-->
ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 5

ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 5

ಲೇಖಕರು : ನಾಹಿದ ಅಂಜುಂ ಸಿ ಎ 
ಸಹಶಿಕ್ಷಕರು
ಸ ಹಿ ಪ್ರಾ ಶಾಲೆ ಹಂದಿಹಾಳು , ಕೊರ್ಲಗುಂದಿ 
ಬಳ್ಳಾರಿ ಪೂರ್ವ ತಾಲೂಕು , ಬಳ್ಳಾರಿ ಜಿಲ್ಲೆ 
           
              ಕಲಿಕಾ ಹಬ್ಬ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ರಾರಾಜಿಸುತ್ತಿರುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಕಲಿಕಾ ಹಬ್ಬದಲ್ಲಿ ಆಡು- ಹಾಡು, ಮಾಡು-ಆಡು, ಕಾಗದ- ಕತ್ತರಿ- ಬಣ್ಣ, ಊರು-ಸುತ್ತೋಣ ಎಂಬ ಚಟುವಟಿಕೆಗಳು ಮಕ್ಕಳನ್ನು ಮೈಮರೆಯಂತೆ ಮಾಡಿವೆ. ಕಲಿಕಾ ಹಬ್ಬದ ಹಾಡುಗಳಂತೂ ಎಲ್ಲರನ್ನು ರೋಮಾಂಚನ ಗೊಳಿಸುವಂತಿವೆ.
       ಆಡು-ಹಾಡು ಕಾರ್ನರ್ ನ "ಸಲೀಸಾಗಿ ದಾಟು" ಎಂಬ ಚಟುವಟಿಕೆಯು ಮಕ್ಕಳಿಗೆ ತುಂಬಾ ಇಷ್ಟವಾಗಿದೆ, ಇದಲ್ಲದೆ ಇನ್ನಿತರೆ ಭಾಷಾ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಕಲಿಕಾ ಹಬ್ಬದ ಆಟಗಳಲ್ಲಿ "ರಾಣಿಯ ಬಯಕೆ " ಆಟವು ತುಂಬಾ ವಿಶಿಷ್ಟವಾಗಿದೆ, ಇತರೆ ಆಟಗಳು ಮಕ್ಕಳನ್ನು ಉಲ್ಲಾಸದಿಂದ ಪುಟಿಯುವಂತೆ ಮಾಡಿವೆ. 
      ಕ್ರಾಫ್ಟ್ ಅಡಿಯಲ್ಲಿ ಮಕ್ಕಳು ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿದ್ದಾರೆ. ವಿಜ್ಞಾನದ ಸರಳ ಪ್ರಯೋಗಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸಿವೆ. ಪ್ರಶ್ನೆ ಪ್ರಜ್ಞೆ ಯಾಗುವ ನಿಟ್ಟಿನಲ್ಲಿ ಮಕ್ಕಳು ಚಿಂತಿಸಿದ್ದಾರೆ‌. 
     ಊರು- ತಿಳಿಯೋಣ ಚಟುವಟಿಕೆಯಲ್ಲಿ ಮಕ್ಕಳು ಸಂದರ್ಶನ ಮಾಡುವ ಮೂಲಕ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದಾರೆ. ಜೀವ ವೈವಿದ್ಯತೆಯನ್ನು ಅರಿತು ವಿವಿಧ ಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲಿಸಿದ್ದಾರೆ.
        ಒಟ್ಟಾರೆಯಾಗಿ ಹೇಳುವುದಾದರೆ ಕಲಿಕಾ ಹಬ್ಬವು ರಾಜ್ಯದಲ್ಲಿ ತನ್ನ ಝೇಂಕಾರವನ್ನು ಮೊಳಗುತ್ತಿರುವ ಮೂಲಕ ಮಕ್ಕಳಲ್ಲಿ ಕೌತುಕತೆ, ಸೌಂದರ್ಯ ಪ್ರಜ್ಞೆ, ಪ್ರಕೃತಿಯನ್ನು ಮೆಚ್ಚುವ ಮನೋಭಾವ, ಆತ್ಮಸ್ಥೈರ್ಯ, ಸ್ವಾವಲಂಬನೆ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ, ವೈಜ್ಞಾನಿಕ ಮನೋಭಾವ, ಸಹಕಾರ ಇತ್ಯಾದಿ ಗುಣಗಳನ್ನು ಬೆಳೆಸಿದೆ.
     ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲಿಕೆಯ ಅಭಿಪ್ರೇರಣಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರೇರಕಗಳಾಗಿವೆ. ಈ ಚಟುವಟಿಕೆಗಳನ್ನು ಶಾಲೆಯಲ್ಲಿ ಅನುಷ್ಠಾನಗೊಳಿಸಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಹಾಗಾಗಿ ಶಿಕ್ಷಕರಾದ ನಾವು ಕಲಿಕಾ ಹಬ್ಬದ ಕೈಪಿಡಿಯನ್ನು ಅಧ್ಯಯನ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ. "ನೋ ಬ್ಯಾಗ್ ಡೇ" ದಿನ ಈ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸುತ್ತೇವೆ ಎಂಬ ಸದುದ್ದೇಶದೊಂದಿಗೆ ನನ್ನ ಅನಿಸಿಕೆಗೆ ವಿರಾಮ ಹೇಳುತ್ತೇನೆ , ಧನ್ಯವಾದಗಳು
................................... ನಾಹಿದ ಅಂಜುಂ ಸಿ ಎ
ಸಹಶಿಕ್ಷಕರು
ಸ ಹಿ ಪ್ರಾ ಶಾಲೆ ಹಂದಿಹಾಳು , ಕೊರ್ಲಗುಂದಿ 
ಬಳ್ಳಾರಿ ಪೂರ್ವ ತಾಲೂಕು , ಬಳ್ಳಾರಿ ಜಿಲ್ಲೆ
*********************************************


Ads on article

Advertise in articles 1

advertising articles 2

Advertise under the article