ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 5
Monday, February 13, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 5
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ರುತ್ವಿ ಕೆ, 7ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ಎಲ್ಲರಿಗೂ ನನ್ನ ನಮಸ್ಕಾರ. ನನ್ನ ಹೆಸರು ರುತ್ವಿ ಕೆ. ನನಗೆ ಎರಡು ದಿನದ ಕಲಿಕಾ ಹಬ್ಬವನ್ನು ನೋಡಿ ಬಹಳ ಸಂತೋಷವಾಯಿತು. ನಮ್ಮ ಶಾಲೆಯಲ್ಲಿ 31/01/2023 ಮಂಗಳವಾರ ಮತ್ತು 01/02/2023 ಬುಧವಾರ ದಂದು ಕಲಿಕಾ ಹಬ್ಬವು ಬಹಳ ಸಂಭ್ರಮದಿಂದ ನಡೆಯಿತು.
ನನಗೆ ಮೆರವಣಿಗೆಯಲ್ಲಿ ಕೋಲಾಟ ಮಾಡಲು ಇತ್ತು. ನನಗೆ ಮೆರವಣಿಗೆಯಲ್ಲಿ ಕೋಲಾಟ ಮಾಡಲು ನಮ್ಮ ಶಾಲೆಯ ಅಧ್ಯಾಪಕರು ನನಗೆ ಪ್ರೋತ್ಸಾಹ ನೀಡಿದರು. ಒಂದೊಂದು ತರಗತಿಯಲ್ಲಿ ಬೇರೆ ಬೇರೆಯಾದ ಚಟುವಟಿಕೆ ಇತ್ತು. ಊರು ಸುತ್ತೋಣ, ಆಡು ಹಾಡು, ಕಾಗದ ಕತ್ತರಿ, ಇತ್ಯಾದಿ ಚಟುವಟಿಕೆಗಳು ಇದ್ದವು.
ನಮ್ಮ ಶಾಲೆಗೆ 11 ಶಾಲೆಯಿಂದ ಮಕ್ಕಳು ಮತ್ತು ಅಧ್ಯಾಪಕರು ಬಂದಿದ್ದರು. ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸಿದೆವು. ನಮ್ಮ ಶಾಲೆಗೆ ಬೇರೆ ಶಾಲೆಯಿಂದ ಬಂದ ಅಧ್ಯಾಪಕರು ನಮಗೆ ಕ್ರಾಫ್ಟ್ ಹೇಳಿಕೊಟ್ಟರು. ನಾವು ಎಲ್ಲರೂ ಒಟ್ಟುಗೂಡಿ ಹಾಡು ಹೇಳಿದೆವು. ಅದರಲ್ಲಿ ನನಗೆ
ಹಬ್ಬ ಹಬ್ಬ ಹಬ್ಬ...
ಸಂತಸ ಕಲಿಕೆಯ ಹಬ್ಬ.....
ಆ ಹಾಡು ನನಗೆ ತುಂಬಾ ಇಷ್ಟವಾಯಿತು. ನಮ್ಮ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ಇತ್ತು. ಎರಡು ದಿನದ ಕಲಿಕಾ ಹಬ್ಬ ನನಗೆ ತುಂಬಾ ಖುಷಿ ತಂದಿತು.
7ನೇ ತರಗತಿ
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ
ಗೋಳಿತ್ತಟ್ಟು , ಕಡಬ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************