
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 6
Wednesday, February 15, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 6
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಹಿತಶ್ರೀ, 5ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ನನ್ನ ಹೆಸರು ಹಿತಶ್ರೀ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಬಜಿರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ನಮ್ಮಶಾಲೆಯಿಂದ 25 ಮಕ್ಕಳು ಕಲಿಕಾ ಹಬ್ಬವನ್ನು ಆಚರಿಸಲು ವೇಣೂರಿನ ಪ್ರೌಢ ಶಾಲೆಗೆ ಹೋಗಿದ್ದೆವು. ಇತರ ಶಾಲೆಯ ಮಕ್ಕಳೂ ಕಲಿಕಾ ಹಬ್ಬವನ್ನು ಆಚರಿಸಲು ವೇಣೂರು ಶಾಲೆಗೆ ಬಂದಿದ್ದರು. ನಾವು ಹೋದ ಕೂಡಲೇ ಉಪಹಾರ ಸೇವಿಸಿ ಮೆರವಣಿಗೆಯಲ್ಲಿ ಬಾಗಿಯಾದೆವು. ನಮ್ಮ ಶಾಲೆಯ ಎಸ್ ಡಿ ಎಮ್ ಸಿ ಸಮಿತಿಯವರು ಮತ್ತು ತಾಯಂದಿರ ಸಮಿತಿಯವರು ಮತ್ತು ಎಲ್ಲಾ ಶಾಲಾ ಶಿಕ್ಷಕರು ಮೆರವಣಿಗೆಯಲ್ಲಿ ಸೇರಿಕೊಂಡರು.
ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ವೇಣೂರು ಶಾಲೆಯ ಅಕ್ಕಂದಿರು ಸುಂದರವಾದ ಹಾಡುಗಳನ್ನು ಹೇಳಿಕೊಟ್ಟರು. ಹಾಡಿನ ಜೊತೆಗೆ ನೃತ್ಯವನ್ನು ಮಾಡಿದರು. ಅಲ್ಲಿ 4 ಕಾರ್ನರ್ ಗಳು ಇದ್ದವು. ನಮ್ಮ ಬಳಿ ಸಂಖ್ಯೆಯನ್ನು ಹೇಳಿಸಿ ಒಂದೊಂದು ಕಾರ್ನರ್ ಗೆ ಕಳುಹಿಸಿದರು. ಊರು ತಿಳಿಯೋಣ, ಆಡು-ಹಾಡು, ಮಾಡು-ನೋಡು ಮತ್ತು ಕಾಗದ ಕತ್ತರಿಗಳು ಇದ್ದವು. ಮೊದಲು ನಾವು ಊರು ತಿಳಿಯೋಣಕ್ಕೆ ಹೋದೆವು. ಹೆಚ್ ಎಮ್ ಸರ್ ಬಳಿ ಪ್ರಶ್ನೆ ಕೇಳಿ ಸಂದರ್ಶನ ಮಾಡಿದೆವು.
ಮದ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಜೊತೆಗೆ ಪಾಯಸ ಮತ್ತು ಲಡ್ಡು ನೀಡಿದರು. ನಂತರ ಆಡು-ಹಾಡು ಕಾರ್ನರ್ ಗೆ ಹೋದೆವು. ಅಲ್ಲಿ ಶಿಕ್ಷಕರು ಹಾಡು ಹಾಡಿಸಿದರು ಮತ್ತು ಆಟವನ್ನು ಆಡಿಸಿದರು. ಸಂಜೆ ನಮ್ಮ ಶಾಲೆಗೆ ನಮ್ಮ ಶಿಕ್ಷಕರ ಜೊತೆಗೆ ಬಂದೆವು.
ಎರಡನೆ ದಿನ ನಾವು ಉಪಹಾರ ಮುಗಿಸಿ ಕಾರ್ನರ್ ಗೆ ಹೋದೆವು. ಅಲ್ಲಿ ಮೊದಲು ಕಾಗದ ಕತ್ತರಿ ಕಾರ್ನರ್ ಗೆ ಹೋದೆವು. ಅಲ್ಲಿ ನಾವು ಬೆಕ್ಕು. ಕಪ್ಪೆ, ಮೀನು ಮಾಡಿದೆವು. ಮದ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಜೊತೆಗೆ ಪಾಯಸ ಸೇವಿಸಿ. ಮಾಡು-ನೋಡು ಕಾರ್ನರ್ ಗೆ ಹೋದೆವು ಅಲ್ಲಿ ನಾವು ಕನ್ನಡಕ, ಹಲ್ಲಿ ಮುಂತಾದವುಗಳನ್ನು ಕತ್ತರಿಸಿದೆವು. ಕೊನೆಯದಾಗಿ ಸಭಾಕರ್ಯಕ್ರಮ ನಡೆಯಿತು. ಅಲ್ಲಿ ನಮಗೆ ತುಂಬಾ ಸಂತೋಷ ಆಯಿತು. ಮರಳಿ ನಮ್ಮ ಶಾಲೆಗೆ ಬಂದೆವು. ಎರಡು ದಿನದ ಕಲಿಕಾ ಹಬ್ಬದ ಆಚರಣೆಯಲ್ಲಿ ನಮಗೆಲ್ಲರಿಗೂ ಸಂತೋಷ ಆಯಿತು.... ಧನ್ಯವಾದಗಳು
5ನೇ ತರಗತಿ
ಸ. ಉ. ಹಿ. ಪ್ರಾ ಬಜಿರೆ ಶಾಲೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************