ರಮದ ಯೋಜನೆಯನ್ನು ಸಿದ್ಧಪಡಿಸಿದರು.
       ಜನವರಿ 19 ಹಾಗೂ 20 ರಂದು ಹೊಲನಗದ್ದೆ ಕ್ಲಸ್ಟರ್ ಕಲಿಕಾ ಹಬ್ಬವನ್ನು ನಮ್ಮ ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ದಾನಿಗಳಿಂದ ಪಡೆದ ಹಣದಿಂದ 120 ವಿದ್ಯಾರ್ಥಿಗಳಿಗೂ ಟೀ ಶರ್ಟ್, ಕ್ಯಾಪ್, ಪಟ್ಟಿ ಪೆನ್ನುಗಳು, ಐಸ್ ಕ್ರೀಮ್ ಹಾಗೂ ಉತ್ತಮ ಊಟದ ವ್ಯವಸ್ಥೆಯನ್ನು ನೀಡಿರುತ್ತೇವೆ.
ಎರಡು ದಿನಗಳ ಕಾಲ ವಿದ್ಯಾರ್ಥಿಗಳ ಸಂಭ್ರಮ ಹೇಗಿತ್ತು ಎನ್ನುವುದನ್ನು ಬಾಯಿಂದ ಹೇಳಲು ಸಾಧ್ಯವಿಲ್ಲ. ಒಂದು ಕಾರ್ನರ್ ನಿಂದ ಇನ್ನೊಂದು ಕಾರ್ನರ್ ಗೆ ಬರುವಾಗ ಮಗುವಿನ ಮುಖದಲ್ಲಿ ಹೊಸ ಉತ್ಸಾಹ ತುಂಬಿ ತುಳುಕುತ್ತಿತ್ತು. 
     ನನ್ನ ಮಾಡು ಆಡು ಕಾರ್ನರ್ ನಲ್ಲಿ ಮುಕ್ತಾಯದ ಸಂದರ್ಭದಲ್ಲಿ ಬೇರೆ ಶಾಲೆಯಿಂದ ಬಂದಂತ ಒಬ್ಬ ಮಗು ಹೇಳಿದ ಮಾತು, "ಅಯ್ಯೋ ಮುಗಿದೆ ಹೋಯ್ತಾ, ನಾವೀಗ ಮನೆಗೆ ಹೋಗುವುದ? ಕರೆಂಟ್ ಇಲ್ಲ, ಸ್ವಿಚ್ ಆನ್ ಇದೆ, ಆಮೇಲೆ ಕರೆಂಟು ಬಂದ್ರೆ ಏನು ಮಾಡುವುದು?" ಹೀಗಿತ್ತು.
     ಹೊಸ ವಾತಾವರಣ, ಹೊಸ ಶಾಲೆ, ಹೊಸ ಸಹಪಾಠಿಗಳು, ಹೊಸ ಶಿಕ್ಷಕರ ಜೊತೆ ಕಲಿಯುವ ಮಕ್ಕಳಿಗೆ ಈ ಹಬ್ಬ ತನ್ನದೇ ಶಾಲೆ ಎನ್ನುವ ಕಾಳಜಿಯನ್ನು ವ್ಯಕ್ತಪಡಿಸುವ ಗುಣವನ್ನು ಬೆಳೆಸುತ್ತದೆ. ಧನ್ಯವಾದಗಳು.
............................ ಶ್ರೀಮತಿ ಮಂಗಲಾ ಕೆ ನಾಯ್ಕ
ಸಹಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ
ಕ್ಲಸ್ಟರ್: ಹೊಲನಗದ್ದೆ
ತಾಲೂಕು : ಕುಮಟಾ
ಜಿಲ್ಲೆ: ಉತ್ತರ ಕನ್ನಡ
*****************************************

Ads on article

Advertise in articles 1

advertising articles 2

Advertise under the article